ನವದೆಹಲಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಲು ಅರ್ಹತೆ ಪಡೆದುಕೊಂಡಿದ್ದ ಭಾರತೀಯ ಕುಸ್ತಿಪಟು ಸುಮಿತ್ ಮಲಿಕ್ ಮೇಲೆ ಇದೀಗ 2 ವರ್ಷಗಳ ನಿರ್ಬಂಧ ಹೇರಲಾಗಿದೆ. ಭಾರತೀಯ ಕುಸ್ತಿ ಫೆಡರೇಶನ್ ಈ ನಿರ್ಧಾರ ಕೈಗೊಂಡಿದೆ.
ಬಲ್ಗೇರಿಯಾ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಕುಸ್ತಿಪಟು ಟೋಕಿಯೋ ಒಲಿಂಪಿಕ್ಸ್ ಆರಂಭಗೊಳ್ಳಲು ಕೇವಲ 21 ದಿನಗಳು ಬಾಕಿ ಉಳಿದಿದ್ದು, ಭಾರತದ ಕ್ರೀಡಾಪಟುಗಳು ಮುಂದಿನ ವಾರ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಈ ಮಧ್ಯೆ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಈ ನಿರ್ಬಂಧ ಹಾಕಿ ಆದೇಶ ಹೊರಡಿಸಿದೆ.
ಇದನ್ನೂ ಓದಿರಿ: 17 ವರ್ಷದ ಕನಸು ನನಸು: ಆಂಜನೇಯನ ದೇಗುಲ ನಿರ್ಮಿಸಿದ ಅರ್ಜುನ್ ಸರ್ಜಾ
ಯಾವ ಕಾರಣಕ್ಕಾಗಿ ಬ್ಯಾನ್?
ಕಳೆದ ಕೆಲವು ದಿನಗಳ ಹಿಂದೆ ಬಲ್ಗೇರಿಯಾದಲ್ಲಿ ನಡೆದಿದ್ದ 125 ಕೆ.ಜಿ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಲಿಕ್ ಉದ್ದೀಪನ ಮದ್ದು ಸೇವಿಸಿದ್ದು ಖಚಿತಗೊಂಡಿತ್ತು. ಇದೀಗ ಅದರ ಬಿ ಸ್ಯಾಂಪಲ್ ರಿಪೋರ್ಟ್ ಬಂದಿರುವ ಕಾರಣ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2018ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗಿಯಾಗಿದ್ದ ಸುಮಿತ್ ಮಲಿಕ್ ಬಂಗಾರದ ಪದಕ ಗೆದ್ದಿದ್ದರು. ಇದಾದ ಬಳಿಕ ಬಲ್ಗೇರಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾಗಿಯಾಗಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿದ್ದರು.
ಈ ಹಿಂದೆ ರಿಯೋ ಒಲಿಂಪಿಕ್ಸ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಅವರ ಮೇಲೆ 4 ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆಗಸ್ಟ್ 8ರವರೆಗೆ ನಡೆಯಲಿದೆ. ಕಳೆದ ವರ್ಷ ನಡೆಯಬೇಕಾಗಿದ್ದ ಈ ಕ್ರೀಡಾಕೂಟ ಕೋವಿಡ್ ಕಾರಣ ಒಂದು ವರ್ಷ ಮುಂದೂಡಿಕೆಯಾಗಿತ್ತು.