ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​ನಲ್ಲಿ ಮುಂದುವರಿದ ಕೊರೊನಾರ್ಭಟ : 5 ಅಥ್ಲೀಟ್​ಗಳು ಸೇರಿದಂತೆ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ - ವಾಲೆಂಟೀರ್​

ಭಾನುವಾರ ದಕ್ಷಿಣ ಆಫ್ರಿಕಾದ ಫುಟ್​ಬಾಲ್​ ಆಟಗಾರರಿಬ್ಬರಿಗೆ ಮತ್ತು ವಿಡಿಯೋ ಆನಾಲಿಸ್ಟ್​ ಒಬ್ಬರಿಗೆ ಪಾಸಿಟಿವ್ ದೃಢಪಟ್ಟಿತ್ತು. ಸೋಮವಾರ ಜೆಕ್​ ಗಣರಾಜ್ಯದ ವಾಲಿಬಾಲ್ ಆಟಗಾರ ಮತ್ತು ಅಮೆರಿಕದ ಜಿಮ್ನಾಸ್ಟ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ಟೋಕಿಯೋ ಒಲಿಂಪಿಕ್ಸ್ 2020
ಟೋಕಿಯೋ ಒಲಿಂಪಿಕ್ಸ್ 2020

By

Published : Jul 20, 2021, 3:28 PM IST

ಟೋಕಿಯೋ(ಜಪಾನ್​): ಕ್ರೀಡಾ ಗ್ರಾಮದಲ್ಲಿ ಮೂವರು ಸೇರಿದಂತೆ 5 ಆಥ್ಲೀಟ್​ಗಳಿಗೆ ಕೋವಿಡ್​ 19 ಸೋಂಕು ತಗುಲಿದೆ. ಇದೀಗ ಮಂಗಳವಾರ ಸ್ವಯಂ ಸೇವಕರೊಬ್ಬರಿಗೆ(ಗೇಮ್ಸ್ ವಾಲಂಟೀರ್​) ಪಾಸಿಟಿವ್ ದೃಢಪಟ್ಟಿದೆ ಎಂದು ಒಲಿಂಪಿಕ್ ಆಯೋಜಕರು ಇಂದು ಘೋಷಿಸಿದ್ದಾರೆ.

ಸೋಮವಾರದವರೆಗೆ ಐವರು ಅಥ್ಲೀಟ್​ಗಳಿಗೆ ಕೋವಿಡ್ 19 ಸೋಂಕು ತಗುಲಿರುವುದಾಗಿ ಮತ್ತು ಅದರಲ್ಲಿ ಮೂವರು ಕ್ರೀಡಾಗ್ರಾಮದಲ್ಲಿ ಇದ್ದರೆಂದು ಆಯೋಜಕರು ತಿಳಿಸಿದ್ದರು. ಇದೀಗ ಇವಾಟೆ ಪ್ರಾಂತ್ಯದ ವಾಲಂಟೀರ್ ಒಬ್ಬರಿಗೆ ಪಾಸಿಟಿವ್ ತಗುಲಿದ್ದು, ಒಟ್ಟಾರೆ ಒಲಿಂಪಿಕ್ಸ್​ನಲ್ಲಿ ಇಲ್ಲಿಯವರೆಗೆ ಸೋಂಕಿಗೆ ತುತ್ತಾಗಿರುವವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.

ಸ್ವಯಂ ಸೇವಕರು ವಿಶ್ವ ಒಕ್ಕೂಟದಲ್ಲಿ ನೇರವಾಗಿ ಕಾರ್ಯಾಚರಣೆಗಳಿಗೆ ಒಳಗಾಗಿದ್ದು, ಅವರು ಇವೆಂಟ್ ಆಯೋಜನೆಗೂ ಮುನ್ನ ಮತ್ತು ನಡೆಯುವಾಗ ಅಭಿಮಾನಿಗಳಲ್ಲಿ ಉತ್ಸಾಹವನ್ನುಂಟು ಮಾಡಲು ಮತ್ತು ಆಥ್ಲೀಟ್​ಗಳಿಗೆ ನೆರವಾಗುವ ಕಾರ್ಯವನ್ನು ಮಾಡುತ್ತಿರುತ್ತಾರೆ.

ಭಾನುವಾರ ದಕ್ಷಿಣ ಆಫ್ರಿಕಾದ ಫುಟ್​ಬಾಲ್​ ಆಟಗಾರರಿಬ್ಬರಿಗೆ ಮತ್ತು ವಿಡಿಯೋ ಆನಾಲಿಸ್ಟ್​ ಒಬ್ಬರಿಗೆ ಪಾಸಿಟಿವ್ ದೃಢಪಟ್ಟಿತ್ತು. ಸೋಮವಾರ ಜೆಕ್​ ಗಣರಾಜ್ಯದ ವಾಲಿಬಾಲ್ ಆಟಗಾರ ಮತ್ತು ಅಮೆರಿಕದ ಜಿಮ್ನಾಸ್ಟ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ಟೋಕಿಯೋದಲ್ಲಿ ಮಹಾಕ್ರೀಡಾಕೂಟ ಜುಲೈ 23ರಿಂದ ಆಗಸ್ಟ್​ 8ರವರೆಗೆ ನಡೆಯಲಿದೆ. ಸ್ಥಳೀಯರ ವಿರೋಧದ ನಡುವೆ ನಡೆಯುತ್ತಿರುವ ಈ ಕ್ರೀಡಾಕೂಟಕ್ಕೆ ಕೋವಿಡ್​ 19 ಸಮಸ್ಯೆಯೊಡ್ಡುತ್ತಿದ್ದು, ಮಾರಕ ಸೋಂಕನ್ನು ಆಯೋಜಕರು ಹೇಗೆ ನಿಯಂತ್ರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ:Tokyo Olympics: ಭಾರತೀಯ ಬ್ಯಾಡ್ಮಿಂಟನ್​ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು..

ABOUT THE AUTHOR

...view details