ಹೈದರಾಬಾದ್: 2022ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನಾ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. ಭಾರತದ ಬಾಕ್ಸಿಂಗ್ ಫೆಡರೇಶನ್ನಿಂದ ತಾವು ಮಾನಸಿಕ ಕಿರುಕುಳ ಅನುಭವಿಸಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತದ ಬಾಕ್ಸಿಂಗ್ ಫೆಡರೇಶನ್(ಬಿಎಫ್ಐ) ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಲವ್ಲಿನಾ ಬೊರ್ಗೊಹೈನ್ ಟ್ವೀಟರ್ನಲ್ಲಿ ಬರೆದುಕೊಂಡಿದ್ದೇನು?:ಭಾರತ ಬಾಕ್ಸಿಂಗ್ ಫೆಡರೇಶನ್ ತನ್ನೊಂದಿಗೆ ಕೊಳಕು ರಾಜಕೀಯ ಮಾಡುತ್ತಿದೆ ಎಂದಿರುವ ಬಾಕ್ಸರ್, ನನ್ನ ಮೇಲೆ ಕಿರುಕುಳ ನಡೆಯುತ್ತಿದೆ ಎಂದು ಬಹಿರಂಗಪಡಿಸಲು ಬಯಸುತ್ತೇನೆ. ಇದು ಅತ್ಯಂತ ದುಃಖದ ಸಂಗತಿ. ಒಲಿಂಪಿಕ್ನಲ್ಲಿ ಪದಕ ಗೆಲ್ಲಲು ಸಹಾಯ ಮಾಡಿದ ತರಬೇತುದಾರರನ್ನ ತೆಗೆದುಹಾಕಲಾಗಿದೆ. ಇದರಿಂದ ನನ್ನ ತರಬೇತಿಗೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತರಬೇತುದಾರ ಸಂಧ್ಯಾ ಗುರುಂಗ್ಜಿ ಅವರನ್ನ ತರಬೇತಿ ಶಿಬಿರದಲ್ಲಿ ಸೇರಿಸಿಕೊಳ್ಳಲು ಮನವಿ ಮಾಡಿದ್ದೆ. ಆದರೆ, ತಡವಾಗಿ ಸೇರಿಸಲಾಗಿದೆ. ತರಬೇತಿ ಶಿಬಿರಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇನೆ. ಇದರಿಂದ ನನ್ನ ತರಬೇತಿಗೆ ತೊಂದರೆಯಾಗ್ತಿದೆ. ನನ್ನ ತರಬೇತುದಾರರನ್ನ ಕಾಮನ್ವೆಲ್ತ್ ಗ್ರಾಮದಿಂದ ಹೊರಗಿಡಲಾಗಿದೆ.