ಕರ್ನಾಟಕ

karnataka

ETV Bharat / sports

Tokyo Olympics:ಕ್ರೀಡಾಗ್ರಾಮಕ್ಕೆ ತೆರಳಿದ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ತಂಡ - ಪಿವಿ ಸಿಂಧು

ಭಾನುವಾರ ಅಮಿತ್ ಪಂಘಲ್ ಮತ್ತು ಮೇರಿ ಕೋಮ್ ಅವರನ್ನು ಒಳಗೊಂಡ ಬಾಕ್ಸಿಂಗ್ ತಂಡ ಇಟಲಿಯಿಂದ ಟೋಕಿಯೊಗೆ ಆಗಮಿಸಿದೆ. ಭಾರತೀಯ ಬಾಕ್ಸರ್​ಗಳ ಮಹಾ ಕ್ರೀಡಾಕೂಟದಲ್ಲಿ ಪದಕ ಪಡೆಯುವ ನಿಟ್ಟಿನಲ್ಲಿ ಇಟಲಿಯಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ. ಅವರು ಶನಿವಾರ ಇಟಲಿಯಿಂದ ಹೊರಟಿದ್ದರು..

ಟೋಕಿಯೋ ಒಲಿಂಪಿಕ್ಸ್
ಟೋಕಿಯೋ ಒಲಿಂಪಿಕ್ಸ್

By

Published : Jul 18, 2021, 4:49 PM IST

ಟೋಕಿಯೋ :ಭಾರತ ಒಲಿಂಪಿಕ್ಸ್ ಗುಂಪು ವಿಭಾಗವಾಗಿದ್ದು, ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಮತ್ತು ಟೇಬಲ್ ಟೆನಿಸ್ ತಂಡ ಭಾನುವಾರ ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್​ಗಾಗಿ ಕ್ರೀಡಾ ಗ್ರಾಮಕ್ಕೆ ತೆರಳಿದೆ.

2020ರ ಒಲಿಂಪಿಕ್ಸ್​ಗೆ ಒಟ್ಟು 127 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಇಷ್ಟು ಅಥ್ಲೀಟ್​ಗಳು ಒಲಿಂಪಿಕ್ಸ್​ಗೆ ಭಾಗವಹಿಸುತ್ತಿರುವುದು ಇದೇ ಮೊದಲಾಗಿದೆ. ಭಾನುವಾರ 54 ಕ್ರೀಡಾಪಟುಗಳು ಸೇರಿದಂತೆ ಒಟ್ಟು 88 ಮಂದಿ ಟೋಕಿಯೋಗೆ ತೆರಳಿದ್ದರು.

ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ(ಅರ್ಚರಿ), ಹಾಕಿ, ಜೂಡೋ, ಈಜು, ವೇಟ್‌ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್ ಮತ್ತು ಟೇಬಲ್ ಟೆನಿಸ್​ ಸೇರಿದಂತೆ ಎಂಟು ವಿಭಾಗದ ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿ ಭಾನುವಾರ ಟೋಕಿಯೊಗೆ ಆಗಮಿಸಿದರು. ಟೋಕಿಯೊ ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಎಲ್ಲರೂ ಪರೀಕ್ಷಿಗೆ ಒಳಗಾಗಿದ್ದರು. ಇಂದು ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ತುಕಡಿಯನ್ನು ಗೇಮ್ಸ್ ವಿಲೇಜ್‌ಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಭಾನುವಾರ ಅಮಿತ್ ಪಂಘಲ್ ಮತ್ತು ಮೇರಿ ಕೋಮ್ ಅವರನ್ನು ಒಳಗೊಂಡ ಬಾಕ್ಸಿಂಗ್ ತಂಡ ಇಟಲಿಯಿಂದ ಟೋಕಿಯೊಗೆ ಆಗಮಿಸಿದೆ. ಭಾರತೀಯ ಬಾಕ್ಸರ್​ಗಳ ಮಹಾ ಕ್ರೀಡಾಕೂಟದಲ್ಲಿ ಪದಕ ಪಡೆಯುವ ನಿಟ್ಟಿನಲ್ಲಿ ಇಟಲಿಯಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ. ಅವರು ಶನಿವಾರ ಇಟಲಿಯಿಂದ ಹೊರಟಿದ್ದರು.

ಪುರುಷರ ಬಾಕ್ಸಿಂಗ್ ತಂಡದಲ್ಲಿ ಒಲಿಂಪಿಕ್ಸ್ ಸೀಡ್​ನಲ್ಲಿ ನಂಬರ್ ಒನ್ ಆಗಿರುವ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಪಂಘಲ್ (52 ಕೆಜಿ), ಮನೀಶ್ ಕೌಶಿಕ್ (63 ಕೆಜಿ), ವಿಕಾಸ್ ಕ್ರಿಶನ್(ಕೃಷ್ಣಾ) (69 ಕೆಜಿ), ಆಶಿಶ್ ಕುಮಾರ್ (75 ಕೆಜಿ), ಮತ್ತು ಸತೀಶ್ ಕುಮಾರ್ (+ 91 ಕೆಜಿ) ಮತ್ತು ಮಹಿಳೆಯರ ವಿಭಾಗದಲ್ಲಿ ಮೇರಿ ಕೋಮ್ (51 ಕೆಜಿ), ಸಿಮ್ರಾಂಜಿತ್ ಕೌರ್ (60 ಕೆಜಿ), ಲೋವ್ಲಿನಾ ಬೊರ್ಗೊಹೈನ್ (69 ಕೆಜಿ) ಮತ್ತು ಪೂಜಾ ರಾಣಿ (75 ಕೆಜಿ) ಇದ್ದಾರೆ.

ಇದನ್ನು ಓದಿ:Tokyo Olympics: ಒಲಿಂಪಿಕ್ಸ್ ಗ್ರಾಮದಲ್ಲಿ ಮೂವರು ಅಥ್ಲೀಟ್​ಗಳಿಗೆ ಕೋವಿಡ್‌ ಸೋಂಕು

ABOUT THE AUTHOR

...view details