ಕರ್ನಾಟಕ

karnataka

ETV Bharat / sports

ಟೋಕಿಯೋ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ.. - ಒಲಿಂಪಿಕ್ಸ್ ವೇಳಾಪಟ್ಟಿ

32ನೇ ಒಲಿಂಪಿಕ್ಸ್​ಗೆ ಭಾರತದಿಂದ 120ಕ್ಕೂ ಹೆಚ್ಚು ಕ್ರೀಡಾಪಟುಗಳು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ನಾಳೆ (ಜುಲೈ 23)ಯಿಂದ ಕ್ರೀಡಾಕೂಟ ಆರಂಭಗೊಳ್ಳಲಿದೆ. ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸುವ 18 ವಿವಿಧ ಕ್ರೀಡೆಗಳು, ಕ್ರೀಡಾಪಟುಗಳ ವಿವರ ಹಾಗು ಸ್ಪರ್ಧೆ ನಡೆಯುವ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ..

Tokyo Olympics
ಟೋಕಿಯೋ ಒಲಿಂಪಿಕ್ಸ್​ 2020 ವೇಳಾಪಟ್ಟಿ

By

Published : Jul 22, 2021, 5:28 PM IST

Updated : Jul 24, 2021, 4:25 PM IST

ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ಭಾರತದಿಂದ ತೆರಳಿರುವ 120ಕ್ಕೂ ಹೆಚ್ಚು ಅಥ್ಲೀಟ್​ಗಳು 18 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ ಕ್ರೀಡಾಪಟುಗಳು ಕ್ರೀಡಾ ಮಹಾಮೇಳಕ್ಕೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಬಹುಪಾಲು ಕ್ರೀಡಾಪಟುಗಳು ಪದಕ ಗೆಲ್ಲುವ ತವಕದಲ್ಲಿದ್ದಾರೆ.

ಭಾರತದ ಕ್ರೀಡಾಪಟುಗಳು ಯಾವ ದಿನದಂದು ಸ್ಪರ್ಧಿಸುತ್ತಾರೆ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ..

1. ಅರ್ಚರಿ

ಜುಲೈ 23: ಪುರುಷರು, ಮಹಿಳೆಯರ ವೈಯಕ್ತಿಕ ಅರ್ಹತಾ ಸುತ್ತುಗಳು - ಬೆಳಿಗ್ಗೆ 5:30

ಜುಲೈ 24: ಮಿಶ್ರ ತಂಡ ಎಲಿಮಿನೇಷನ್ಸ್, ಪದಕ ಪಂದ್ಯಗಳು - ಅತನು ದಾಸ್, ದೀಪಿಕಾ ಕುಮಾರಿ - ಬೆಳಿಗ್ಗೆ 6 ಗಂಟೆ

ಜುಲೈ 26: ಪುರುಷರ ತಂಡ ಎಲಿಮಿನೇಷನ್ಸ್, ಪದಕ ಪಂದ್ಯಗಳು - ಅತನು ದಾಸ್, ಪ್ರವೀಣ್ ಜಾಧವ್, ತರುಂದೀಪ್ ರೈ - ಬೆಳಿಗ್ಗೆ 6 ಗಂಟೆ

ಜುಲೈ 27 ರಿಂದ 30: ಪುರುಷರ ಮತ್ತು ಮಹಿಳೆಯರ ವೈಯಕ್ತಿಕ ಎಲಿಮಿನೇಷನ್‌ಗಳು, ಪದಕ ಪಂದ್ಯಗಳು

2. ಅಥ್ಲೆಟಿಕ್ಸ್​

ಜುಲೈ 30:ಪುರುಷರ 3000 ಮೀಟರ್​ ಸ್ಟೀಪಲ್‌ಚೇಸ್ ಹೀಟ್ಸ್ - ಬೆಳಿಗ್ಗೆ 5:47 (ಅವಿನಾಶ್ ಸಬ್ಲೆ)

ಪುರುಷರ 400 ಮೀ ಹರ್ಡಲ್ಸ್ ಹೀಟ್ಸ್ - ಬೆಳಿಗ್ಗೆ 7:25 (ಜಬೀರ್ ಎಂ. ಪಳ್ಳಿಯಲಿಲ್)

ಜುಲೈ 31: ಮಹಿಳಾ ಡಿಸ್ಕಸ್ ಥ್ರೋ ಅರ್ಹತಾ ಪಂದ್ಯಗಳು - ಬೆಳಿಗ್ಗೆ 6 ಗಂಟೆ (ಕಮಲ್‌ಪ್ರೀತ್ ಕೌರ್, ಸೀಮಾ ಪುನಿಯಾ)

ಪುರುಷರ ಲಾಂಗ್ ಜಂಪ್ ಅರ್ಹತಾ ಪಂದ್ಯಗಳು - ಮಧ್ಯಾಹ್ನ 3:40 (ಮುರಳಿ ಶ್ರೀಶಂಕರ್)

ಮಹಿಳೆಯರ 100 ಮೀಟರ್​ ಸೆಮಿಫೈನಲ್ (ದ್ಯುತಿ ಅರ್ಹತೆ ಪಡೆದರೆ) - ಮಧ್ಯಾಹ್ನ 3:45

4x400 ಮೀಟರ್​ ಮಿಕ್ಸೆಡ್​ ರಿಲೇ ಚಿನ್ನದ ಪದಕ ಪಂದ್ಯ (ಭಾರತ ಅರ್ಹತೆ ಪಡೆದರೆ) - ಸಾಯಂಕಾಲ 6:05

ಮಹಿಳೆಯರ 100 ಮೀ ಚಿನ್ನದ ಪದಕ ಪಂದ್ಯ (ದ್ಯುತಿ ಅರ್ಹತೆ ಪಡೆದರೆ) -ಸಾಯಂಕಾಲ 6:20

ಆಗಸ್ಟ್​ 2:

  • ಪುರುಷರ ಲಾಂಗ್ ಜಂಪ್ ಫೈನಲ್ (ಭಾರತ ಅರ್ಹತೆ ಪಡೆದರೆ) - ಬೆಳಿಗ್ಗೆ 6:50
  • ಮಹಿಳೆಯರ 200 ಮೀ ಹೀಟ್ಸ್ - ಬೆಳಿಗ್ಗೆ 7 (ದ್ಯುತಿ ಚಾಂದ್)
  • ಮಹಿಳಾ ಡಿಸ್ಕಸ್ ಥ್ರೋ ಚಿನ್ನದ ಪದಕ ಪಂದ್ಯ (ಭಾರತ ಅರ್ಹತೆ ಪಡೆದರೆ) - ಸಂಜೆ 5:30
  • ಪುರುಷರ ಸ್ಟೀಪಲ್‌ಚೇಸ್ ಚಿನ್ನದ ಪದಕ ಪಂದ್ಯ (ಭಾರತ ಅರ್ಹತೆ ಪಡೆದರೆ) - ಸಂಜೆ 5:45

ಆಗಸ್ಟ್​ 3

  • ಮಹಿಳೆಯರ ಜಾವೆಲಿನ್ ಥ್ರೋ ಅರ್ಹತಾ ಪಂದ್ಯಗಳು - ಬೆಳಿಗ್ಗೆ 5:50 (ಅನ್ನು ರಾಣಿ)
  • ಪುರುಷರ 400 ಮೀಟರ್​ ಹರ್ಡಲ್ಸ್ ಚಿನ್ನದ ಪದಕ ಪಂದ್ಯ (ಭಾರತ ಅರ್ಹತೆ ಪಡೆದರೆ) - ಬೆಳಿಗ್ಗೆ 8:50
  • ಪುರುಷರ ಶಾಟ್‌ಪುಟ್ ಅರ್ಹತೆ - ಸಂಜೆ 5:45 (ತಾಜಿಂದರ್ ಪಾಲ್ ಸಿಂಗ್ ಟೂರ್)
  • ಮಹಿಳೆಯರ 200 ಮೀ ಫೈನಲ್ (ಭಾರತ ಅರ್ಹತೆ ಪಡೆದರೆ) - ಸಂಜೆ 6:20
  • ಆಗಸ್ಟ್ 4: ಪುರುಷರ ಜಾವೆಲಿನ್ ಥ್ರೋ ಅರ್ಹತೆ - ಸಂಜೆ 5:35 PM (ನೀರಜ್ ಚೋಪ್ರಾ)
  • ಆಗಸ್ಟ್ 5: ಪುರುಷರ ಶಾಟ್ ಪುಟ್ ಚಿನ್ನದ ಪದಕ ಪಂದ್ಯ (ಭಾರತ ಅರ್ಹತೆ ಪಡೆದರೆ) - ಬೆಳಿಗ್ಗೆ 7:35
  • ಪುರುಷರ 20 ಕಿ.ಮೀ ರೇಸ್ ವಾಕ್ ಚಿನ್ನದ ಪದಕ ಪಂದ್ಯ - ಮಧ್ಯಾಹ್ನ 1:00 (ಸಂದೀಪ್ ಕುಮಾರ್, ರಾಹುಲ್ ರೋಹಿಲಾ ಮತ್ತು ಇರ್ಫಾನ್ ಕೊಲೊತುಮ್ ಥೋಡಿ)

ಆಗಸ್ಟ್ 6:

  • ಪುರುಷರ 50 ಕಿ.ಮೀ ರೇಸ್ ವಾಕ್ ಚಿನ್ನದ ಪದಕ ಪಂದ್ಯ -ಬೆಳಿಗ್ಗೆ 2 ರಿಂದ 7:30 ವರೆಗೆ (ಗುರ್‌ಪ್ರೀತ್ ಸಿಂಗ್)
  • ಮಹಿಳೆಯರ 20 ಕಿ.ಮೀ ರೇಸ್ ವಾಕ್ ಚಿನ್ನದ ಪದಕ ಪಂದ್ಯ - ಮಧ್ಯಾಹ್ನ 1 ಗಂಟೆಗೆ (ಪ್ರಿಯಾಂಕಾ ಗೋಸ್ವಾಮಿ, ಭಾವನಾ ಜಟ್)
  • ಮಹಿಳಾ ಜಾವೆಲಿನ್ ಥ್ರೋ ಚಿನ್ನದ ಪದಕ ಪಂದ್ಯ (ಭಾರತ ಅರ್ಹತೆ ಪಡೆದರೆ) - ಸಂಜೆ 5:20

ಆಗಸ್ಟ್ 7: ಪುರುಷರ ಜಾವೆಲಿನ್ ಥ್ರೋ ಫೈನಲ್ (ಭಾರತ ಅರ್ಹತೆ ಪಡೆದರೆ) - ಸಂಜೆ 4:30

3. ಬ್ಯಾಡ್ಮಿಂಟನ್

ಜುಲೈ 30:

  • ಪುರುಷರ ಸಿಂಗಲ್ಸ್ ರೌಂಡಪ್‌ 16 : ಬೆಳಿಗ್ಗೆ 5:30 ಮತ್ತು ರಾತ್ರಿ 12 (ಬಿ ಸಾಯಿ ಪ್ರಣೀತ್)
  • ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ - ಬೆಳಿಗ್ಗೆ 5:30 (ಸಾತ್ವಿಕ್​ ಸಾಯಿರಾಜ್ ರಾಂಕಿರೆಡ್ಡಿ / ಚಿರಾಗ್ ಶೆಟ್ಟಿ)
  • ಮಹಿಳಾ ಸಿಂಗಲ್ಸ್ ರೌಂಡ್-ಅಪ್‌ -16 - ರಾತ್ರಿ 12 (ಪಿವಿ ಸಿಂಧು)

ಜುಲೈ 31:

  • ಪುರುಷರ ಡಬಲ್ಸ್ ಸೆಮಿಫೈನಲ್ - ಬೆಳಿಗ್ಗೆ 5:30 (ಭಾರತ ಅರ್ಹತೆ ಪಡೆದರೆ)
  • ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ - ಮಧ್ಯಾಹ್ನ 3:30 (ಭಾರತ ಅರ್ಹತೆ ಪಡೆದರೆ)

ಆಗಸ್ಟ್ 1:

  • ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ - ಬೆಳಿಗ್ಗೆ 9:30 (ಭಾರತ ಅರ್ಹತೆ ಪಡೆದರೆ)
  • ಮಹಿಳಾ ಸಿಂಗಲ್ಸ್ ಸೆಮಿಫೈನಲ್ - ಸಂಜೆ 5 (ಭಾರತ ಅರ್ಹತೆ ಪಡೆದರೆ)
  • ಪುರುಷರ ಡಬಲ್ಸ್ ಕಂಚಿನ ಪದಕ ಪಂದ್ಯ - ಸಂಜೆ 5

ಆಗಸ್ಟ್ 2:

  • ಪುರುಷರ ಸಿಂಗಲ್ಸ್ ಸೆಮಿಫೈನಲ್ / ಮಹಿಳಾ ಸಿಂಗಲ್ಸ್ ಫೈನಲ್ / ಪುರುಷರ ಡಬಲ್ಸ್ ಫೈನಲ್ - ಬೆಳಿಗ್ಗೆ 10:30
  • ಪುರುಷರ ಸಿಂಗಲ್ಸ್ ಫೈನಲ್: ಸಂಜೆ 4:30

4. ಬಾಕ್ಸಿಂಗ್(ಮೊದಲ ಸುತ್ತಿನ ಸಮಯಗಳು ಮಾತ್ರ, ಉಳಿದವು ಅರ್ಹತೆಯ ಆಧಾರದ ಮೇಲೆ ಇರುತ್ತದೆ)

  • ಜುಲೈ 24: ವುಮೆನ್ಸ್ ವೆಲ್ಟರ್, RO- 32 - ಬೆಳಿಗ್ಗೆ 7:30 (ಲೊವ್ಲಿನಾ ಬೊರ್ಗೊಹೈನ್)
  • ಮೆನ್ಸ್ ವೆಲ್ಟರ್, RO-32 - ಬೆಳಿಗ್ಗೆ 9:54 ಮತ್ತು ಮಧ್ಯಾಹ್ನ 3:40 (ವಿಕಾಸ್ ಕ್ರಿಶನ್)
  • ಜುಲೈ 25: ವುಮೆನ್ಸ್ ಫ್ಲೈ, RO-32 - ಬೆಳಿಗ್ಗೆ 7:30 ಮತ್ತು ಮಧ್ಯಾಹ್ನ 1:30 (ಮೇರಿ ಕೋಮ್)
  • ವುಮೆನ್ಸ್ ಮಿಡಲ್ RO-32 - ಬೆಳಿಗ್ಗೆ 8:30 (ಪೂಜಾ ರಾಣಿ)
  • ಮೆನ್​ ಲೈಟ್​, RO-32 - ಬೆಳಿಗ್ಗೆ 8:48 ಮತ್ತು ಮಧ್ಯಾಹ್ನ 2:48 (ಮನೀಶ್ ಕೌಶಿಕ್)
  • ಜುಲೈ 26: ವುಮೆನ್ಸ್ ಫ್ಲೈ, RO-32 - ಬೆಳಿಗ್ಗೆ 7:30 ಮತ್ತು ಮಧ್ಯಾಹ್ನ 1:30 (ಅಮಿತ್ ಪಂಘಲ್)
  • ಮೆನ್ಸ್​ ಮಿಡಲ್​, RO-32 - ಬೆಳಿಗ್ಗೆ 9:06 ಮತ್ತು ಮಧ್ಯಾಹ್ನ 3:06 (ಆಶಿಶ್ ಕುಮಾರ್)
  • ಜುಲೈ 27: ವುಮೆನ್ಸ್ ಲೈಟ್​, ಆರ್‌ಒ -32 - ಮಧ್ಯಾಹ್ನ 3:30 (ಸಿಮ್ರಾಂಜಿತ್ ಕೌರ್)
  • ಜುಲೈ 29: ಮೆನ್ಸ್ ಸೂಪರ್ ಹೆವಿವೇಯ್ಟ್​, RO-16 - ಬೆಳಿಗ್ಗೆ 8:30 ಮತ್ತುಮಧ್ಯಾಹ್ನ 2:30 (ಸತೀಶ್ ಕುಮಾರ್)

5. ಇಕ್ವೆಸ್ಟ್ರಿಯನ್- ಫೌವಾಡ್ ಮಿರ್ಜಾ

ಜುಲೈ 24, 25: ಡ್ರೆಸೇಜ್​ - ಮಧ್ಯಾಹ್ನ 1:30

ಜುಲೈ 28: ಡ್ರೆಸ್ಸೇಜ್ ಫೈನಲ್ - ಮಧ್ಯಾಹ್ನ 2

ಜುಲೈ 30, 31: ಇವೆಂಟಿಗ್​ - ಬೆಳಿಗ್ಗೆ 5 ಮತ್ತು ಮಧ್ಯಾಹ್ನ 2

6. ಫೆನ್ಸಿಂಗ್

ಜುಲೈ 26: ಮಹಿಳಾ ಸೇಬರ್ (ಎಲ್ಲಾ ಸುತ್ತು ಒಂದೇ ದಿನ) - ಬೆಳಿಗ್ಗೆ 5:30 ರಿಂದ ಸಂಜೆ 5: 15 (ಸಿ.ಎ. ಭವಾನಿ ದೇವಿ)

7. ಫೀಲ್ಡ್ ಹಾಕಿ

ಪುರುಷರ ಗುಂಪು ಪಂದ್ಯಗಳು

  • ಜುಲೈ 24: ಭಾರತ vs ನ್ಯೂಜಿಲೆಂಡ್ - ಬೆಳಿಗ್ಗೆ 6:30
  • ಜುಲೈ 25: ಭಾರತ vs ಆಸ್ಟ್ರೇಲಿಯಾ - ಮಧ್ಯಾಹ್ನ 3
  • ಜುಲೈ 27: ಭಾರತ vs ಸ್ಪೇನ್ - ಬೆಳಿಗ್ಗೆ 6:30
  • ಜುಲೈ 29: ಭಾರತ vs ಅರ್ಜೆಂಟೀನಾ - ಬೆಳಿಗ್ಗೆ 6 ಗಂಟೆಗೆ
  • ಜುಲೈ 30: ಭಾರತ vs ಜಪಾನ್ - ಮಧ್ಯಾಹ್ನ 3
  • ಮಹಿಳಾ ಗುಂಪು ಪಂದ್ಯಗಳು
  • ಜುಲೈ 24: ಭಾರತ vs ನೆದರ್ಲ್ಯಾಂಡ್ಸ್ - ಸಂಜೆ 5:15
  • ಜುಲೈ 26: ಭಾರತ vs ಜರ್ಮನಿ - ಸಂಜೆ 5:45
  • ಜುಲೈ 28: ಭಾರತ vs ಗ್ರೇಟ್ ಬ್ರಿಟನ್ - ಬೆಳಿಗ್ಗೆ 6:30
  • ಜುಲೈ 30: ಭಾರತ vs ಐರ್ಲೆಂಡ್ - ಬೆಳಿಗ್ಗೆ 8:15
  • ಜುಲೈ 31: ಭಾರತ vs ದಕ್ಷಿಣ ಆಫ್ರಿಕಾ - ಬೆಳಿಗ್ಗೆ 8:45

8. ಗಾಲ್ಫ್

  • ಜುಲೈ 29, 30, 31: ಪುರುಷರ ವೈಯಕ್ತಿಕ - ಬೆಳಿಗ್ಗೆ 4 (ಅನಿರ್ಬನ್ ಲಹಿರಿ, ಉದಯನ್ ಮಾನೆ)
  • ಆಗಸ್ಟ್ 1: ಪುರುಷರ ವೈಯಕ್ತಿಕ ಚಿನ್ನದ ಪದಕ ಸುತ್ತು
  • ಆಗಸ್ಟ್ 4, 5, 6: ಮಹಿಳೆಯರ ವೈಯಕ್ತಿಕ ವಿಭಾಗ - ಬೆಳಿಗ್ಗೆ 4 (ಅದಿತಿ ಅಶೋಕ್)
  • ಆಗಸ್ಟ್ 7: ಮಹಿಳೆಯರ ವೈಯಕ್ತಿಕ ಚಿನ್ನದ ಪದಕ ಸುತ್ತು

9. ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್

  • ಜುಲೈ 25: ಮಹಿಳೆಯರ ಅರ್ಹತೆ - ಬೆಳಿಗ್ಗೆ 6:30 - ಸಾಯಂಕಾಲ 4: 45 PM (ಪ್ರಣತಿ ನಾಯಕ್)
  • ಜುಲೈ 29: ಮಹಿಳೆಯರ ಆಲ್-ರೌಂಡ್ ಫೈನಲ್ - ಸಾಯಂಕಾಲ 4:20

10. ಜುಡೋ

ಜುಲೈ 24: ಮಹಿಳೆಯರ 48 ಕೆಜಿ (ಅಂತಿಮ ಸುತ್ತು ಸೇರಿದಂತೆ ಎಲ್ಲಾ ಸುತ್ತುಗಳು) - ಬೆಳಿಗ್ಗೆ 7:30 ರಿಂದ ಪ್ರಾರಂಭವಾಗುತ್ತದೆ (ಶುಶೀಲಾ ಲಿಕ್ಮಾಬಮ್)

11. ರೋಯಿಂಗ್ - (ಕೇವಲ ಒಂದು ಈವೆಂಟ್‌ನಲ್ಲಿ ಭಾರತೀಯ ಭಾಗವಹಿಸುವಿಕೆ ಇದೆ)

  • ಜುಲೈ 24: ಪುರುಷರ ಹಗುರವಾದ ಡಬಲ್ ಸ್ಕಲ್ಸ್ ಹೀಟ್ಸ್ - 7:50 ಎಎಮ್ (ಅರ್ಜುನ್ ಲಾಲ್ ಮತ್ತು ಅರವಿಂದ್ ಸಿಂಗ್)
  • ಜುಲೈ 25: ಪುರುಷರ ಹಗುರವಾದ ಡಬಲ್ ಸ್ಕಲ್ಸ್ ಮರುಹಂಚಿಕೆ - ಬೆಳಿಗ್ಗೆ 6:30
  • ಜುಲೈ 27: ಸೆಮಿಫೈನಲ್ಸ್ - ಬೆಳಿಗ್ಗೆ 7:48
  • ಜುಲೈ 29: ಅಂತಿಮ - 6:20 AM

12. ಸೈಲಿಂಗ್

  • ಜುಲೈ 24: ಪುರುಷರ ಲೇಸರ್ (ರೇಸ್ 1 ಮತ್ತು 2) - ಬೆಳಿಗ್ಗೆ 11:05 (ವಿಷ್ಣು ಸರ್ವಾನನ್)
  • ಜುಲೈ 25:ಪುರುಷರ ಲೇಸರ್ (ರೇಸ್ 3 ಮತ್ತು 4) - ಬೆಳಿಗ್ಗೆ 8:35
  • ಜುಲೈ 25:ಮಹಿಳೆಯರ ಲೇಸರ್ ರೇಡಿಯಲ್ (ರೇಸ್ 1, 2) - ಬೆಳಿಗ್ಗೆ 8:35 (ನೇತ್ರಾ ಕುಮಾನನ್)
  • ಜುಲೈ 26: ಪುರುಷರ ಲೇಸರ್ (ರೇಸ್ 5 ಮತ್ತು 6) - ಬೆಳಿಗ್ಗೆ 8:35
  • ಜುಲೈ 26: ಮಹಿಳೆಯರ ಲೇಸರ್ ರೇಡಿಯಲ್ (ರೇಸ್ 3, 4) - ಬೆಳಿಗ್ಗೆ 11:05
  • ಜುಲೈ 27: ಮಹಿಳೆಯರ ಲೇಸರ್ ರೇಡಿಯಲ್ (ರೇಸ್ 5 ಮತ್ತು 6) - ಬೆಳಿಗ್ಗೆ 8:35
  • ಜುಲೈ 27:ಪುರುಷರ 49er (ರೇಸ್ 1, 2, 3) - ಬೆಳಿಗ್ಗೆ 11:20 (ಕೆ.ಸಿ. ಗಣಪತಿ, ವರುಣ್ ಠಕ್ಕರ್)
  • ಜುಲೈ 28: ಪುರುಷರ 49er (ರೇಸ್ 4, 5, 6) - ಬೆಳಿಗ್ಗೆ 8:35
  • ಜುಲೈ 29: ಪುರುಷರ ಲೇಸರ್ (ರೇಸ್ 7 ಮತ್ತು 8) - ಬೆಳಿಗ್ಗೆ 8:35
  • ಜುಲೈ 29: ಮಹಿಳೆಯರ ಲೇಸರ್ ರೇಡಿಯಲ್ (ರೇಸ್ 7, 8) - ಬೆಳಿಗ್ಗೆ 8:45
  • ಜುಲೈ 30: ಮಹಿಳೆಯರ ಲೇಸರ್ ರೇಡಿಯಲ್ (ರೇಸ್ 9, 10) -ಬೆಳಿಗ್ಗೆ 8:35
  • ಜುಲೈ 30: ಪುರುಷರ 49er (ರೇಸ್ 7, 8, 9) - ಬೆಳಿಗ್ಗೆ 8:35
  • ಜುಲೈ 31: ಪುರುಷರ 49er (ರೇಸ್ 10, 11, 12) -ಬೆಳಿಗ್ಗೆ 8:35
  • ಆಗಸ್ಟ್ 1:ಪುರುಷರ ಲೇಸರ್ ಚಿನ್ನದ ಪದಕ ಓಟ - ಬೆಳಿಗ್ಗೆ 11:03
  • ಆಗಸ್ಟ್ 1: ಮಹಿಳೆಯರ ಲೇಸರ್ ಚಿನ್ನದ ಪದಕ ಓಟ - ಮಧ್ಯಾಹ್ನ 12:03
  • ಆಗಸ್ಟ್ 2: ಪುರುಷರ 49er ಪದಕ ರೇಸ್ - ಮಧ್ಯಾಹ್ನ 12:03

13. ಶೂಟಿಂಗ್

  • ಜುಲೈ 24: ಮಹಿಳೆಯರ 10 ಮೀ ಏರ್ ರೈಫಲ್ ಕ್ವಾಲಿಫೈಯರ್ (ಬೆಳಿಗ್ಗೆ 5) ಮತ್ತು ಫೈನಲ್(ಬೆಳಿಗ್ಗೆ 7:15) - ಅಪೂರ್ವಿ ಚಂದೇಲಾ, ಎಲವೆನಿಲ್ ವಲರಿವನ್
  • ಪುರುಷರ 10 ಮೀ ಏರ್ ಪಿಸ್ತೂಲ್ ಕ್ವಾಲಿಫೈಯರ್ (9:30 AM) ಮತ್ತು ಫೈನಲ್ (11:15 AM) - ಸೌರಭ್ ಚೌಧರಿ, ಅಭಿಷೇಕ್ ವರ್ಮಾ
  • ಜುಲೈ 25:ಮಹಿಳೆಯರ 10 ಮೀ ಏರ್ ಪಿಸ್ತೂಲ್ ಕ್ವಾಲಿಫೈಯರ್ (ಬೆಳಿಗ್ಗೆ 5:30) ಮತ್ತು ಫೈನಲ್ (ಬೆಳಿಗ್ಗೆ 7:45 ) - ಮನು ಭಾಕರ್, ಯಶಸ್ವಿನಿ ದೇಸ್ವಾಲ್
  • ಪುರುಷರ 10 ಮೀ ಏರ್ ರೈಫಲ್ ಕ್ವಾಲಿಫೈಯರ್(ಬೆಳಿಗ್ಗೆ 9:30) ಮತ್ತು ಫೈನಲ್ (ಮಧ್ಯಾಹ್ನ 12) - ದೀಪಕ್ ಕುಮಾರ್, ದಿವ್ಯಾನ್ಶ್ ಸಿಂಗ್ ಪನ್ವಾರ್
  • ಜುಲೈ 26: ಪುರುಷರ ಸ್ಕೀಟ್ ಕ್ವಾಲಿಫೈಯರ್ (ಬೆಳಿಗ್ಗೆ 6:30) ಮತ್ತು ಫೈನಲ್ (12:20 PM) - ಅಂಗದ್ ಬಜ್ವಾ, ಮೈರಾಜ್ ಅಹ್ಮದ್ ಖಾನ್
  • ಜುಲೈ 27: 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡದ ಕ್ವಾಲಿಫೈಯರ್ (ಬೆಳಿಗ್ಗೆ 5:30) ಮತ್ತು ಪದಕ ಪಂದ್ಯಗಳು (ಬೆಳಿಗ್ಗೆ 7:30) - ಸೌರಭ್ ಚೌಧರಿ ಮತ್ತು ಮನು ಭಾಕರ್, ಅಭಿಷೇಕ್ ವರ್ಮಾ ಮತ್ತು ಯಶಸ್ವಿನಿ ದೇಸ್ವಾಲ್
  • 10 ಮೀ ಏರ್ ರೈಫಲ್ ಮಿಶ್ರ ತಂಡದ ಕ್ವಾಲಿಫೈಯರ್ (9:45 ಎಎಮ್) ಮತ್ತು ಪದಕ ಪಂದ್ಯಗಳು (11:45 ಎಎಮ್) - ದೀಪಕ್ ಕುಮಾರ್ ಮತ್ತು ಅಂಜುಮ್ ಮೌದ್ಗಿಲ್, ದಿವ್ಯಾನ್ಶ್ ಸಿಂಗ್ ಪನ್ವಾರ್ ಮತ್ತು ಎಳವೆನಿಲ್ ವಲರಿವನ್
  • ಜುಲೈ 30: ಮಹಿಳೆಯರ 25 ಮೀ ಪಿಸ್ತೂಲ್ ಕ್ವಾಲಿಫೈಯರ್ (5:30 ಎಎಮ್) ಮತ್ತು ಫೈನಲ್(11:20 ಎಎಮ್) - ಮನು ಭಾಕರ್, ರಾಹಿ ಸರ್ನೋಬತ್
  • ಜುಲೈ 31: ಮಹಿಳೆಯರ 50 ಮೀ ರೈಫಲ್ 3 ಸ್ಥಾನಗಳ ಕ್ವಾಲಿಫೈಯರ್ (ಬೆಳಿಗ್ಗೆ 8:30) ಮತ್ತು ಫೈನಲ್ (ಮಧ್ಯಾಹ್ನ 12:30) - ಅಂಜುಮ್ ಮೌದ್ಗಿಲ್, ತೇಜಸ್ವಿನಿ ಸಾವಂತ್
  • ಆಗಸ್ಟ್ 2: ಪುರುಷರ 50 ಮೀ ರೈಫಲ್ 3 ಸ್ಥಾನಗಳ ಕ್ವಾಲಿಫೈಯರ್ (ಬೆಳಿಗ್ಗೆ 8) ಮತ್ತು ಫೈನಲ್ (ಮಧ್ಯಾಹ್ನ 1:20) - ಸಂಜೀವ್ ರಜಪೂತ್, ಐಶ್ವರಿ ತೋಮರ್

14. ಸ್ವಿಮ್ಮಿಂಗ್

  • ಜುಲೈ 25: ಮಹಿಳೆಯರ 100 ಮೀ ಬ್ಯಾಕ್‌ಸ್ಟ್ರೋಕ್–ಮಧ್ಯಾಹ್ನ 3:30 (ಮನಾ ಪಟೇಲ್)
  • ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್–ಸಾಯಂಕಾಲ 4:50 (ಶ್ರೀಹರಿ ನಟರಾಜ್)
  • ಜುಲೈ 26: ಪುರುಷರ 200 ಮೀ ಬಟರ್​ ಫ್ಲೈ - ಸಾಯಂಕಾಲ 4 (ಸಜನ್ ಪ್ರಕಾಶ್)

15. ಟೇಬಲ್ ಟೆನ್ನಿಸ್ (ಮೊದಲ ಸುತ್ತಿನ ವಿವರಗಳು ಮಾತ್ರ)

  • ಜುಲೈ 24: ಪುರುಷರ / ಮಹಿಳಾ ಸಿಂಗಲ್ಸ್ ಪ್ರಿಲಿಮ್ಸ್ - ಬೆಳಿಗ್ಗೆ 5:30 (ಶರತ್ ಕಮಲ್, ಜಿ ಸತಿಯಾನ್; ಮನಿಕಾ ಬಾತ್ರಾ, ಸುತೀರ್ಥ ಮುಖರ್ಜಿ).
  • ಮಿಶ್ರ ಡಬಲ್ಸ್ RO -16 -ಬೆಳಿಗ್ಗೆ 7:45 (ಶರತ್ ಕಮಲ್ / ಮನಿಕಾ ಬಾತ್ರಾ)

16. ವೇಯ್ಟ್​ಲಿಫ್ಟಿಂಗ್

ಜುಲೈ 24: ಮಹಿಳೆಯರ 49 ಕೆಜಿ - ಬೆಳಿಗ್ಗೆ 6:20 ಕ್ಕೆ ಪ್ರಾರಂಭವಾಗುತ್ತದೆ, ಫೈನಲ್ ಬೆಳಿಗ್ಗೆ 10:20 (ಮೀರಾಬಾಯಿ ಚಾನು)

ಟೆನ್ನಿಸ್ ಪಂದ್ಯ ಸಮಯ ಪಂದ್ಯ ಆರಂಭವಾಗುವ ದಿನ ಲಭ್ಯವಾಗಬೇಕಿದೆ ಮತ್ತು ಕುಸ್ತಿಯ ವೇಳಾಪಟ್ಟಿ ಇನ್ನೂ ಖಚಿತವಾಗಿಲ್ಲ.

Last Updated : Jul 24, 2021, 4:25 PM IST

ABOUT THE AUTHOR

...view details