ಟೋಕಿಯೋ: ಯುವ ಕುಸ್ತಿಪಟು ದೀಪಕ್ ಪೂನಿಯಾ ತಮ್ಮ ಚೊಚ್ಚಲ ಒಲಿಂಪಿಕ್ಸ್ನಲ್ಲಿ ಸೋಲು ಕಾಣುವ ಮೂಲಕ ನಿರಾಸೆಯನುಭವಿಸಿದ್ದಾರೆ. ಅವರು ಕಂಚಿನ ಪದಕದ ಪಂದ್ಯದಲ್ಲಿ ಸ್ಯಾನ್ ಮರಿಯೋದ ಮೈಲ್ಸ್ ನಜೆಮ್ ಅಮಿನ್ ವಿರುದ್ಧ 4-2ರಲ್ಲಿ ಸೋಲು ಕಂಡರು.
22 ವರ್ಷದ ದೀಪಕ್ 86 ಕೆಜಿ ವಿಭಾಗದಲ್ಲಿ ಬುಧವಾರ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಡೇವಿಡ್ ಟೇಲರ್ ವಿರುದ್ಧ 10-0ಯಲ್ಲಿ ಸೋಲು ಕಂಡಿದ್ದರು. ಟೇಲರ್ ಫೈನಲ್ ಪ್ರವೇಶಿಸಿದ್ದರಿಂದ ಅವರಿಂದ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡಿದ್ದ ಅಮಿನ್ ರೆಪ್ಚೇಜ್ ಪಂದ್ಯದಲ್ಲಿ ಗೆದ್ದು ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ಇಂದು ದೀಪಕ್ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 4-2ರಲ್ಲಿ ಗೆಲ್ಲುವ ಮೂಲಕ ಪದಕ ಸ್ಯಾನ್ ಮರಿನೋಗೆ ಕುಸ್ತಿಯಲ್ಲಿ ಮೊದಲ ಪದಕ ತಂದುಕೊಟ್ಟರು.