ಕರ್ನಾಟಕ

karnataka

ETV Bharat / sports

ಕೊರೊನಾ ವೈರಸ್​ ಭೀತಿ: ಜುಲೈ ಬದಲು ವರ್ಷಾಂತ್ಯಕ್ಕೆ ಒಲಿಂಪಿಕ್ಸ್​ ಕ್ರೀಡಾಕೂಟ ಮುಂದೂಡಿಕೆ? - ಐಒಸಿಯ ಅಧ್ಯಕ್ಷ ಥಾಮಸ್​ ಬೇಚ್​

ಜಪಾನ್ ನ ಟೋಕಿಯೋದಲ್ಲಿ ಒಲಿಂಪಿಕ್ಸ್​-2020 ಕ್ರೀಡಾಕೂಟದಲ್ಲಿ 11,091 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. 206 ದೇಶಗಳ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಆದರೆ ಜಗತ್ತಿನಾದ್ಯಂತ ಸುಮಾರು 3,000 ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್​ ಅಟ್ಟಹಾಸ ಕಡಿಮೆಯಾಗುವವರೆಗೂ ಕ್ರೀಡಾಕೂಟ​ ಮುಂದೂಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

Tokyo Olympics  2020
ಒಲಿಂಪಿಕ್ಸ್​ 2020

By

Published : Mar 3, 2020, 6:47 PM IST

ಟೋಕಿಯೋ: 2020ರ ಒಲಿಂಪಿಕ್ಸ್​ ಕೂಟದ ಆತಿಥ್ಯವಹಿಸುತ್ತಿರುವ ಜಪಾನ್,​ ಕೊರೊನಾ ವೈರಸ್​ ಭೀತಿಯಿಂದ ಟೂರ್ನಿಯನ್ನು ಈ ವರ್ಷಾಂತ್ಯಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

"ಐಒಸಿ ಒಪ್ಪಂದದ ಪ್ರಕಾರ, 2020ರೊಳಗೆ ಕ್ರೀಡಾಕೂಟವನ್ನು ನಡೆಸಿಕೊಡಬೇಕಿದೆ. ಕೊರೊನಾ ವೈರಸ್​ ಭೀತಿಯಿರುವುದರಿಂದ ಕ್ರೀಡಾಕೂಟವನ್ನು ಈ ವರ್ಷದ ಮುಕ್ತಾಯಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ಜಪಾನ್​ ಒಲಿಂಪಿಕ್ಸ್​ ಮಿನಿಸ್ಟರ್​ ಸೆಯಿಕೊ ಹಶಿಮೊಟೊ ಶಾಸಕರ ಸಭೆಯಲ್ಲಿ ಉತ್ತರಿಸಿದ್ದಾರೆ.

ಒಲಿಂಪಿಕ್ಸ್​ ಗೇಮ್ಸ್​ ಒಪ್ಪಂದದ ಪ್ರಕಾರ, ಒಲಿಂಪಿಕ್ಸ್​ ಆಯೋಜನೆಯನ್ನು ರದ್ದುಗೊಳಿಸುವ ಅಥವಾ ಮುಂದೂಡುವ ಅಧಿಕಾರವನ್ನು ಐಒಸಿ ಮಾತ್ರ ಹೊಂದಿದೆ. ಆದರೆ ಐಒಸಿಯ ಅಧ್ಯಕ್ಷ ಥಾಮಸ್​ ಬೇಚ್​ ನಾವು ಟೋಕಿಯೋದಲ್ಲಿ ಕ್ರೀಡಾಕೂಟವನ್ನು ನಡೆಸಲು ಬದ್ಧರಾಗಿದ್ದೇವೆ ಎಂದು ಕಳೆದ ವಾರ ತಿಳಿಸಿದ್ದರು.

ಸೆಯಿಕೊ ಹಶಿಮೊಟೊ

ಈ ಕುರಿತು ಪ್ರತಿಕ್ರಿಯಿಸಿರುವ ಹಶಿಮೊಟೊ, ಜಪಾನ್​ ಸರ್ಕಾರ ಹಾಗೂ ಟೋಕಿಯೋ ಕ್ರೀಡಾಕೂಟವನ್ನು ಜುಲೈ 24 ರಂದೇ ಆಯೋಜಿಸಿಲು ಈಗಲೂ ಬದ್ಧವಾಗಿದೆ ಎಂದಿದ್ದಾರೆ.

ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ 1.35 ಯೆನ್ ​(12.51 ಬಿಲಿಯನ್ ಡಾಲರ್) ಬಜೆಟ್ ನಿಗದಿ ಮಾಡಲಾಗಿದೆ. ಜಪಾನ್​ ಸರ್ಕಾರ ಸರ್ಕಾರ ಒಲಿಂಪಿಕ್ಸ್​ ಸ್ಟೇಡಿಯಂಗಾಗಿ 120 ಬಿಲಿಯನ್ ಯೆನ್ ಹಾಗೂ 30 ಪ್ಯಾರಾಲಿಂಪಿಕ್ಸ್​ಗಾಗಿ 30 ಬಿಲಿಯನ್​ ಯೆನ್​ ನೀಡಲಿದೆ.

ABOUT THE AUTHOR

...view details