ಟೋಕಿಯೋ: ಭಾರತದ ಅಂಗದ್ ವೀರ್ ಸಿಂಗ್ ಬಜ್ವಾ ಪುರುಷರ ಸ್ಕೀಟ್ ವಿಭಾಗದಲ್ಲಿ 3 ಸಿರೀಸ್ಗಳ ನಂತರ 73 ಅಂಕ ಪಡೆದು 11ನೇ ಸ್ಥಾನದಲ್ಲಿದ್ದಾರೆ. ಫೈನಲ್ಗೆ ಕೇವಲ 6 ಮಂದಿಗೆ ಮಾತ್ರ ಅವಕಾಶ ಇರುವುದರಿಂದ ಸೋಮವಾರ ನಡೆಯಲಿರುವ ಮತ್ತೆರಡು ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಲು ಭಾರತೀಯ ಶೂಟರ್ ಎದುರು ನೋಡುತ್ತಿದ್ದಾರೆ.
ಅಸಾಕ ಶೂಟಿಂಗ್ ರೇಂಜ್ನಲ್ಲಿ ನಡೆದ ಮೂರು ಸಿರೀಸ್ಗಳಿಂದ ಭಾರತೀಯ ಶೂಟರ್ ಕ್ರಮವಾಗಿ 25, 24, 24 ಅಂಕ ಪಡೆದು 11ನೇ ಸ್ಥಾನ ಪಡೆದಿದ್ದಾರೆ. ಫೈನಲ್ ಅರ್ಹತೆ ಪಡೆಯಲು ಇನ್ನು ಎರಡು ಸಿರೀಸ್ ಬಾಕಿಯಿದೆ.