ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಅತನು ದಾಸ್ ಪ್ರಿಕ್ವಾರ್ಟರ್ಫೈನಲ್ನಲ್ಲಿ 2012ರ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದ ಜಪಾನದ ತಕಹರು ಫುರುಕವಾ ಅವರ ವಿರುದ್ಧ 4-6 ಅಂತರದಿಂದ ಸೋಲನ್ನಪ್ಪಿದ್ದಾರೆ.
Tokyo Olympics 2020: ಆರ್ಚರಿಯಲ್ಲಿ ಜಪಾನ್ ವಿರುದ್ಧ ಸೋತ ದಾಸ್, ಕಮರಿದ ಪದಕದ ಕನಸು - ಆರ್ಚರಿ ಅತನು ದಾಸ್,
ಒಲಿಂಪಿಕ್ಸ್‌ನಲ್ಲಿ ಪಂದ್ಯಗಳು ಈಗ ಕೂತುಹಲ ಘಟಕ್ಕೆ ತಲುಪಿವೆ. ಇಂದು ನಡೆದ ಆರ್ಚರಿ ವಿಭಾಗದಲ್ಲಿ ಜಪಾನ್ ವಿರುದ್ಧ ಎ. ದಾಸ್ ಸೋಲನ್ನಪ್ಪಿದ್ದಾರೆ.
ಆರ್ಚರಿಯಲ್ಲಿ ಜಪಾನ್ ವಿರುದ್ಧ ಸೋತ ದಾಸ್
ಈ ಹಿಂದೆ ನಡೆದ ಪಂದ್ಯದಲ್ಲಿ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ಸಾಧಿಸಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಇಂದು ದಾಸ್ ಅವರು ತಕಹರು ಫುರುಕವಾ ವಿರುದ್ಧ 16ರ ಹಂತದ ಪಂದ್ಯದಲ್ಲಿ ಸೋಲನ್ನಪ್ಪಿದ್ದಾರೆ. ಪದಕದ ಭರವಸೆ ಮೂಡಿಸಿದ್ದ ದಾಸ್ಗೆ ನಿರಾಸೆಯುಂಟಾಗಿದೆ.