ಕರ್ನಾಟಕ

karnataka

ETV Bharat / sports

ಮಣಿಪುರ ಸರ್ಕಾರದಿಂದ ಚಾನುಗೆ 1 ಕೋಟಿ ರೂ. ಬಹುಮಾನ... ಕೋಚ್​ಗೆ ₹10 ಲಕ್ಷ ಘೋಷಿಸಿದ IOA

ಇಂದು ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಐಒಎ ಕಡೆಯಿಂದ 40 ಲಕ್ಷರೂ ಸಿಗಲಿದೆ. ಇನ್ನು ಇವರ ಕೋಚ್​ ವಿಜಯ ಶರ್ಮಾ ಕೂಡ 10 ಲಕ್ಷ ರೂ ಪಡೆಯಲಿದ್ದಾರೆ. ಮಣಿಪುರ ಸರ್ಕಾರದಿಂದಲೂ ಈಗಾಗಲೇ ಘೋಷಿಸಿರುವಂತೆ ಒಂದು ಕೋಟಿ ರೂ ಪಡೆಯಲಿದ್ದಾರೆ.

Tokyo Olympics
ಮೀರಾಬಾಯಿ ಚಾನು

By

Published : Jul 24, 2021, 7:21 PM IST

Updated : Jul 24, 2021, 8:02 PM IST

ಮುಂಬೈ: ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನ ಪ್ರಕಟಿಸಿದ್ದ ಇಂಡಿಯನ್​ ಒಲಿಂಪಿಕ್ಸ್ ಅಸೋಸಿಯೇಷನ್ ಇದೀಗ ಪದಕ ಗೆದ್ದ ಕ್ರೀಡಾಪಟುಗಳ ಕೋಚ್​ಗಳಿಗೂ ಬಹುಮಾನ ಘೋಷಿಸಿದೆ.

ಗುರುವಾರ ಐಒಎ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದವರಿಗೆ 75 ಲಕ್ಷ ರೂ, ಬೆಳ್ಳಿ ಗೆದ್ದವರಿಗೆ 40 ಲಕ್ಷ ಮತ್ತು ಕಂಚು ಗೆದ್ದವರಿಗೆ 25 ಲಕ್ಷ ರೂ ಬಹುಮಾನ ಘೋಷಿಸಿತ್ತು. ಜೊತೆಗೆ ಪದಕ ಗೆದ್ದುಕೊಡುವ ಕ್ರೀಡಾಪಟುಗಳನ್ನು ತಯಾರಿಸಿದ ರಾಷ್ಟ್ರೀಯ ಕ್ರೀಡಾ ಒಕ್ಕೂಟ​ಗಳಿಗೆ 30 ಮತ್ತು ಒಲಿಂಪಿಕ್ಸ್​ಗೆ ಭಾಗವಹಿಸಿದ ಒಕ್ಕೂಟಗಳಿಗೆ ತಲಾ 25 ಲಕ್ಷ ಮತ್ತು ಇತರ ಒಕ್ಕೂಟಗಳಿಗೆ ಪ್ರೋತ್ಸಾಹದಾಯಕವಾಗಿ 15 ಲಕ್ಷರೂ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಅಸೋಸಿಯೇಷನ್ ಘೋಷಣೆ ಮಾಡಿತ್ತು.

ಈ ಪ್ರಕಾರ ಇಂದು ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಐಒಎ ಕಡೆಯಿಂದ 40 ಲಕ್ಷರೂ ಸಿಗಲಿದೆ. ಇನ್ನು ಇವರ ಕೋಚ್​ ವಿಜಯ ಶರ್ಮಾ ಕೂಡ 10 ಲಕ್ಷ ರೂ ಪಡೆಯಲಿದ್ದಾರೆ.

ಮಣಿಪುರ ಸರ್ಕಾರದಿಂದ ಒಂದು ಕೋಟಿ ಬಹುಮಾನ:

ಮೀರಾ ಬಾಯಿ ಬೆಳ್ಳಿ ಪದಕ ತಂದುಕೊಟ್ಟಿರುವುದರಿಂದ ಸಂತೋಷ ವ್ಯಕ್ತಪಡಿಸಿರುವ ಮಣಿಪುರ ಮುಖ್ಯಮಂತ್ರಿ ನಾಂಗ್ಥೊಂಬಮ್ ಬಿರೆನ್ ಒಂದು ಕೋಟಿ ರೂ ಬಹುಮಾನ ಘೋಷಿಸಿದ್ದಾರೆ.

ಸ್ವತಃ ಮಾಜಿ ಫುಟ್​ಬಾಲಿಗನಾಗಿರುವ ಬಿರೆನ್ ಮಣಿಪುರದಿಂದ ಯಾರೇ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದರೆ ಒಂದು ಕೋಟಿ ರೂ ಮತ್ತು ಭಾಗವಹಿಸುವ ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ ನೀಡಲಾಗುವುದು ಎಂದು ಘೋಷಿಸಿದ್ದರು.

ಇದನ್ನು ಓದಿ:Tokyo Olympics: ಈ ಬೆಳ್ಳಿ ಪದಕ ಇಡೀ ದೇಶಕ್ಕೆ ಅರ್ಪಣೆ : ಮೀರಾಬಾಯಿ ಚಾನು

Last Updated : Jul 24, 2021, 8:02 PM IST

ABOUT THE AUTHOR

...view details