ಹೈದರಾಬಾದ್, ತೆಲಂಗಾಣ:2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆದ ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಕಣಕ್ಕಿಳಿದ ಭವಾನಿದೇವಿಯ ಕತ್ತಿವರಸೆ ನೋಡಿದ ಜನರು ಅಚ್ಚರಿಗೊಂಡಿದ್ದರು. ಯಾವಾಗಲೂ ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಜನರು ಟಂಗ್.. ಟಂಗ್.. ಎಂದು ಕತ್ತಿಗಳನ್ನು ತಿರುಗಿಸುತ್ತಲೇ ಇರುವುದನ್ನು ನಾವು ಕಂಡಿದ್ದೇವೆ. ಆದರೆ ಮೊದಲ ಬಾರಿಗೆ ನಮ್ಮ ಜನ ಭಾರತೀಯ ಹುಡುಗಿಯ ಕತ್ತಿವರಸೆ ನೋಡಿ ಬೇರಗಾಗಿದ್ದರು.
ಒಲಿಂಪಿಕ್ಸ್‌ನ ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಕುಡಿ ಆಡುವುದು ನೋಡಿ ನಮ್ಮ ಜನಕ್ಕೆ ಪಂದ್ಯ ಗೆದ್ದಂತೆ ಭಾಸವಾಗಿತ್ತು. ಈ ಆಟದಲ್ಲಿ ಭವಿಷ್ಯವೇನಿದೆ.. ಅದರಲ್ಲಿ ಒಂದು ಹುಡುಗಿ ಎಷ್ಟು ದಿನ ಇರಬಲ್ಲಳು ಎಂಬ ನಿರೀಕ್ಷೆಯನ್ನು ತಲಕೆಳಗೆ ಮಾಡಿಕೊಂಡು ದಿನದಿಂದ ದಿನಕ್ಕೆ ಕತ್ತಿಯನ್ನು ಹರಿತಗೊಳಿಸುತಲ್ಲೇ ಮುಂದೇ ಸಾಗುತ್ತಾ ಬಂದಳು ಭವಾನಿ. ಕಳೆದ ವರ್ಷ ಕಾಮನ್‌ವೆಲ್ತ್ ಫೆನ್ಸಿಂಗ್‌ನಲ್ಲಿ ಚಿನ್ನ ಗೆದ್ದಿದ್ದ ಈ ಹುಡುಗಿ ಕಠಿಣ ಪೈಪೋಟಿ ಇರುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದು ಎಲ್ಲರ ಬಾಯಲ್ಲಿ ಬಲೇ ಹುಡುಗಿ ಎಂದು ಅನಿಸಿಕೊಂಡಿದ್ದಾರೆ.
ಮಧ್ಯಮ ವರ್ಗದ ಹುಡುಗಿಯೊಬ್ಬಳು ಇಂತಹ ಕ್ರೀಡೆಯಲ್ಲಿ ಬೆಳೆಯುವುದೇ ದೊಡ್ಡ ಸೌಭಾಗ್ಯ. ಭವಾನಿ ಆರನೇ ತರಗತಿಯಲ್ಲಿದ್ದಾಗ ಯಾರೂ ಇಷ್ಟಪಡದ ಕ್ರೀಡೆಯನ್ನು ಆಕೆ ಆರಿಸಿಕೊಂಡರು. ಚದಲವಾಡ ಭವಾನಿ ಚೆನ್ನೈನಲ್ಲಿ ಜನಿಸಿದರೂ ತೆಲುಗು ಕುಟುಂಬದಿಂದ ಬಂದವರಾಗಿದ್ದಾರೆ. ಆಕೆಯ ತಂದೆ ಆನಂದ ಸುಂದರರಾಮನ್ ಅವರು ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪೂರ್ವ ಗೋದಾವರಿ ಜಿಲ್ಲೆಯ ಸಾಮರ್ಲಕೋಟಾದವರು. ಐದು ಮಕ್ಕಳಿರುವ ಕುಟುಂಬದಲ್ಲಿ ಭವಾನಿ ದೇವಿ ಕಿರಿಯವರು.
2004 ರಲ್ಲಿ ಫೆನ್ಸಿಂಗ್‌ಗೆ ಪ್ರವೇಶಿಸುತ್ತೇನೆ ಎಂದು ಭವಾನಿ ನಿರೀಕ್ಷಿಸಿರಲಿಲ್ಲ. ಏಕೆಂದರೆ ಧನುಷ್ಕೋಡಿ ಶಾಲೆಯಲ್ಲಿ ಲಭ್ಯವಿರುವ ಕ್ರೀಡೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗಿತ್ತು. ಭವಾನಿಯ ಸರದಿ ಬಂದಾಗ ಫೆನ್ಸಿಂಗ್ ಕ್ರೀಡೆಯೊಂದೆ ಬಾಕಿ ಉಳಿದಿತ್ತು. ಆದ್ರೂ ಸಹ ಭವಾನಿ ಇಷ್ಟವಿಲ್ಲದೆ ಕತ್ತಿ ಕೈಗೆ ತೆಗೆದುಕೊಂಡರು. ವಿಭಿನ್ನ ಕ್ರೀಡೆಗೆ ಅವಳ ಪ್ರವೇಶವೇ ಅವಳಿಗೆ ಶೀಘ್ರವಾಗಿ ಮನ್ನಣೆ ತಂದುಕೊಟ್ಟಿತು.