ಲಾಸ್ ಏಂಜಲೀಸ್: ಗಾಲ್ಫ್ ದಿಗ್ಗಜ ಟೈಗರ್ ವುಡ್ಸ್ ಅವರ ಕಾರು ಅಪಘಾತ ಪ್ರಕರಣದ ತನಿಖೆಯನ್ನು ಲಾಸ್ ಏಂಜಲೀಸ್ ಪೊಲೀಸರು ಮುಗಿಸಿದ್ದಾರೆ. ಆದರೆ 15 ಬಾರಿ ವಿಶ್ವಚಾಂಪಿಯನ್ ಆಗಿರುವ ವುಡ್ಸ್ ಅನುಮತಿಯಿಲ್ಲದ ಕಾರಣ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಅಮೆರಿಕದ ಲಾಸ್ ಏಂಜಲೀಸ್ನ ಹೊರಭಾಗದಲ್ಲಿರುವ ರೋಲಿಂಗ್ ಹಿಲ್ಸ್ ಎಸ್ಟೇಟ್‌ನಲ್ಲಿ ಫೆಬ್ರವರಿ 25ರಂದು ಟೈಗರ್ ವುಡ್ಸ್ ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿತ್ತು.
ಅವರು ಚಾಲನೆ ಮಾಡುತ್ತಿದ್ದ ಎಸ್ಯುವಿ ಕಾರು ಎರಡು ಪಥದ ರಸ್ತೆಯನ್ನು ದಾಟಿ ಮರಕ್ಕೆ ಡಿಕ್ಕಿ ಹೊಡೆದು ಬೆಟ್ಟದಿಂದ ಉರುಳಿತ್ತು ಎಂದು ಪೊಲೀಸರು ತಿಳಿಸಿದ್ದರು. ಈ ವೇಳೆ ವಾಹನದ ವಿಂಡ್ ಶೀಲ್ಡ್ ಮೂಲಕ ಗಾಯಾಳು ವುಡ್ಸ್ ಅವರನ್ನು ಹೊರತೆಗೆಯಲಾಗಿತ್ತು. ಬಳಿಕ ಬಹುಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ವುಡ್ಸ್ ಹೇಳಿಕೆ ದಾಖಲಿಸುವಾಗ, ಕಾರು ಅಪಘಾತ ಹೇಗೆ ಸಂಭವಿಸಿತು ಎಂದು ತನಗೆ ತಿಳಿದಿಲ್ಲ. ಚಾಲನೆ ಮಾಡುತ್ತಿದ್ದ ಬಗ್ಗೆಯೂ ನೆನಪಿಲ್ಲ ಎಂದು ಪೊಲೀಸರಿಗೆ ತಿಳಿಸಿ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ: ಸಿಎಸ್ಕೆ ತಂಡಕ್ಕೆ ಸೇರ್ತಾರಾ ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್ಮನ್ ? ಟ್ವಿಟ್ಟರ್ ಟ್ರೆಂಡ್ ಆದ ಅಲೆಕ್ಸ್