ದುಬೈ : ಭಾರತದ ಮೂವರು ಬಾಕ್ಸರ್ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 48 ಕೆಜಿ ವಿಭಾಗದಲ್ಲಿ ರೋಹಿತ್ ಚಮೋಲಿ ಮತ್ತು 81+ ಕೆಜಿ ವಿಭಾಗದಲ್ಲಿ ಭರತ್ ಜೂನ್ ಹಾಗೂ ಹುಡುಗಿಯರ ವಿಭಾಗದಲ್ಲಿ ಮುಸ್ಕಾನ್(46ಕೆಜಿ) ಫೈನಲ್ ಪ್ರವೇಶಿಸಿದ್ದಾರೆ.
ಭರತ್ ಕಿರ್ಗಿಸ್ತಾನದ ಎಮಿರ್-ಖಾನ್ ವಿರುದ್ಧ 5-0, ಚಮೋಲಿ ಇಷ್ಟೇ ಅಂಕಗಳ ಅಂತರದಿಂದ ಕಜಕಿಸ್ತಾನದ ಐದರ್ ಕದಿರ್ಖಾನ್ ವಿರುದ್ಧ ಗೆಲುವು ಸಾಧಿಸಿದರು. ಮುಸ್ಕಾನ್ ಕಜಕಿಸ್ತಾನದ ಯೆಲ್ಯಾನೂರ್ ತುರ್ಗನೊವಾ ವಿರುದ್ಧ ಸರ್ವಾನುಮತದ ಗೆಲುವನ್ನು ಪಡೆದರು. ದೇವಿಕಾ ಘೋರ್ಪಡೆ(50ಕೆಜಿ), ಸುಪ್ರಿಯಾ ರಾವತ್ (66 ಕೆಜಿ) ಮತ್ತು ಆರ್ಜೂ (54 ಕೆಜಿ) 2-3ರಲ್ಲಿ ಉಜ್ಬೇಕಿಸ್ತಾನದ ಬಾಕ್ಸರ್ಗಳ ವಿರುದ್ಧ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿ ಕಂಚು ಪಡೆದರು.