ನವದೆಹಲಿ: ಈ ಕಂಚಿನ ಪದಕವು ಸರಿಯಾದ ಸಮಯಕ್ಕೆ ಬಂದಿದೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಈ ಪ್ರಶಸ್ತಿ ಸಿಕ್ಕಿರುವುದು ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಿಮ್ರಂಜೀತ್ ಕೌರ್ ಸಂತಸ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಆರ್ಚರಿ ವಿಶ್ವಕಪ್-2023 ಹಂತ 4ರಲ್ಲಿ ಪದಕ ಗೆದ್ದ ಮಹಿಳಾ ರಿಕರ್ವ್ ಆರ್ಚರಿ ತಂಡದ ಸದಸ್ಯೆ ಸಿಮ್ರಂಜೀತ್ ಕೌರ್ ತಮ್ಮ ಗೆಲುವಿನ ಬಗ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಪದಕವು ತಂಡದ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಪ್ರಶಸ್ತಿಯಾಗಿದೆ. ತಂಡವಾಗಿ ನಾವು ಸಾಕಷ್ಟು ಶ್ರಮ ಹಾಕಿದ್ದೇವೆ. ನಾವು ದೀರ್ಘಕಾಲ ಪದಕ ಗೆಲ್ಲಲು ಶ್ರಮಿಸುತ್ತಿದ್ದೇವೆ. ಈ ಪದಕವು ನಮ್ಮ ಮುಂದಿನ ಹೋರಾಟಕ್ಕೆ ಬಹಳ ಮುಖ್ಯವಾಗಿತ್ತು. ಏಕೆಂದರೆ ಮುಂದಿನ ವರ್ಷ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, ಈ ಪದಕದಿಂದಾಗಿ ನಮ್ಮ ತಂಡದ ಆತ್ಮವಿಶ್ವಾಸವು ಬಹಳಷ್ಟು ಹೆಚ್ಚಿದೆ. ನಾವು ಇದೇ ರೀತಿಯ ಪ್ರದರ್ಶನವನ್ನು ನೀಡಿದರೆ, ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ವಿಶ್ವಕಪ್ ಪದಕ ವಿಜೇತೆ ಸಿಮ್ರಂಜೀತ್ ಕೌರ್ ಸಂತಸ ವ್ಯಕ್ತಪಡಿಸಿದರು.
ಸಿಮ್ರಂಜೀತ್ ಕೌರ್, ಭಜನ್ ಕೌರ್ ಮತ್ತು ಅಂಕಿತಾ ಭಕತ್ ಅವರನ್ನೊಳಗೊಂಡ ಭಾರತೀಯ ಮಹಿಳಾ ರಿಕರ್ವ್ ಆರ್ಚರಿ ತಂಡವು ಜಪಾನ್ ವಿರುದ್ಧ 6-2 ಮತ್ತು ಇಟಲಿಯನ್ನು 5-1 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಇದರಿಂದ ಸೆಪ್ಟೆಂಬರ್ 23ರಿಂದ ಪ್ರಾರಂಭವಾಗುವ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗೆ ಹೆಚ್ಚಿನ ವಿಶ್ವಾಸವನ್ನು ಪಡೆದುಕೊಂಡಿದೆ.
ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ- ಸಿಮ್ರಂಜೀತ್ ಕೌರ್:"ಇದು ನನ್ನ ಮೊದಲ ಏಷ್ಯನ್ ಗೇಮ್ಸ್ ಆಗಿರುತ್ತದೆ. ಆದರೆ, ನಮ್ಮ ಹಿರಿಯರು ಸಾಕಷ್ಟು ಪಂದ್ಯಾವಳಿಗಳನ್ನು ಆಡಿದ್ದಾರೆ. ಅವರು ತಮ್ಮ ಅನುಭವವನ್ನು ಚೆನ್ನಾಗಿ ಹಂಚಿಕೊಳ್ಳುವುದರಿಂದ ನಾವು ಚೆನ್ನಾಗಿ ಸಿದ್ಧವಾಗಿದ್ದೆವು. ಮುಂಬರುವ ದಿನಗಳಲ್ಲಿ ಈ ಅನುಭವವು ನಮಗೆ ಬಹಳಷ್ಟು ಸಹಾಯ ಮಾಡುತ್ತದೆ ಹಾಗೂ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ" ಎಂದು ಸಿಮ್ರಂಜೀತ್ ಕೌರ್ ಹೇಳಿದ್ದಾರೆ.
ನಮಗೆ ಮಿಲ್ಕಾ ಸಿಂಗ್ ಸ್ಫೂರ್ತಿ:ಹಿರಿಯ ಕ್ರೀಡಾಪಟು ಮಿಲ್ಕಾ ಸಿಂಗ್ ಅವರು ಯುವ ಭಾರತೀಯ ಬಿಲ್ಲುಗಾರರಿಗೆ ಸ್ಫೂರ್ತಿಯಾಗಿದ್ದಾರೆ. "ಮಿಲ್ಕಾ ಸಿಂಗ್ ಸರ್ ನನಗೆ ತುಂಬಾ ಸ್ಫೂರ್ತಿಯಾಗಿದ್ದಾರೆ. ಯಾವುದೇ ಬೆಂಬಲ ಮತ್ತು ಸೌಲಭ್ಯವಿಲ್ಲದೇ ನಾವು ಹೇಗೆ ಕಾರ್ಯನಿರ್ವಹಿಸಬಹುದು ಎಂಬುದರ ಕುರಿತು ಅವರ ಕಥೆಯು ತುಂಬಾ ಸ್ಪೂರ್ತಿದಾಯಕವಾಗಿದೆ. ಆ ಸಮರ್ಪಣೆಯು ಹೃದಯದಿಂದ ಬಂದಿದೆ. ನಿರೀಕ್ಷೆಗಳು ಮತ್ತು ಪ್ರದರ್ಶನದ ಇಚ್ಛೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ" ಎಂದು ಸಿಮ್ರಂಜೀತ್ ಕೌರ್ ತಿಳಿಸಿದರು.
ಬಿಲ್ಲುಗಾರರನ್ನು ಅಭಿನಂದಿಸಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್:ಪದಕ ಗೆದ್ದ ನಂತರ ಯುವ ಬಿಲ್ಲುಗಾರ್ತಿ ಸಿಮ್ರಂಜೀತ್ ಕೌರ್ ತಮ್ಮ ಕನಸಿಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಗೌರವ ಅಭಿನಂದನೆಗಳನ್ನು ಸಲ್ಲಿಸಿದರು. "ನೀವು ಏನನ್ನಾದರೂ ಸಾಧಿಸಲು ಬಯಸಿದರೆ ನಿರಂತರವಾಗಿ ಕೆಲಸ ಮಾಡಿ, ಭರವಸೆ ಕಳೆದುಕೊಳ್ಳಬೇಡಿ ಎಂದು ನಾನು ಹೇಳಲು ಬಯಸುತ್ತೇನೆ" ಎಂದು ಕೌರ್ ಹೇಳಿದರು. ವಿಶ್ವ ಚಾಂಪಿಯನ್‌ಶಿಪ್ ಬರ್ಲಿನ್ ಮತ್ತು ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಕಪ್ 2023 ಹಂತ 4ರಲ್ಲಿ ದೇಶಕ್ಕಾಗಿ ಪ್ರಶಸ್ತಿಗಳನ್ನು ಗಳಿಸಿದ ಪದಕ ವಿಜೇತ ಬಿಲ್ಲುಗಾರರನ್ನು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿನಂದಿಸಿದರು. (ಎಎನ್ಐ)
ಇದನ್ನೂ ಓದಿ:ಚೆಸ್ ವಿಶ್ವಕಪ್ ಫೈನಲ್: ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ, ನಾಳೆ 2ನೇ ಫೈಟ್