ಕರ್ನಾಟಕ

karnataka

ETV Bharat / sports

ಅಂದಿನ ಈ ದಿನ ನಡೆದಿದ್ದೇನು?.. ಊಹಿಸಿ: ಚೆಸ್​ ಮಾಸ್ಟರ್​ ವಿಶ್ವನಾಥನ್​ ಆನಂದ್​ ಪ್ರಶ್ನೆ - ದಿ ಇಂಟರ್ನ್ಯಾಷನಲ್​ ಚೆಸ್​ ಫೆಡರೇಷನ್

ನವದೆಹಲಿ ಮತ್ತು ಟೆಹ್ರಾನ್‌ನಲ್ಲಿ ನಡೆದಿದ್ದ ಎಫ್​​​ಐಡಿಇ ವಿಶ್ವ ಚೆಸ್​ ಚಾಂಪಿಯನ್​ಶಿಪ್​​-2000 ಅನ್ನು ಜಯಿಸಿ, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ವಿಶ್ವನಾಥನ್ ಆನಂದ್ ಪಾತ್ರರಾಗಿದ್ದರು.

Viswanathan Anand
ವಿಶ್ವನಾಥ್​ ಆನಂದ್​

By

Published : Dec 24, 2020, 6:28 PM IST

Updated : Dec 24, 2020, 7:02 PM IST

ಹೈದರಾಬಾದ್​​:20 ವರ್ಷಗಳ ಹಿಂದೆ ಅಂದಿನ ಈ ದಿನ (ಡಿಸೆಂಬರ್​ 24, 2000)ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಸ್ಪೇನ್​​ನ ಅಲೆಕ್ಸಿ ಶಿರೋವ್​ ಅವರನ್ನು ಮಣಿಸಿ ಮೊದಲ ಬಾರಿಗೆ ದಿ ಇಂಟರ್ನ್ಯಾಷನಲ್​ ಚೆಸ್​ ಫೆಡರೇಷನ್ (ಎಫ್​​​ಐಡಿಇ) ವಿಶ್ವ ಚೆಸ್​ ಚಾಂಪಿಯನ್​ಶಿಪ್​ ಗೆದ್ದು ದಾಖಲೆ ಬರೆದಿದ್ದರು.

ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಎಫ್​​​ಐಡಿಇ ವಿಶ್ವ ಚೆಸ್​ ಚಾಂಪಿಯನ್​ಶಿಪ್​​-2000ನವದೆಹಲಿ ಮತ್ತು ಟೆಹ್ರಾನ್‌ನಲ್ಲಿ ನಡೆದಿತ್ತು. ಟೂರ್ನಿಯ ಅಂತಿಮ ಪಂದ್ಯ ಡಿ.20 ರಿಂದ 24ರವರೆಗೆ ಜರುಗಿತ್ತು. ವಿಶ್ವನಾಥನ್​​​ ಆನಂದ್​ ಅವರು, 20 ವರ್ಷಗಳ ಹಿಂದೆ ಈ ದಿನ ಏನು ನಡೆದಿತ್ತು ಎಂಬುದನ್ನು ಊಹಿಸುವಿರಾ? ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ...ಧೋನಿ ನಿವೃತ್ತಿ ಸೇರಿದಂತೆ 2020ರ ಪ್ರಮುಖ ಕ್ರೀಡಾ ನೆನಪುಗಳು

ಉದಯೋನ್ಮುಖ ಚೆಸ್​ ತಾರೆಗಳ ಸೃಷ್ಟಿಸಲು ಅಕಾಡೆಮಿ ಆರಂಭಿಸುತ್ತಿರುವುದಾಗಿ ಈ ತಿಂಗಳ ಆರಂಭದಲ್ಲಿ ವಿಶ್ವನಾಥನ್​ ಘೋಷಿಸಿದ್ದರು. ವೆಸ್ಟ್​​​​ಬ್ರಿಡ್ಜ್​​​​​ ಆನಂದ್ ಚೆಸ್ ಅಕಾಡೆಮಿ (ಡಬ್ಲ್ಯೂಎಸಿಎ) ಪ್ರಾರಂಭಿಸುವ ಕುರಿತು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ. ದೇಶದಲ್ಲಿ ಪ್ರತಿಭೆಗಳನ್ನು ಬೆಳೆಸುವ ನನ್ನ ಕನಸು ಇಂದು ನನಸಾಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು.

ಕಿರಿಯ ಚೆಸ್ ತಾರೆಗಳನ್ನು ಉನ್ನತ ಶ್ರೇಣಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ ಫೆಲೋಶಿಪ್ ಕಾರ್ಯಕ್ರಮವಾಗಲಿದೆ ಎಂದೂ ಹೇಳಿದ್ದರು.

Last Updated : Dec 24, 2020, 7:02 PM IST

ABOUT THE AUTHOR

...view details