ಕರ್ನಾಟಕ

karnataka

ETV Bharat / sports

ಟಿ -20: 4 ವಿಕೆಟ್ ಸಾಧನೆಗೆ ರಾಹುಲ್ ಸರ್ ಪ್ರೋತ್ಸಾಹವೇ ಕಾರಣ - ಅವೇಶ ಖಾನ್ ಮಾತು - ಅವೇಶ್ ಖಾನ್ ಹೇಳಿಕೆ

"ರಾಹುಲ್ ಸರ್ ಹಾಗೂ ಟೀಂ ಮ್ಯಾನೇಜ್ ಮೆಂಟ್​ನವರು ನನಗೆ ಮತ್ತೊಂದು ಅವಕಾಶ ನೀಡಿದ್ದರಿಂದ ನಾನಿವತ್ತು ನಾಲ್ಕು ವಿಕೆಟ್ ಪಡೆದು ಅತ್ಯುತ್ತಮ ಆಟವನ್ನು ಪ್ರದರ್ಶಿಸಲು ಸಾಧ್ಯವಾಯಿತು. ಇವತ್ತು ನನ್ನ ತಂದೆಯ ಬರ್ತ ಡೇ ಸಹ ಇದೆ. ಇಂದಿನ ಈ ಸಾಧನೆ ಅವರಿಗೆ ನನ್ನ ಕಡೆಯಿಂದ ಗಿಫ್ಟ್​." ಎಂದು ಅವೇಶ್ ಕುಮಾರ್ ಖುಷಿಯಿಂದ ಹೇಳಿದರು.

There was pressure but credit to Rahul sir for giving chances to everybody: Avesh
There was pressure but credit to Rahul sir for giving chances to everybody: Avesh

By

Published : Jun 18, 2022, 12:09 PM IST

Updated : Jun 18, 2022, 2:18 PM IST

ರಾಜಕೋಟ್ : ಮೊದಲ ಮೂರು ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆಯದೇ ಒತ್ತಡದಲ್ಲಿದ್ದರೂ, ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಪ್ರೋತ್ಸಾಹದ ಕಾರಣದಿಂದಲೇ ನಾಲ್ಕನೇ ಟಿ-20 ಪಂದ್ಯದಲ್ಲಿ ತಾವು ಪಂದ್ಯ ಗೆಲ್ಲುವ ಮಟ್ಟದ ಸಾಧನೆಯನ್ನು ತೋರಲು ಸಾಧ್ಯವಾಯಿತು ಎಂದು ಭಾರತದ ಫಾಸ್ಟ್ ಬೌಲರ್ ಅವೇಶ್ ಖಾನ್ ಹೇಳಿದ್ದಾರೆ. ಕರಾರುವಾಕ್ ಲೆಂಗ್ತ್​ನ ಬೌಲಿಂಗ್ ಮೂಲಕ 18 ರನ್ ಗಳಿಗೆ 4 ವಿಕೆಟ್ ಗಳಿಸಿದ್ದು ಅವೇಶ್ ಅವರ ವೃತ್ತಿಯ ಬೆಸ್ಟ್ ಸಾಧನೆಯಾಗಿದೆ.

ಮೊದಲ ಎರಡು ಪಂದ್ಯಗಳನ್ನು ಸೋತರೂ ಟೀಂ ಇಂಡಿಯಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ನಾಲ್ಕು ಪಂದ್ಯಗಳ ಅವಧಿಯಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಈ ಕ್ರೆಡಿಟ್ ರಾಹುಲ್ ಸರ್​​​​ಗೆ ಸಲ್ಲುತ್ತದೆ. ರಾಹುಲ್ ಸರ್ ಪ್ರತಿಯೊಬ್ಬರಿಗೂ ಅವಕಾಶ ನೀಡುತ್ತಾರೆ ಹಾಗೂ ಎಲ್ಲರಿಗೂ ಸಾಕಷ್ಟು ಸಮಯವನ್ನೂ ನೀಡುತ್ತಾರೆ." ಎಂದು ಶುಕ್ರವಾರ ಸಂಜೆ ನಡೆದ ಮಾಧ್ಯಮ ಸಂವಾದದಲ್ಲಿ ಅವೇಶ್ ಖಾನ್ ಹೇಳಿದರು.

"ಒಂದು ಅಥವಾ ಎರಡು ಪಂದ್ಯಗಳಿಂದ ಯಾವುದೇ ಆಟಗಾರರನ್ನು ಅಳೆಯಲು ಸಾಧ್ಯವಿಲ್ಲ. ಅದರಂತೆ ಅವರು ಒಂದೆರಡು ಪಂದ್ಯಗಳ ಆಧಾರದಲ್ಲಿ ಯಾವುದೇ ಆಟಗಾರರನ್ನು ಬದಲಾವಣೆ ಮಾಡಲ್ಲ. ತಮ್ಮ ಪ್ರತಿಭೆ ತೋರಿಸಲು ಪ್ರತಿಯೊಬ್ಬರಿಗೂ ಸಾಕಷ್ಟು ಅವಕಾಶ ಸಿಗುತ್ತಿದೆ. ಎಂದು ಅವೇಶ ತಿಳಿಸಿದರು.

ರಾಹುಲ್ ಸರ್ ಹಾಗೂ ಟೀಂ ಮ್ಯಾನೇಜ್ ಮೆಂಟ್​ನವರು ನನಗೆ ಮತ್ತೊಂದು ಅವಕಾಶ ನೀಡಿದ್ದರಿಂದ ನಾನಿವತ್ತು ನಾಲ್ಕು ವಿಕೆಟ್ ಪಡೆದು ಅತ್ಯುತ್ತಮ ಆಟವನ್ನು ಪ್ರದರ್ಶಿಸಲು ಸಾಧ್ಯವಾಯಿತು. ಇವತ್ತು ನನ್ನ ತಂದೆಯ ಬರ್ತ ಡೇ ಸಹ ಇದೆ. ಇಂದಿನ ಈ ಸಾಧನೆ ಅವರಿಗೆ ನನ್ನ ಕಡೆಯಿಂದ ಗಿಫ್ಟ್​ ಎಂದು ಅವೇಶ್ ಕುಮಾರ್ ಖುಷಿಯಿಂದ ಹೇಳಿದರು.

ಟಿ20 ವಿಶ್ವ ಕಪ್ ಪಂದ್ಯಗಳಲ್ಲಿ ಆಡುವ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಆಯ್ಕೆ ಮಾಡುವ ವಿಷಯ ನನ್ನ ಕೈಯಲ್ಲಿಲ್ಲ. ಆದರೆ ಟೀಂ ಇಂಡಿಯಾಗಾಗಿ ನನ್ನ ಶೇ 100 ರಷ್ಟು ಪ್ರತಿಭೆಯನ್ನು ನೀಡುತ್ತೇನೆ. ಆಟದ ನಂತರ ನನ್ನ ಬಗ್ಗೆ ನನಗೇ ಅಸಮಾಧಾನವಾಗದಂತೆ ಆಟವಾಡುವೆ" ಎಂದರು.

Last Updated : Jun 18, 2022, 2:18 PM IST

ABOUT THE AUTHOR

...view details