ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಸೋಮವಾರ ಸುಮಿತ್ ಅಂತಿಲ್ ಪುರುಷರ F64 ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಮುರಿದು ಭಾರತಕ್ಕೆ 2ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಈ ಪ್ಯಾರಾ ಕ್ರೀಡಾಪಟುವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಇಡೀ ದೇಶ ನಿಮ್ಮ ಪ್ರದರ್ಶನದಿಂದ ಹೆಮ್ಮೆ ಪಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುಮಿತ್ F64 ಜಾವಲಿನ್ ಥ್ರೋ ಫೈನಲ್ಸ್ನಲ್ಲಿ 68.55 ಮೀಟರ್ ಎಸೆದು ವಿಶ್ವದಾಖಲೆ ಬ್ರೇಕ್ ಮಾಡಿ ಚಿನ್ನದ ಪದಕ ಗೆದ್ದರು. ಟೋಕಿಯೊದ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಿತ್ ತಮ್ಮ ಮೊದಲ ಪ್ರಯತ್ನದಲ್ಲಿ 66.95 ಮೀಟರ್ ಎಸೆದು ವಿಶ್ವದಾಖಲೆ ಬರೆದಿದ್ದರು. ಆದರೆ ತಮ್ಮ 2ನೇ ಅವಕಾಶದಲ್ಲಿ 68.08 ಮೀಟರ್ ಎಸೆದು ಮತ್ತೆ ತಮ್ಮದೇ ದಾಖಲೆಯನ್ನು ವಿಸ್ತರಿಸಿಕೊಂಡರು. ಮತ್ತೆ 5ನೇ ಪ್ರಯತ್ನದಲ್ಲಿ 68.55 ಮೀಟರ್ ಎಸೆದು ಒಂದೇ ಫೈನಲ್ಸ್ನಲ್ಲಿ 3ಬಾರಿ ವಿಶ್ವದಾಖಲೆ ಬ್ರೇಕ್ ಮಾಡಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು.