ಬ್ಯಾಂಕಾಕ್(ಥಾಯ್ಲೆಂಡ್):ಹಲವು ದಿನಗಳ ಬಳಿಕ ಮತ್ತೆ ಬ್ಯಾಡ್ಮಿಂಟನ್ ಅಂಗಳಕ್ಕೆ ಇಳಿದ ಹಿರಿಯ ಷಟ್ಲರ್, ಸೈನಾ ನೆಹ್ವಾಲ್ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಗಾ ಯುನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದರು.
ಭಾರತಕ್ಕೆ 2 ಬಾರಿ ಒಲಂಪಿಕ್ಸ್ ಪದಕ ತಂದು ಕೊಟ್ಟಿರುವ ಸೈನಾ ನೆಹ್ವಾಲ್ ದಕ್ಷಿಣ ಕೊರಿಯಾದ ಆಟಗಾರ್ತಿ ವಿರುದ್ಧ ಮೊದಲ ಸೆಟ್ನಲ್ಲಿ 21-11 ರಲ್ಲಿ ಭರ್ಜರಿ ಆರಂಭ ಪಡೆದರು. ಆದರೆ, ಬಳಕ ನಡೆದ 2ನೇ ಸೆಟ್ನಲ್ಲಿ 15-21, ಮೂರನೇ ಸೆಟ್ನಲ್ಲಿ 17-21ರಿಂದ ಹಿನ್ನಡೆ ಹೊಂದುವ ಮೂಲಕ ಪಂದ್ಯವನ್ನು ಕೈಚೆಲ್ಲಿ, ಟೂರ್ನಿಯಿಂದಲೇ ಹೊರನಡೆಯಬೇಕಾಯಿತು.
ಡಬಲ್ಸ್ನಲ್ಲೂ ನಿರಾಸೆ:ಇನ್ನೊಂದೆಡೆ ನಡೆದ ಮಿಶ್ರ ಡಬಲ್ಸ್ನಲ್ಲಿ ರೆಡ್ಡಿ ಬಿ.ಸುಮೀತ್ ಮತ್ತು ಅಶ್ವಿನಿ ಪೊನ್ನಪ್ಪ ಅವರು ಜಪಾನ್‌ನ ಯುಕಿ ಕನೆಕೊ ಮತ್ತು ಮಿಸಾಕಿ ಮತ್ಸುಟೊಮೊ ವಿರುದ್ಧ ಸೋಲು ಕಂಡಿದ್ದಾರೆ. ಸುಮೀತ್ ಮತ್ತು ಪೊನ್ನಪ್ಪ ಮೊದಲ ಎರಡೂ ಗೇಮ್‌ಗಳನ್ನು ತಲಾ 21-17, 21-17 ರಿಂದ ಸೋಲುವ ಮೂಲಕ ಟೂರ್ನಿಯಿಂದ ಹೊರನಡೆದರು.