ಕರ್ನಾಟಕ

karnataka

ವಿಶ್ವದ ನಂಬರ್‌ 1 ಟೆನಿಸ್‌ ಆಟಗಾರ್ತಿ 25 ವರ್ಷದ ಆಶ್ಲೇ ಬಾರ್ಟಿ ನಿವೃತ್ತಿ ಘೋಷಣೆ

By

Published : Mar 23, 2022, 11:50 AM IST

ಬಾರ್ಟಿ ನಿವೃತ್ತಿ ಘೋಷಣೆಗೆ ಕ್ರೀಡಾ ಜಗತ್ತು ಅಚ್ಚರಿ ವ್ಯಕ್ತಪಡಿಸಿದೆ. ಕೆಲ ಮಹಿಳಾ ಆಟಗಾರ್ತಿಯರು ಅವರೊಂದಿಗೆ ಆಡಿದ ಅನುಭವವನ್ನು ಸ್ಮರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ..

tennis world no 1 ashleigh barty retires at 25
ವಿಶ್ವದ ನಂಬರ್‌ 1 ಟೆನಿಸ್‌ ಆಟಗಾರ್ತಿ 25 ವರ್ಷದ ಆಶ್ಲೇ ಬಾರ್ಟಿ ನಿವೃತ್ತಿ ಘೋಷಣೆ

ಮಹಿಳಾ ಟೆನಿಸ್‌ ವಿಭಾಗದಲ್ಲಿನ ವಿಶ್ವದ ನಂಬರ್ ಒನ್ ಶ್ರೇಯಾಂಕಿತೆ ಆಶ್ಲೇ ಬಾರ್ಟಿ ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೇವಲ 25 ವರ್ಷದ ಟೆನಿಸ್‌ ಆಟಗಾರ್ತಿ ಬಾರ್ಟಿ ತಮ್ಮ ನಿವೃತ್ತಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಬಾರ್ಟಿ ಮೂರು ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದಿದ್ದಾರೆ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಇವರು ನಿವೃತ್ತಿಯ ನಿರ್ಧಾರ ಕೈಗೊಂಡಿರುವುದು ಭಾರಿ ಸಂಚಲನ ಮೂಡಿಸಿದೆ.

ಸುಮಾರು 44 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಮತ್ತು 41 ವರ್ಷಗಳ ನಂತರ ವಿಂಬಲ್ಡನ್ ಗೆದ್ದ ದಾಖಲೆಯನ್ನು ಆಶ್ಲೇ ಮಾಡಿದ್ದಾರೆ. ಇಂತಹ ಕಠಿಣ ನಿರ್ಧಾರವನ್ನು ಹೇಗೆ ಬಹಿರಂಗಪಡಿಸಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದರೂ, ನಮ್ಮ ಉಳಿದ ಕನಸುಗಳನ್ನು ನನಸು ಮಾಡುವತ್ತ ಗಮನ ಹರಿಸಲಾಗುವುದು ಎಂದು ಬಾರ್ಟಿ ತಿಳಿಸಿದ್ದಾರೆ.

ಬಾರ್ಟಿ ಮಹಿಳೆಯರ ವಿಭಾಗದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಂಬರ್‌ 1 ಸ್ಥಾನದಲ್ಲಿದ್ದ ನಾಲ್ಕನೇ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ. ಕಳೆದ 121 ವಾರಗಳಿಂದ ನಂಬರ್‌ ಒನ್‌ ಸ್ಥಾನದಲ್ಲಿ ಉಳಿದಿದ್ದಾರೆ. ಸ್ಟೆಫಿ ಗ್ರಾಫ್ (186 ವಾರಗಳು), ಸೆರೆನಾ ವಿಲಿಯಮ್ಸ್ (186 ವಾರಗಳು) ಹಾಗೂ ಮಾರ್ಟಿನಾ ನವಾಟ್ರಿಲೋವಾ (156 ವಾರಗಳು) ಅಗ್ರ ಸ್ಥಾನ ಕಾಯ್ದುಕೊಂಡಿದ್ದವರು.

ಬಾರ್ಟಿ ನಿವೃತ್ತಿ ಘೋಷಣೆಗೆ ಕ್ರೀಡಾ ಜಗತ್ತು ಅಚ್ಚರಿ ವ್ಯಕ್ತಪಡಿಸಿದೆ. ಕೆಲ ಮಹಿಳಾ ಆಟಗಾರ್ತಿಯರು ಅವರೊಂದಿಗೆ ಆಡಿದ ಅನುಭವವನ್ನು ಸ್ಮರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ನಂ.1 ಆಶ್ಲೇ ಬಾರ್ಟಿ ಮುಡಿಗೆ ಆಸ್ಟ್ರೇಲಿಯನ್ ಓಪನ್ ​: ಬರೋಬ್ಬರಿ 44 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯನ್​!

For All Latest Updates

ABOUT THE AUTHOR

...view details