ಕರ್ನಾಟಕ

karnataka

ETV Bharat / sports

2028ರ ಒಲಿಂಪಿಕ್ಸ್​: ಟಾಪ್​ 10ರಲ್ಲಿ ಸ್ಥಾನ ಪಡೆಯುವುದೇ ನಮ್ಮ ಗುರಿ- ಕಿರಣ್​ ರಿಜಿಜು - 2028 ಒಲಿಂಪಿಕ್ಸ್​

2024 ರ ಒಲಿಂಪಿಕ್ಸ್ ಅನ್ನು ಫ್ರಾನ್ಸ್ ಆಯೋಜಿಸಲಿದ್ದು, 2028ರ ಕ್ರೀಡಾಕೂಟ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ನಡೆಯಲಿದೆ.

2028 ಒಲಿಂಪಿಕ್ಸ್​
ಕಿರಣ್​ ರಿಜಿಜು

By

Published : Jun 13, 2020, 10:51 AM IST

ಮುಂಬೈ:2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಟಾಪ್​ 10ಕ್ಕೇರಿಸುವುದೇ ನಮ್ಮ ಗುರಿ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಕೇವಲ ಒಲಿಂಪಿಕ್ಸ್​ನಲ್ಲಿ ಭಾಗವಹಿಸುವುದರ ಕಡೆಗೆ ಮಾತ್ರ ನಮ್ಮ ಗುರಿಯಾಗಿರಬಾರದು. ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುವುದು ಬಹಳ ಮುಖ್ಯ ಎಂದು ಅವರು ಟೆನ್ನಿಸ್​ ಆಟಗಾರ್ತಿ ಮುದಿತ್​ ದಾನಿ ನಡೆಸಿದ ಇನ್ಸ್ಟಾ ಲೈವ್​ನಲ್ಲಿ ತಿಳಿಸಿದ್ದಾರೆ.

ಆದ್ದರಿಂದ 2028ರ ವೇಳೆಗೆ ಭಾರತವನ್ನು ಅಗ್ರ 10 ಒಲಿಂಪಿಕ್​ ರಾಷ್ಟ್ರಗಳಲ್ಲಿ ಒಂದು ದೇಶವನ್ನಾಗಿ ಮಾಡುವುದು ನಮ್ಮ ಮುಂದಿರುವ ಯೋಜನೆ. ಇದು ನಾನು ನಿಗದಿಪಡಿಸಿರುವ ಗುರಿ ಮತ್ತು ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ ಮತ್ತು ಎಲ್ಲಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳೊಂದಿಗೆ ನಾವು ಕೆಲವು ಯೋಜನೆ ಹಾಗೂ ಕಾರ್ಯ ತಂತ್ರಗಳನ್ನು ರೂಪಿಸಿದ್ದೇವೆ ಎಂದು ಅವರು ಹೇಳಿದರು.

ಈಗಾಗಲೇ 2020ರಲ್ಲಿ ಜಪಾನ್​ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್​ ಅನ್ನು ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. 2024ರ ಒಲಿಂಪಿಕ್ಸ್​ ಅನ್ನು ಪ್ಯಾರಿಸ್​ ಆಯೋಜಿಸಲಿದೆ. 2028ರ ಆವೃತ್ತಿ ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ನಡೆಯಲಿದೆ.

2024ರ ಒಲಿಂಪಿಕ್ಸ್​ನಲ್ಲಿ ನಮ್ಮ ಅಥ್ಲೀಟ್​ಗಳು ಉತ್ತಮ ಪ್ರದರ್ಶನ ತೋರಲಿದ್ದಾರೆ. ಆದರೆ 2028 ಒಲಿಂಪಿಕ್ಸ್‌ನಲ್ಲಿ ಟಾಪ್ 10ಕ್ಕೇರುವುದು ನಮ್ಮ ಉದ್ದೇಶ ಎಂದು ಸಚಿವ​ ರಿಜಿಜು ಅಭಿಪ್ರಾಯಪಟ್ಟರು.

ABOUT THE AUTHOR

...view details