ಗುವಾಹಟಿ (ಅಸ್ಸೋಂ): ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಭಾನುವಾರ ಗುವಾಹಟಿ ಮಾಸ್ಟರ್ಸ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಸೂಪರ್ 100 ಪಂದ್ಯಾವಳಿಯಲ್ಲಿ ಎರಡನೇ ಶ್ರೇಯಾಂಕದ ಪೊನ್ನಪ್ಪ ಮತ್ತು ಕ್ರಾಸ್ಟೊ, ತೈವಾನ್‌ನ ಸಂಗ್ ಶುಯೋ ಯುನ್ ಮತ್ತು ಯು ಚಿಯೆನ್ ಹುಯಿ ಅವರನ್ನು 21-13, 21-19 ರಿಂದ ಸೋಲಿಸಿ ತಮ್ಮ ಎರಡನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಈ ವರ್ಷದ ಆರಂಭದಲ್ಲಿ ಇದೇ ಜೋಡಿ ಅಬುಧಾಬಿ ಮಾಸ್ಟರ್ಸ್ ಸೂಪರ್ 100 ಪಂದ್ಯಾವಳಿಯನ್ನು ಗೆದ್ದಿತ್ತು. ಲಕ್ನೋದಲ್ಲಿ ಕಳೆದ ವಾರ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300 ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಜಪಾನ್‌ನ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರನ್ನು ಸೋಲಿಸಿತು.
ಗುವಾಹಟಿಯಲ್ಲಿ ನಡೆದ ಫೈನಲ್‌ನ ಮೊದಲ ಬ್ಯಾಡ್ಮಿಂಟನ್ ಆಟವು ಭಾರತೀಯ ಆಟಗಾರರು ಎದುರಾಳಿಯಿಂದ ಬಲಿಷ್ಠ ಪೈಪೋಟಿಯನ್ನು ಎದುರಿಸಲಿಲ್ಲ. ಎರಡೂ ಸೆಟ್ಗಳನ್ನು ಸುಲಭವಾಗಿ ಗೆದ್ದುಕೊಂಡರು. ಒಂದನೇ ಸೆಟ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಆರಂಭದಿಂದಲೇ ತೈವಾನ್ ಜೋಡಿಯ ಮೇಲೆ ನಿಯಂತ್ರಣ ಪಡೆದುಕೊಂಡಿತು. ಎಲ್ಲದೇ ಸ್ಕೋರ್ನ ಅಂತರವನ್ನು ಕಡಿಮೆ ಆಗದಂತೆ ನೋಡಿಕೊಂಡಿತು. ಇದರಿಂದ 21-13 ರ ಅಂತರದಲ್ಲಿ ಮೊದಲ ಸೆಟ್ ಭಾರತಕ್ಕೆ ಸೇರಿತು.