ಕರ್ನಾಟಕ

karnataka

ETV Bharat / sports

ಕುಸ್ತಿಪಟು ನರಸಿಂಗ್​ ಯಾದವ್​ಗೆ ವರವಾದ ಕೊರೊನಾ: ಚಿಗುರಿದ ಒಲಿಂಪಿಕ್ಸ್ ಕನಸು​ - ಲಕ್ನೋದಲ್ಲಿ ಕುಸ್ತಿ ತರಬೇತಿ ಶಿಬಿರ

31 ವರ್ಷದ ನರಸಿಂಗ್​ ಯಾದವ್​ 2016ರಲ್ಲಿ ಡೂಪಿಂಗ್​ನಲ್ಲಿ ಸಿಕ್ಕುಬಿದ್ದಿದ್ದರಿಂದ ಭಾರತ ಕುಸ್ತಿ ಒಕ್ಕೂಟ ನರಸಿಂಗ್​ಗೆ 4 ವರ್ಷಗಳ ಕಾಲ ನಿಷೇಧವೇರಿತ್ತು. ಇದೀಗ ಜುಲೈಗೆ ಅವರ ನಿಷೇಧದ ಅವಧಿ ಮುಗಿದಿರುವುದರಿಂದ ಸೆಪ್ಟೆಂಬರ್​ 1 ರಿಂದ ಲಕ್ನೋದಲ್ಲಿ ಆರಂಭವಾಗಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕುಸ್ತಿಪಟು ನರಸಿಂಗ್​ ಯಾದವ್
ಕುಸ್ತಿಪಟು ನರಸಿಂಗ್​ ಯಾದವ್

By

Published : Aug 17, 2020, 7:42 PM IST

ನವದೆಹಲಿ: ಪ್ರಪಂಚದೆಲ್ಲೆಡೆ ಕೋವಿಡ್​ 19 ನಿಂದ ಎಲ್ಲಾ ಕ್ರೀಡೆಗಳು ಸ್ಥಗಿತಗೊಂಡಿದ್ದವು. ಕೆಲವು ಕ್ರೀಡಾಪಟುಗಳು ಸಂಕಷ್ಟಕ್ಕೀಡಾಗಿದ್ದು ನಿಜ. ಆದರೆ ಕುಸ್ತಿಪಟು ನರಸಿಂಗ್​ ಯಾದವ್​ಗೆ ಮಾತ್ರ ಕೊರೊನಾ ದಿಂದ ಭಾರಿ ಅನುಕೂಲವಾಗಿದೆ.

ಪ್ರಪಂಚದಾದ್ಯಂತ ಕೊರೊನಾ ಪ್ರಕರಣಗಳು ತೀರ್ವಗತಿಯಲ್ಲಿ ಹೆಚ್ಚಾಗಿದ್ದರಿಂದ ಕೆಲವು ಕ್ರೀಡಾ ಟೂರ್ನಮೆಂಟ್​ಗಳನ್ನು ಮುಂದೂಡಲಾಯಿತು. ಅದರಲ್ಲಿ ಟೋಕಿಯೋದಲ್ಲಿ ನಡೆಯಬೇಕಿದ್ದ 2020ರ ಒಲಿಂಪಿಕ್​ ಕೂಡ ಒಂದಾಗಿತ್ತು. ಒಲಿಂಪಿಕ್ಸ್​ ಒಂದು ಮುಂದೂಡಲ್ಪಟ್ಟಿರುವುದರಿಂದ ನಾಲ್ಕು ವರ್ಷಗಳ ಅವಧಿಗೆ ನಿಷೇಧಕ್ಕೊಳಗಾಗಿದ್ದ ನರಸಿಂಗ್​ ಯಾದವ್​ ಅವರ ನಿಷೇಧ ಮುಗಿದಿದ್ದು, ಮುಂದಿನ ಒಲಿಂಪಿಕ್ಸ್​ನಲ್ಲಿ ಭಾಗವಹಿಸಲು ಒಂದು ಅವಕಾಶ ಸಿಕ್ಕಂತಾಗಿದೆ.

31 ವರ್ಷದ ನರಸಿಂಗ್​ ಯಾದವ್​ 2016ರಲ್ಲಿ ಡೂಪಿಂಗ್​ನಲ್ಲಿ ಸಿಕ್ಕುಬಿದ್ದಿದ್ದರಿಂದ ಭಾರತ ಕುಸ್ತಿ ಒಕ್ಕೂಟ ನರಸಿಂಗ್​ಗೆ 4 ವರ್ಷಗಳ ಕಾಲ ನಿಷೇಧವೇರಿತ್ತು. ಇದೀಗ ಜುಲೈಗೆ ಅವರ ನಿಷೇಧದ ಅವಧಿ ಮುಗಿದಿರುವುದರಿಂದ ಸೆಪ್ಟೆಂಬರ್​ 1 ರಿಂದ ಲಕ್ನೋದಲ್ಲಿ ಆರಂಭವಾಗಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುಶೀಲ್ ಕುಮಾರ್

ಈಗಾಗಲೆ ಕುಸ್ತಿ ಶಿಬಿರದಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿರುವ ನರಸಿಂಗ್​ ಯಾದವ್​ ಒಲಿಂಪಿಕ್ಸ್​ ಟ್ರೈಯಲ್ಸ್​ನಲ್ಲಿ 2 ಬಾರಿಯ ಒಲಿಂಪಿಕ್ಸ್​ ಪದಕ ವಿಜೇತ ಸುಶೀಲ್​ ಕುಮಾರ್​ ವಿರುದ್ಧ ಕಾದಾಡುವ ನಿರೀಕ್ಷೆಯಿದೆ.

ಈ ಬಗ್ಗೆ ಮಾತನಾಡಿರುವ ಭಾರತ ಕುಸ್ತಿ ಒಕ್ಕೂಟದ ಕಾರ್ಯದರ್ಶಿ ವಿನೋದ್​ ತೋಮರ್​, ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿರುವ ನರಸಿಂಗ್​ ಯಾದವ್​ ಸಮಿತಿಯಿಂದ ಒಪ್ಪಿಗೆ ಪಡೆದುಕೊಂಡ ಮೇಲೆ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅವರು ಭವಿಷ್ಯದಲ್ಲಿ ತುಂಬಾ ಜಾಗೃತರಾಗಿರುತ್ತೇನೆ ಎಂದು ಸಮಿತಿ ಮುಂದೆ ಪ್ರಮಾಣ ಮಾಡಿದ್ದಾರೆ. ಆದ್ದರಿಂದ ಅವರನ್ನು ತರಬೇತಿಗೆ ಶಿಬಿರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಜುಲೈನಲ್ಲೇ ಅವರ ನಿಷೇಧದ ಅವಧಿ ಮುಗಿದಿದೆ. ಹಾಗಾಗಿ ಅವರು ಒಲಿಂಪಿಕ್ಸ್​ಗಾಗಿ ತರಬೇತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ತೋಮರ್​ ಹೇಳಿದ್ದಾರೆ.

ಟ್ರಯಲ್ಸ್​ ವೇಳೆ ನರಸಿಂಗ್ ಯಾದವ್​ ಮತ್ತು ಸುಶೀಲ್​ ಕುಮಾರ್​ ನಡುವೆ ಪೈಪೋಟಿ ನಿರೀಕ್ಷಿಸಬಹುದೇ ಎಂಬುದಕ್ಕೆ ಉತ್ತರಿಸಿರುವ ಅವರು, 74 ಕೆಜಿ ವಿಭಾಗಕ್ಕೆ ಯಾರನ್ನು ಫೈನಲ್​ ಮಾಡಿಲ್ಲ. ಒಲಿಂಪಿಕ್ಸ್​ ಕ್ವಾಲಿಫೈಯರ್​ಗೂ ಮುನ್ನ ಟ್ರಯಲ್ಸ್​ ಇರಲಿದೆ. ಅಲ್ಲಿ ಸುಶೀಲ್, ನರಸಿಂಗ್​ ಮತ್ತು ಬೇರೆ ಯಾರೆ ಇದ್ದರೂ ಟ್ರಯಲ್ಸ್​ ಮೂಲಕವೇ ತೆರಳಬೇಕಿದೆ ಎಂದಿದ್ದಾರೆ.

ABOUT THE AUTHOR

...view details