ಕರ್ನಾಟಕ

karnataka

ETV Bharat / sports

ಮೆಡಲ್, ಪ್ರಶಸ್ತಿಗಳನ್ನು ವಾಪಸ್ ತೆಗೆದುಕೊಳ್ಳಿ, ಸುಶೀಲ್​ಗೆ ಕಠಿಣ ಶಿಕ್ಷೆ ನೀಡಿ : ಸರ್ಕಾರಕ್ಕೆ ಸಾಗರ್ ತಾಯಿ ಮನವಿ - ಸಾಗರ್ ಧನ್​ಕರ್​

ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಶೀಲ್ ಕುಮಾರ್​ಗೆ ಈಗಾಗಲೇ ದೆಹಲಿಯ ಜಿಲ್ಲಾ ನ್ಯಾಯಾಲಯ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಒಪ್ಪಿಸಿದೆ. ಈ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆಗೆ ಮಾತನಾಡಿರುವ ಮೃತ ಕುಸ್ತಿಪಟುವಿನ ಪೋಷಕರು ನಮಗೆ ನ್ಯಾಯ ಸಿಗಬೇಕು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ..

ಮೃತ ಸಾಗರ್ ತಾಯಿ ಸವಿತಾ ಧಂಕರ್
ಮೃತ ಸಾಗರ್ ತಾಯಿ ಸವಿತಾ ಧಂಕರ್

By

Published : May 25, 2021, 4:37 PM IST

ಸೋನಿಪತ್ ​:ಕುಸ್ತಿಪಟು ಸಾಗರ್​ ರಾಣಾ ಧಂಕರ್ ಕೊಲೆಗೆ ಸಂಬಂಧಿಸಿದಂತೆ ಬಂಧನವಾಗಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಅವರಿಗೆ ನೀಡಿರುವ ಗೌರವ ಪ್ರಶಸ್ತಿ ಮತ್ತು ಮೆಡಲ್​ಗಳನ್ನು ವಾಪಸ್ ಪಡೆಯಬೇಕು ಎಂದು ಅವರ ತಾಯಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಶೀಲ್ ಕುಮಾರ್​ಗೆ ಈಗಾಗಲೇ ದೆಹಲಿಯ ಜಿಲ್ಲಾ ನ್ಯಾಯಾಲಯ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಒಪ್ಪಿಸಿದೆ.

ಈ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆಗೆ ಮಾತನಾಡಿರುವ ಮೃತ ಕುಸ್ತಿಪಟುವಿನ ಪೋಷಕರು ನಮಗೆ ನ್ಯಾಯ ಸಿಗಬೇಕು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೃತ ಸಾಗರ್ ತಾಯಿ ಸವಿತಾ ಧಂಕರ್..

ಸಾಗರ್ ತಾಯಿ ಸವಿತಾ ಧಂಖರ್ ಮಾತನಾಡಿ, "ಆರೋಪಿ ಸುಶೀಲ್ ಕುಮಾರ್​ಗೆ ಮರಣದಂಡನೆ ಶಿಕ್ಷೆಯಾಗಬೇಕು. ಜೊತೆಗೆ ಸುಶೀಲ್​ ಪಡೆದಿರುವ ಎಲ್ಲಾ ಮೆಡಲ್ ಮತ್ತು ಗೌರವಾನ್ವಿತ ಪ್ರಶಸ್ತಿಗಳನ್ನು ವಾಪಸ್​ ಪಡೆಯಬೇಕು. ಸ್ಟೇಡಿಯಂನಿಂದ ಮತ್ತು ಕುಸ್ತಿ ಕ್ರೀಡಾ ವಿಭಾಗದಿಂದ ಸುಶೀಲ್ ಕುಮಾರ್​ರನ್ನು ತೆಗೆದು ಹಾಕಬೇಕು." ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಕುಸ್ತಿಪಟು ಸುಶೀಲ್ ಕುಮಾರ್‌ನ ನೌಕರಿಯಿಂದ ಕಿತ್ತೆಸೆದ ರೈಲ್ವೇ ಇಲಾಖೆ

ABOUT THE AUTHOR

...view details