ಸಂಚಿಯಾನ್: ಇಲ್ಲಿನ ಪಾಲ್ಮಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022ರಲ್ಲಿ ಪಿ.ವಿ.ಸಿಂಧು ಹಾಗೂ ಶ್ರೀಕಾಂತ್ ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಉಭಯ ಜೋಡಿ ಇದೀಗ ಎದುರಾಳಿಗಳಿಗೆ ಸೋಲಿನ ರುಚಿ ತೋರಿಸಿ, ಸೆಮಿಫೈನಲ್ಗೆ ಲಗ್ಗೆ ಹಾಕಿದೆ.
ಕ್ವಾರ್ಟರ್ ಫೈನಲ್ನಲ್ಲಿ ಪಿ.ವಿ.ಸಿಂಧು ಎದುರಾಳಿ ವಿರುದ್ಧ 21-10, 21-16 ಸೆಟ್ಗಳಿಂದ ಥಾಯ್ಲೆಂಡ್‌ನ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಮತ್ತೊಂದೆಡೆ, ಕಿಡಂಬಿ ಶ್ರೀಕಾಂತ್ ಕೊರಿಯಾದ ಆಟಗಾರ ಸೂನ್ ವಾನ್ ವಿರುದ್ಧ 21-12, 18-21 ಹಾಗೂ 21-12 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಕಿಡಂಬಿ ಶ್ರೀಕಾಂತ್ ಹಾಗೂ ಸೂನ್ ವಾನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಕಾರಣ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಪಂದ್ಯ ನಡೆಯಿತು.