ಕರ್ನಾಟಕ

karnataka

ETV Bharat / sports

2024-28 ರ ಒಲಿಂಪಿಕ್ಸ್​ಗಾಗಿ ಈಗಿನಿಂದಲೇ ತಯಾರಿ: ಕ್ರೀಡಾ ಇಲಾಖೆ ವಿಶೇಷ ಯೋಜನೆ - Target Olympic Podium Scheme

ಯುವ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾಪ್ಸ್) ಜೂನಿಯರ್ ಪ್ರಾರಂಭವಾಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ತಿಳಿಸಿದ್ದಾರೆ.

sports
sports

By

Published : Jul 4, 2020, 8:09 AM IST

ನವದೆಹಲಿ:2024 ಮತ್ತು 2028ರ ಒಲಿಂಪಿಕ್ಸ್‌ಗಾಗಿ ಭಾರತದ ಕ್ರೀಡಾ ಸಚಿವಾಲಯ ಈಗಿನಿಂದಲೇ ಸಜ್ಜಾಗುತ್ತಿದೆ. ಯುವ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಸಚಿವಾಲಯವು ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾಪ್ಸ್) ಜೂನಿಯರ್ ಪ್ರಾರಂಭಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ಕೇಂದ್ರ ಕ್ರೀಡಾ ಸಚಿವರು, "ನಾವು ಕಿರಿಯರಿಗಾಗಿ ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್) ಅನ್ನು ಪ್ರಾರಂಭಿಸಲಿದ್ದೇವೆ. ಇಂದು ನಾವು 10 ರಿಂದ 12 ವರ್ಷ ವಯಸ್ಸಿನ ಪ್ರತಿಭೆಗಳನ್ನು ಗುರುತಿಸಿ, ಸರ್ಕಾರವೇ ಅವರ ಜವಾಬ್ದಾರಿಯನ್ನ ತೆಗೆದುಕೊಂಡ ತರಬೇತಿ ನೀಡಲಿದೆ. ಈ ಮೂಲಕ ಈಗಿನಿಂದಲೇ 2024ರ ಪ್ಯಾರಿಸ್ ಮತ್ತು 2028 ಲಾಸ್​​ ಏಂಜಲಿಸ್​​​​​​ ಒಲಿಂಪಿಕ್ಸ್​​​ ಗೆ ಅಣಿಯಾಗುವುದು ನಮ್ಮ ಉದ್ದೇಶ ಎಂದು ಕಿರೆನ್​​​ ರಿಜಿಜು ಹೇಳಿದ್ದಾರೆ.

ಭಾರತೀಯ ಕ್ರೀಡಾ ಇಲಾಖೆ 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕನಿಷ್ಠ 10ನೇ ಶ್ರೇಯಾಂಕ ಹೊಂದುವ ಗುರಿ ಹೊಂದಿದೆ ಎಂದು ರಿಜಿಜು ಹೇಳಿದರು.

ABOUT THE AUTHOR

...view details