ನವದೆಹಲಿ: 19ನೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ಪದಕಗಳ ಶತಕ ಬಾರಿಸಿ ಇತಿಹಾಸ ನಿರ್ಮಿಸಿತ್ತು. ಅಕ್ಟೋಬರ್ 22 ರಿಂದ 28ರ ವರೆಗೆ ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (MYAS) 17 ಕ್ರೀಡಾ ವಿಭಾಗಗಳಲ್ಲಿ ಒಟ್ಟು 303 ಕ್ರೀಡಾಪಟುಗಳಿಗೆ ಅನುಮತಿ ನೀಡಿದೆ. ಅವರೊಂದಿಗೆ 143 ತರಬೇತುದಾರರು, ಎಸ್ಕಾರ್ಟ್‌ಗಳು, ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ತೆರಳಲಿದ್ದಾರೆ. ಅಥ್ಲೀಟ್‌ಗಳ ಪಟ್ಟಿಯು 191 ಪುರುಷ ಮತ್ತು 112 ಮಹಿಳಾ ಅಥ್ಲೀಟ್‌ಗಳನ್ನು ಒಳಗೊಂಡಿದೆ. ಅಥ್ಲೆಟಿಕ್ಸ್ ಈವೆಂಟ್‌ಗಳಿಗೆ 123 ಅಥ್ಲೀಟ್ ತಂಡಗಳು ತೆರಳುತ್ತಿವೆ.
ಭಾರತವು ಐದು ಕ್ರೀಡೆಗಳು ಸೇರಿದಂತೆ ಹದಿನೇಳು ವಿಭಾಗಗಳಲ್ಲಿ ಭಾಗವಹಿಸುತ್ತದೆ. ಕ್ಯಾನೋ, ಬ್ಲೈಂಡ್ ಫುಟ್ಬಾಲ್, ಲಾನ್ ಬೌಲ್ಸ್, ರೋಯಿಂಗ್ ಮತ್ತು ಟೇಕ್ವಾಂಡೋದಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿದೆ. ಅಕ್ಟೋಬರ್ 8 ರಂದು ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ನಲ್ಲಿ ಭಾರತ ಅವಿಸ್ಮರಣೀಯ ಸಾಧನೆಗಳನ್ನು ಮಾಡಿದೆ. ಶೂಟಿಂಗ್ ಮತ್ತು ಅಥ್ಲೀಟ್ ವಿಭಾಗದಲ್ಲಿ ಅತಿ ಹೆಚ್ಚು ಪದಕಗಳನ್ನು ಬಾಚಿಕೊಂಡದಲ್ಲದೇ, ಮೊದಲ ಬಾರಿಗೆ ಕ್ರಿಕೆಟ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿ,ಗಮನ ಸೆಳೆದಿದೆ.
ಕಳೆದ ಬಾಕಿ ಪ್ಯಾರಾ ಏಷ್ಯಾಡ್ನಲ್ಲಿ ಭಾರತ ಹಲವಾರು ಪದಕ ಸಾಧನೆಗಳನ್ನು ಮಾಡಿದೆ ಅದರಂತೆ ಈ ಬಾರಿಯೂ ದಾಖಲೆಯ ಪದಕ ಗಳಿಕೆಯ ವಿಶ್ವಾಸ ಮೂಡಿಸಿದೆ. 2018 ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಆವೃತ್ತಿಯಲ್ಲಿ 13 ಕ್ರೀಡಾಕೂಟಗಳಲ್ಲಿ ಒಟ್ಟು 190 ಕ್ರೀಡಾಪಟುಗಳು ಭಾಗವಹಿಸಿದ್ದರು, ಅಲ್ಲಿ ಭಾರತವು 15 ಚಿನ್ನ ಸೇರಿದಂತೆ ಒಟ್ಟು 72 ಪದಕಗಳನ್ನು ಜಯಿಸಿತ್ತು.