ಕರ್ನಾಟಕ

karnataka

ETV Bharat / sports

ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ನೂತನ ಲಾಂಛನ ಬಿಡುಗಡೆ - ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು

ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (ಎಸ್‌ಎಐ) ಹೊಸ ಲಾಂಛನವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಬಿಡುಗಡೆ ಮಾಡಿದ್ದಾರೆ.

Sports Minister Kiren Rijiju launches SAI's new logo
ಎಸ್‌ಎಐ ನೂತನ ಲಾಂಛನ ಬಿಡುಗಡೆ

By

Published : Oct 1, 2020, 6:57 AM IST

ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (ಎಸ್‌ಎಐ) ಹೊಸ ಲಾಂಛನವನ್ನು ಬಿಡುಗಡೆ ಮಾಡಿದ್ದಾರೆ.

ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೀಡಾ ಸಚಿವರು, ಸ್ಫೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಕ್ರೀಡಾ ಉತ್ಕೃಷ್ಟತೆಯನ್ನು ಉತ್ತೇಜಿಸುವ ಪ್ರಾಥಮಿಕ ಪ್ರತಿನಿಧಿಯಾಗಿದೆ ಎಂದಿದ್ದಾರೆ.

ಎಸ್​ಎಐ ಕ್ರೀಡಾಪಟುಗಳಿಗೆ ಅಗತ್ಯವಾದ ಬೆಂಬಲ ನೀಡಿದೆ. ಇದರಿಂದಾಗಿ ಅವರು ತಮ್ಮ ಕ್ರೀಡಾ ವೃತ್ತಿಯನ್ನು ಸುಗಮವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಅವರು ಸಾಧನೆಗಳು ಮತ್ತು ಕ್ರೀಡಾ ವೈಭವದ ಜೀವನಕ್ಕೆ ಹಾರಬಲ್ಲರು - ಅದನ್ನೇ ಹಾರುವ ವ್ಯಕ್ತಿ ಸೂಚಿಸುತ್ತದೆ ಎಂದು ಲಾಂಛನದ ಬಗ್ಗೆ ವಿವರಿಸಿದ್ದಾರೆ.

ಎಸ್‌ಎಐ ಎಂಬ ಪದವು ಭಾರತದ ಕ್ರೀಡಾ ಪ್ರಾಧಿಕಾರದ ಸಂಕ್ಷಿಪ್ತ ರೂಪವಾಗಿ ಸಂಸ್ಥೆಗೆ ಗುರುತನ್ನು ನೀಡುತ್ತದೆ. ವಿಶ್ವ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ದೊಡ್ಡ ದೊಡ್ಡ ಕ್ರೀಡಾಪಟುಗಳನ್ನು ಎಸ್‌ಎಐ ಪೋಷಿಸಿರುವುದರಿಂದ ಭಾರತೀಯ ತ್ರಿವರ್ಣ ಮತ್ತು ಚಕ್ರದ ನೀಲಿ ಬಣ್ಣವು ರಾಷ್ಟ್ರೀಯ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಲಾಂಛನವು ದೇಶದಲ್ಲಿ ಕ್ರೀಡಾ ಉತ್ಕೃಷ್ಟತೆಯನ್ನು ಸೃಷ್ಟಿಸುವ ತಳಮಟ್ಟದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವುದರಿಂದ ರೂಪ ಪರಿವರ್ತನೆಯ ಪ್ರಯಾಣವನ್ನು ಸೂಚಿಸುತ್ತದೆ ಎಂದು ಎಸ್‌ಎಐ ಹೇಳಿದೆ.

ABOUT THE AUTHOR

...view details