ಗುಲ್ಮಾರ್ಗ್(ಜ-ಕಾ): ಭಾರತದ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ (ವಿಂಟರ್ ಗೇಮ್ಸ್) ಕೇಂದ್ರ ಕ್ರೀಡಾ ಸಚಿವಾ ಕಿರಣ್ ರಿಜಿಜು ಜಮ್ಮುಕಾಶ್ಮೀರದಲ್ಲಿ ಚಾಲನೆ ನೀಡಿದ್ದಾರೆ.
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಕ್ರೀಡಾ ಸಚಿವಾ ಕಿರಣ್ ರಿಜಿಜು ಗುಲ್ಮಾರ್ಗ್ನಲ್ಲಿ ಈ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಗಡೂರ ದೈಹಿಕ ಶಿಕ್ಷಣ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿ ಯುವಕರೊಂದಿಗೆ ಅವರು ಸಂವಾದ ನಡೆಸಿದ್ದಾರೆ. ನಂತರ ಗಂದರ್ಬಲ್ ಮತ್ತು ಶ್ರೀನಗರ ಜಿಲ್ಲೆಯ ವಿವಿಧ ಕ್ರೀಡಾಕ್ಲಬ್ಗಳ 250 ಯುವ ಕ್ರೀಡಾಪಟುಗಳಿಗೆ ಸ್ಫೋರ್ಟ್ಸ್ ಕಿಟ್ ವಿತರಿಸಲಾಯಿತು.
ಫೆಬ್ರವರಿ 25 2020ರಂದು ಲಡಾಕ್ನಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವಾ ಕಿರಣ್ ರಿಜಿಜು ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಉದ್ಘಾಟನೆ ಮಾಡುವ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದರು. ನಂತರದ ಮೂರನೇ ವಾರದಲ್ಲಿ ಮೂರು ಚಳಿಗಾಲದ ಕ್ರೀಡೆಗಳಾದ ಐಸ್ ಹಾಕಿ, ಫಿಗರ್ ಸ್ಕೇಟಿಂಗ್ ಹಾಗೂ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಆಯೋಜನೆ ಮಾಡಲಾಗಿತ್ತು.
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ವಿಂಟರ್ ಕ್ರೀಡಾಕೂಟದ ಉದ್ದೇಶ:
ಚಳಿಗಾಲದ ಕ್ರೀಡೆಗಳು ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ದೇಶದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಚಳಿಗಾಲದ ಆಟಗಳನ್ನು ಯುವಪೀಳಿಗೆಗೆ ಪರಿಚಯಿಸುವ ಮೂಲಕ ಜನಪ್ರಿಯಗೊಳಿಸಬಹುದು. ಜೊತೆಗೆ ಇಂತಹ ಕ್ರೀಡಾಕೂಟದಿಂದ ಭಾರತದಲ್ಲಿ ಅದ್ಭುತ ಆಟಗಾರರನ್ನು ಸೃಷ್ಠಿ ಮಾಡಬಹುದು. ಈ ಮೂಲಕ ವಿಶ್ವಮಟ್ಟದಲ್ಲಿ ಪ್ರತಿ ನಾಲ್ಕು ವರ್ಷಗಳಿಗೆ ನಡೆಯುವ ವಿಂಟರ್ ಒಲಿಂಪಿಕ್ಸ್ನಲ್ಲಿ ಪದಕಗಳನ್ನು ಗೆದ್ದು ಭಾರತ ಹೆಮ್ಮೆ ಪಡುವಂತೆ ಮಾಡುವುದೇ ಈ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಆಯೋಜನೆಯ ಉದ್ದೇಶ.