ನವದೆಹಲಿ: ರಷ್ಯಾದಲ್ಲಿ ಈ ತಿಂಗಳ ಆರಂಭದಲ್ಲಿ ಕೊನೆಗೊಂಡ ಮಾಸ್ಕೋ ವುಶು ಸ್ಟಾರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮಂಗಳವಾರ ಗೌರವಿಸಿತು. ಸ್ಪರ್ಧೆಯಲ್ಲಿ ಒಟ್ಟು 17 ಪದಕಗಳನ್ನು ಪಡೆದ ಭಾರತೀಯ ಬಾಲಕಿಯರನ್ನು ಎಸ್‌ಎಐನ ಉಪ ಮಹಾನಿರ್ದೇಶಕರಾದ ಏಕ್ತಾ ವಿಷ್ಣೋಯ್ ಮತ್ತು ಶಿವ ಶರ್ಮಾ ಅವರು ಸನ್ಮಾನಿಸಿದರು.
ಒಂದು ವರ್ಷ ಭಾರತದಲ್ಲಿ ನಡೆದ ಖೇಲೋ ಇಂಡಿಯಾ ಮಹಿಳಾ ಲೀಗ್‌ಗಳಲ್ಲಿ ಭಾಗವಹಿಸಿದ ಬಾಲಕಿಯರು, ಜೂನಿಯರ್ ಬಾಲಕಿಯರು, ಸಬ್ ಜೂನಿಯರ್ ಬಾಲಕಿಯರು ಮತ್ತು ಹಿರಿಯ ಬಾಲಕಿಯರ ವಿಭಾಗಗಳ ತಂಡ ಮಾಸ್ಕೋ ವುಶು ಸ್ಟಾರ್ಸ್ ಚಾಂಪಿಯನ್‌ಶಿಪ್‌ನ ಸಂಡಾ ಫೈಟ್ ಮತ್ತು ತಾವೊಲುನಲ್ಲಿ 10 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಟ್ವೀಟ್ ಮಾಡಿದರು. "ನಮ್ಮ ಹುಡುಗಿಯರು ನಮ್ಮನ್ನು ಹೆಮ್ಮೆ ಪಡುವಂತೆ ಮಾಡುವುದು ಮತ್ತು ರಾಷ್ಟ್ರವು ಖೇಲೋ ಇಂಡಿಯಾ ಮಹಿಳಾ ಲೀಗ್‌ನ ಲಾಭವನ್ನು ಪಡೆಯುವುದನ್ನು ನೋಡುವುದು ಹೆಮ್ಮೆಯ ವಿಷಯವಾಗಿದೆ! ಖೇಲೋ ಇಂಡಿಯಾ ಲೀಗ್‌ನಲ್ಲಿ ಭಾಗವಹಿಸಿದರವರು ಈಗ ರಷ್ಯಾದಲ್ಲಿ ನಡೆದ ಮಾಸ್ಕೋ ವುಶು ಸ್ಟಾರ್ಸ್ ಚಾಂಪಿಯನ್‌ಶಿಪ್‌ನಲ್ಲಿ 17 ಪದಕ ಗೆದ್ದಿದ್ದಾರೆ" ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಪಟುಗಳಿಗೆ ಅಭಿನಂದನೆ ಸಂದೇಶದೊಂದಿಗೆ ರಿಟ್ವೀಟ್ ಮಾಡಿದ್ದಾರೆ.