ಮುಂಬೈ:ಇಲ್ಲಿ ನಡೆದ17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಕ್ರಿಸ್ಟಿನಾ ಗಳಿಸಿದ ಗೋಲು ಸ್ಪೇನ್‌ಗೆ ಗೆಲುವು ತಂದಿತ್ತಿತು. ಭಾನುವಾರ ನಡೆದ ಕೆಜಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಸ್ಪೇನ್ 1-0 ಗೋಲುಗಳಿಂದ ಕೊಲಂಬಿಯಾವನ್ನು ಸೋಲಿಸಿತು. ಡಿವೈ ಪಾಟೀಲ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 82ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿತ್ತು.
FIFA U 17 Women's World Cup: ಮತ್ತೆ ಪ್ರಶಸ್ತಿ ಮುಡಿಗೇರಿಸಿ ಕೊಂಡ ಸ್ಪೇನ್ - ಈಟಿವಿ ಭಾರತ ಕನ್ನಡ
ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಗೋಲುಗಳಿಂದ ಕೊಲಂಬಿಯಾ ಸೋಲಿಸಿದೆ.
ಏಕಾಂಗಿ ಗೋಲಿನಿಂದ ಸ್ಪೇನ್‌ಗೆ ಜಯ:ಏಷ್ಯನ್ ಫುಟ್‌ಬಾಲ್ ಒಕ್ಕೂಟ (ಎಎಫ್‌ಸಿ) ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಉನ್ನತ ಅಧಿಕಾರಿಗಳ ಜೊತೆಗೆ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಹಾಜರಿದ್ದರು. ಸ್ಪೇನ್ ಅಂತಿಮ ಘಟ್ಟದಲ್ಲಿ ಗಳಿಸಿದ ಏಕಾಂಗಿ ಗೋಲಿನಿಂದ ಗೆದ್ದಿತು. 2018ರಲ್ಲಿ ಗೆದ್ದ ಪ್ರಶಸ್ತಿಯನ್ನು ಸ್ಪೇನ್ ತನ್ನಲ್ಲೇ ಉಳಿಸಿ ಕೊಂಡಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಅರ್ಹತಾ ಪಂದ್ಯದಲ್ಲಿ ನೈಜೀರಿಯಾ ಪೆನಾಲ್ಟಿಯಲ್ಲಿ 3-2 ಗೋಲುಗಳಿಂದ ಜರ್ಮನಿಯನ್ನು ಸೋಲಿಸಿತು.
ಇದನ್ನೂ ಓದಿ :ನಾನು ಟೆನಿಸ್ನಿಂದ ನಿವೃತ್ತಿಯಾಗಿಲ್ಲ.. ಮತ್ತೆ ಮರಳುವ ಸಾಧ್ಯತೆಗಳು ಹೆಚ್ಚಿವೆ: ಸೆರೆನಾ ವಿಲಿಯಮ್ಸ್