ಕರ್ನಾಟಕ

karnataka

ETV Bharat / sports

ಎಫ್​ಐಎಚ್​ ಪ್ರೊ ಲೀಗ್: ಭಾರತಕ್ಕೆ ಕೊನೆ ಕ್ಷಣದಲ್ಲಿ ಸ್ಪೇನ್​ ಚಮಕ್.. 3-2 ರಲ್ಲಿ ಭಾರತೀಯರಿಗೆ ಸೋಲು - FIH Pro League

ಒಡಿಶಾದಲ್ಲಿ ನಡೆದ ಎಫ್​ಐಎಚ್​ ಪ್ರೊ ಲೀಗ್​ ಹಾಕಿ ಪಂದ್ಯದಲ್ಲಿ ಸ್ಪೇನ್​ ವಿರುದ್ಧ ಭಾರತ 3-2 ಗೋಲುಗಳಿಂದ ಸೋಲು ಕಂಡಿತು.

fih-pro-league
ಭಾರತಕ್ಕೆ ಕೊನೆ ಕ್ಷಣದಲ್ಲಿ ಸ್ಪೇನ್​ ಚಮಕ್

By

Published : Oct 31, 2022, 1:26 PM IST

ಭುವನೇಶ್ವರ (ಒಡಿಶಾ):ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎಫ್‌ಐಎಚ್ ಪ್ರೊ ಲೀಗ್​ನ 2ನೇ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ನಿರಾಸೆ ಅನುಭವಿಸಿದೆ. ಸ್ಪೇನ್ ವಿರುದ್ಧ 3-2 ಗೋಲುಗಳಿಂದ ಪರಾಜಿತವಾಗಿದೆ.

ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸ್ಪೇನ್​ ಭಾರತವನ್ನು ಒತ್ತಡಕ್ಕೆ ಸಿಲುಕಿಸಿತು. ಸ್ಪೇನ್​ ಆಟಗಾರ ಎಡ್ವರ್ಡ್ ಡಿ ಇಗ್ನಾಸಿಯೊ ಸಿಮೊ 16 ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಶುಭಾರಂಭ ಮಾಡಿದರು. 10 ನಿಮಿಷದ ಬಳಿಕ ಮಾರ್ಕ್ ಮಿರಾಲ್ಲೆಸ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಇದರಿಂದ ಸ್ಪೇನ್​ ಮೊದಲಾರ್ಧದಲ್ಲಿಯೇ 2-0 ಅಂತರ ಪಡೆದುಕೊಂಡಿತು.

ಈ ವೇಳೆ ದಿಟ್ಟ ಹೋರಾಟ ನೀಡಿದ ಭಾರತ ನಾಯಕ ಹರ್ಮನ್‌ಪ್ರೀತ್ ಸಿಂಗ್ ಸಿಂಗ್​ರ ಚಾಣಾಕ್ಷತನದ ಆಟಕ್ಕೆ ಕ್ಷಣಾರ್ಧದಲ್ಲೇ (26 ನೇ ನಿಮಿಷ) ಗೋಲು ಬಂದಿತು. ಬಳಿಕ ಅಭಿಷೇಕ್ 54 ನೇ ನಿಮಿಷದಲ್ಲಿ ಸ್ಪೇನ್​ ತಡೆಗೋಡೆ ಭೇದಿಸಿ ಗೋಲು ಬಾರಿಸಿದರು. ಪಂದ್ಯ 2-2 ಅಂತರದ ಸಮಬಲದಲ್ಲಿ ಸಾಗಿತು.

ಭಾರತಕ್ಕೆ ಕೊನೆ ನಿಮಿಷದ ಶಾಕ್​:ಪಂದ್ಯ ಮುಗಿಯಲು ಇನ್ನು 4 ನಿಮಿಷ ಬಾಕಿ ಇರುವಾಗ ಸ್ಪೇನ್​ನ ಮಾರ್ಕ್ ರೆಯ್ನೆ (56 ನೇ ನಿಮಿಷ) ಭಾರತದ ಭದ್ರಕೋಟೆಯನ್ನು ಭೇದಿಸಿ ಗೋಲು ಗಳಿಸಿದರು. ಇದರಿಂದ ತಂಡ 1 ಪಾಯಿಂಟ್​ ಮುನ್ನಡೆ ಪಡೆಯಿತು. ಬಳಿಕ ಭಾರತದ ಬಿರುಸಿನ ಆಟವಾಡಿದರೂ ಗೋಲು ಗಳಿಸಲು ಸಾಧ್ಯವಾಗದೇ 3-2 ರಿಂದ ಸೋಲು ಕಂಡಿತು. ಲೀಗ್‌ನ ಮುಂದಿನ ಪಂದ್ಯ ನವೆಂಬರ್ 4 ರಂದು ನ್ಯೂಜಿಲ್ಯಾಂಡ್​ ವಿರುದ್ಧ ನಡೆಯಲಿದೆ.

ಓದಿ:FIFA U 17 Women's World Cup: ಮತ್ತೆ ಪ್ರಶಸ್ತಿ ಮುಡಿಗೇರಿಸಿ ಕೊಂಡ ಸ್ಪೇನ್​

ABOUT THE AUTHOR

...view details