ಕರ್ನಾಟಕ

karnataka

ETV Bharat / sports

Hockey World Cup 2023: ಚರಂಡಿಗೆ ಬಿದ್ದ ವಿದೇಶಿ ಫೋಟೋ ಜರ್ನಲಿಸ್ಟ್ - ದಕ್ಷಿಣ ಕೊರಿಯಾ

ಒಡಿಶಾಕ್ಕೆ ಹಾಕಿ ವಿಶ್ವಕಪ್​ ಟೂರ್ನಿಯ ವರದಿ ಮಾಡಲು ಬಂದಿರುವ ದಕ್ಷಿಣ ಕೊರಿಯಾದ ಫೋಟೋ ಜರ್ನಲಿಸ್ಟ್ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

Etv Bharat
Etv Bharat

By

Published : Jan 12, 2023, 9:11 PM IST

Updated : Jan 12, 2023, 9:25 PM IST

ಭುವನೇಶ್ವರ (ಒಡಿಶಾ):ಒಡಿಶಾದಲ್ಲಿ ನಡೆಯುವ ಹಾಕಿ ವಿಶ್ವಕಪ್​ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ವಿಶ್ವಕಪ್ ವರದಿ ಮಾಡಲು ಬಂದಿರುವ ವಿದೇಶಿ ಪತ್ರಿಕಾ ಛಾಯಾಗ್ರಾಹಕರೊಬ್ಬರು ರಸ್ತೆಯಲ್ಲಿ ತೆರೆದ ಚರಂಡಿಗೆ ಬಿದ್ದಿರುವ ಘಟನೆ ನಡೆದಿದೆ. ಭುವನೇಶ್ವರದ ಡುಮ್ಡುಮಾ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ:Hockey World Cup: ಹಾಕಿಯಲ್ಲಿ 28 ಪದಕ ಗೆದ್ದಿರುವ ಭಾರತ: ಸ್ವಾತಂತ್ರ್ಯ ಪೂರ್ವದಲ್ಲೇ ಒಲಿಂಪಿಕ್ಸ್‌ನಲ್ಲಿ ಗೆಲುವಿನ ಸಿಹಿ

ನಾಳೆಯಿಂದ (ಜನವರಿ 13) ಆರಂಭವಾಗಲಿರುವ ಹಾಕಿ ವಿಶ್ವಕಪ್ ಒಡಿಶಾ ಸರ್ಕಾರ ಭರ್ಜರಿ ತಯಾರಿ ಮಾಡಿಕೊಂಡಿದೆ. ನಿನ್ನೆ ಅದ್ಧೂರಿ ಉದ್ಘಾಟನಾ ಸಮಾರಂಭವು ನೆರವೇರಿದ್ದು, ಸರ್ಕಾರದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ದಕ್ಷಿಣ ಕೊರಿಯಾದ ಹಾಕಿ ತಂಡದೊಂದಿಗೆ ಬಂದಿದ್ದ ಫೋಟೋ ಜರ್ನಲಿಸ್ಟ್ ಚರಂಡಿ ಬಿದ್ದು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಅವರ ಕಾಲು ಮುರಿದಿದೆ ಎಂದು ಹೇಳಲಾಗುತ್ತಿದೆ.

ನಡೆದಿದ್ದು ಏನು?: ಹಾಕಿ ವಿಶ್ವಕಪ್ ಟೂರ್ನಿ ನಿಮಿತ್ತ ಬುಧವಾರ ಅದ್ಧೂರಿ ಉದ್ಘಾಟನಾ ಸಮಾರಂಭವು ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಇತ್ತ, ರಾತ್ರಿ 9.30ರ ಸುಮಾರಿಗೆ ಕೊರಿಯಾ ತಂಡದ ಛಾಯಾಗ್ರಾಹಕ ತಾವು ತಂಗಿದ್ದ ಹೋಟೆಲ್ ಮುಂಭಾಗದಲ್ಲಿದ್ದ ರಸ್ತೆ ಬದಿಯ ಟೀ ಸ್ಟಾಲ್‌ನಲ್ಲಿ ಚಹಾ ಕುಡಿಯಲು ಬಂದಿದ್ದರು. ಈ ವೇಳೆ, ಮಾತನಾಡುತ್ತಾ ನಿಂತಿದ್ದಾಗ ತೆರೆದ ಚರಂಡಿಗೆ ಅವರು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಒಡಿಶಾ ಸಿಎಂ ನವೀನ್ ಪಟ್ನಾಯಕ್​ರಿಂದ 15ನೇ ಹಾಕಿ ವಿಶ್ವಕಪ್​ಗೆ ಚಾಲನೆ

ಚರಂಡಿಯಲ್ಲಿ ಛಾಯಾಗ್ರಾಹಕ ತಕ್ಷಣವೇ ಸ್ಥಳೀಯರು 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ಒಂದೂವರೆ ಗಂಟೆ ಕಳೆದರೂ ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದಿಲ್ಲ. ನಂತರ ಸ್ಥಳಕ್ಕೆ ಬಂದ ಪೊಲೀಸರು ಖಾಸಗಿ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು. ಚಹಾ ಅಂಗಡಿಯ​​ ಮಹಿಳೆಯೊಂದಿಗೆ ಮಾತನಾಡುತ್ತಾ, ಆಕೆಯ ಫೋಟೋ ತೆಗೆಯುತ್ತಿದ್ದಾಗ ಈ ವಿದೇಶಿ ಫೋಟೋ ಜರ್ನಲಿಸ್ಟ್​​ ಚರಂಡಿಯೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಹಾಕಿ ವಿಶ್ವಕಪ್ 2023: ಒಡಿಶಾಗೆ ಬಂದಿಳಿದ ಸ್ಪೇನ್​, ಕೊರಿಯಾ, ಫ್ರಾನ್ಸ್​ ತಂಡಗಳು

ಅಂತಾರಾಷ್ಟ್ರೀಯ ಹಾಕಿ ತಾರೆಗಳು ಭಾಗವಹಿಸುವ ವಿಶ್ವಕಪ್​ ಟೂರ್ನಿ ದೃಷ್ಟಿಯಲ್ಲಿಟ್ಟುಕೊಂಡು ಒಡಿಶಾ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದೆ. ಟೂರ್ನಿ ನಡೆಯುವ ನಗರದಲ್ಲಿ ಸೌಂದರ್ಯೀಕರಣ ಮತ್ತು ವಿದ್ಯುದ್ದೀಕರಣ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿತ್ತು. ಇದಕ್ಕಾಗಿ ನೂರಾರು ಬೀದಿ ವ್ಯಾಪಾರಿಗಳನ್ನು ತೆರವು ಮಾಡಿ, ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು. ಆದರೆ, ಐಟಿಸಿ ಹೋಟೆಲ್ ವೆಲ್​ಕಮ್ ಮುಂಭಾಗದ ರಸ್ತೆಯಲ್ಲಿ ಚರಂಡಿ ಹಾಗೆ ಇತ್ತು ಎಂದು ಹೇಳಲಾಗುತ್ತಿದೆ.

ನಾಳೆಯಿಂದ ಪಂದ್ಯಗಳು ಆರಂಭ: ಒಡಿಶಾದ ರಾಜಧಾನಿ ಭುವನೇಶ್ವರದ ಕಳಿಂಗ ಕ್ರೀಡಾಂಗಣ ಮತ್ತು ರೊರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಾಳೆಯಿಂದ ಹಾಕಿ ವಿಶ್ವಕಪ್​ ಪಂದ್ಯಗಳು ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್, ನೆದರ್​​ಲ್ಯಾಂಡ್​, ನ್ಯೂಜಿಲ್ಯಾಂಡ್, ಮಲೇಷ್ಯಾ ಮತ್ತು ಚಿಲಿ, ಇಂಗ್ಲೆಂಡ್, ಸ್ಪೇನ್, ವೇಲ್ಸ್ ತಂಡಗಳು ಪಾಲ್ಗೊಂಡಿವೆ. ಆತಿಥೇಯ ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ:ಹಾಕಿ ವಿಶ್ವಕಪ್​ ಗೆದ್ದರೆ ಭಾರತದ ಆಟಗಾರರಿಗೆ ತಲಾ 1 ಕೋಟಿ ನಗದು ಬಹುಮಾನ: ನವೀನ್ ಪಟ್ನಾಯಕ್ ಘೋಷಣೆ

Last Updated : Jan 12, 2023, 9:25 PM IST

ABOUT THE AUTHOR

...view details