ನವದೆಹಲಿ:ಎಫ್‌ಐಎ ರೇಸಿಂಗ್ ಸ್ಪರ್ಧೆಯಲ್ಲಿ 16 ವರ್ಷದ ಬಾಲಕಿ ಮುಸ್ಕಾನ್ ಜುಬ್ಬಲ್ ಉತ್ತಮ ಸಾಧನೆ ಮಾಡಿದ್ದಾರೆ. 'ಗರ್ಲ್ಸ್ ಆನ್ ಟ್ರ್ಯಾಕ್ ಇನ್ ಇಂಡಿಯಾ' ವತಿಯಿಂದ ನಡೆದ ಮೂರು ಸುತ್ತುಗಳಲ್ಲಿ ವಿಜೇತರಾಗಿದ್ದಾರೆ. ಕಾರ್ಟಿಂಗ್ ಸ್ಲಾಲೋಮ್ ಹಾಗೂ ಸಿಮ್ ರೇಸಿಂಗ್‌ನಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಆರನೇ ವಯಸ್ಸಿನಿಂದಲೂ ತಾನು ರೇಸಿಂಗ್ ಕಾರುಗಳಿಂದ ಆಕರ್ಷಿತಳಾಗಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಮುಸ್ಕಾನ್ ಜುಬ್ಬಲ್.
ಎನ್‌ಸಿಆರ್ ಮೂಲದ ಮುಸ್ಕಾನ್ ಜುಬ್ಬಲ್, ಫರಿದಾಬಾದ್‌ನ ಶಿವ ನಾಡರ್ ಶಾಲೆಯಲ್ಲಿ 11 ನೇ ತರಗತಿ ವಿದ್ಯಾರ್ಥಿನಿ. ಅವರು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಎಂಆರ್ಎಫ್ ಎಂಎಂಎಸ್ಸಿ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 'ಅತ್ಯುತ್ತಮ ಮಹಿಳಾ ಚಾಲಕಿ' ಪ್ರಶಸ್ತಿಯನ್ನು ಗೆದ್ದು ಕಾರ್ಟಿಂಗ್ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. "ಮೊದಲ ವರ್ಷದಲ್ಲಿ ಮಾಡಿದ ಈ ಸಾಧನೆಗಳು ಕ್ರೀಡೆಯಲ್ಲಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ನಂತರ ನಾನು ಹಿಂತಿರುಗಿ ನೋಡಲಿಲ್ಲ. ನನಗೆ ಇದು ಕೇವಲ ಕ್ರೀಡೆಯಲ್ಲ, ಆದರೆ ಉತ್ಸಾಹ" ಎಂದು ಅವರು ಹೇಳಿತ್ತಾರೆ.
ಮೋಟಾರು ಕ್ರೀಡೆಗಳಿಗೆ ಮಲತಾಯಿಯ ಧೋರಣೆ: ರೇಸಿಂಗ್ ಅನ್ನು ತನ್ನ ಪೂರ್ಣ ಸಮಯದ ವೃತ್ತಿಯನ್ನಾಗಿ ಮಾಡಲು ಬಯಸುತ್ತಿರುವ ಜುಬ್ಬಲ್ ಅವರು ರೋಹಿತ್ ಖನ್ನಾ ಅವರಲ್ಲಿ ತರಬೇತಿ ಪಡೆದ್ದಾರೆ. ಮೋಟಾರು ಕ್ರೀಡೆಗಳು ಭಾರತದಲ್ಲಿ ಕ್ರೀಡೆಯಾಗಿ ಗುರುತಿಸಲ್ಪಟ್ಟಿದ್ದರೂ ಸಹ ಮಲತಾಯಿ ಧೋರಣೆಯಲ್ಲಿಯೇ ಮುಂದುವರಿಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಖೇಲೋ ಇಂಡಿಯಾದಿಂದ ಯಾವುದೇ ಬೆಂಬಲ ಲಭಿಸಿಲ್ಲ. ಈ ಕ್ರೀಡೆಗಳಿಗೆ ಹೆಚ್ಚಿನ ಬೆಂಬಲವು ದೊರೆತರೆ ಯುವ ಚಾಲಕರಿಗೆ ತುಂಬಾ ಅನುಕೂಲವಾಗತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಮೋಟಾರ್‌ಸ್ಪೋರ್ಟ್ ಫೆಡರೇಶನ್ ಸಹಾಯ ಮಾಡಬೇಕು. ಜೊತೆಗೆ ಕುಟುಂಬವು ವೈಯಕ್ತಿಕ ಬೆಂಬಲವನ್ನು ನೀಡಬೇಕು. ಇತ್ತೀಚೆಗೆ, ನನ್ನ ತಾಯಿ ಮತ್ತು ನಾನು 30ಕ್ಕೂ ಹೆಚ್ಚು ಮಹಿಳೆಯರಿಗೆ ಆಟೋಕ್ರಾಸ್‌ನಲ್ಲಿ ತರಬೇತಿ ನೀಡಲು ಕಾಶ್ಮೀರಕ್ಕೆ ಪ್ರಯಾಣಿಸಿದೆವು. ನಾವು ದೇಶದಲ್ಲಿ ಮೋಟಾರ್‌ಸ್ಪೋರ್ಟ್ ವಾತಾವರಣ ನಿರ್ಮಿಸಲು ಕೊಡುಗೆ ನೀಡಲು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.