ಟೋಕಿಯೋ (ಜಪಾನ್):ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಾಲು ಸಾಲು ಪದಕಗಳು ಬರುತ್ತಿದ್ದು, ಇಂದು ನಡೆದ ಪುರುಷರ P1 - 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್-1ರಲ್ಲಿ ಭಾರತ ಶೂಟರ್ ಸಿಂಗ್ರಾಜ್ ಅದಾನ ಅವರು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಪದಕ ಇದಾಗಿದ್ದು, 19 ವರ್ಷದ ಅವನಿ ಲೇಖಾರಾ ನಿನ್ನೆ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೇ ಶೂಟಿಂಗ್‌ನಲ್ಲಿ ಬಂಗಾರ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಿಂಗ್ರಾಜ್ ಅದಾನ ಅವರು 10 ಶಾಟ್‌ಗಳಲ್ಲಿ ಟಾಪ್-3 ಸ್ಥಾನಕ್ಕೆ ಏರಿದ್ದರು. ಮೊದಮೊದಲು 9.1, 9.6 ಮೀಟರ್ ಗುರಿಯಿಟ್ಟಿದ್ದ ಸಿಂಗ್ರಾಜ್ ನಂತರ 8.6 ಮೀಟರ್ ಗುರಿಯಿಂದಾಗಿ ಹಿಂದುಳಿದರು. ಆದರೆ ಕೊನೆಯ ಎರಡು ಶಾಟ್ಗಳು 10.0 ಮತ್ತು 10.0 ಮೀಟರ್ ಗುರಿ ತಲುಪಿತಾದರೂ ಉಳಿದ ಇಬ್ಬರು ಚೀನಿ ಆಟಗಾರರ ಅಂಕಗಳನ್ನು ಮೀರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮೂರನೇ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟುಕೊಂಡರು.