ಕರ್ನಾಟಕ

karnataka

ETV Bharat / sports

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್​ಶಿಪ್​ನಲ್ಲಿ ಸೆಮೀಸ್​​​ಗೆ ಸಿಂಧು ಲಗ್ಗೆ.. ಸೋತ್ರು ಪದಕ ಖಚಿತ! - ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಸೆಮಿಫೈನಲ್​ ಪ್ರವೇಶಿಸಿದ್ದು, ಈ ಮೂಲಕ ಪದಕ ಖಚಿತಪಡಿಸಿದ್ದಾರೆ..

Sindhu enters BAC semifinals
Sindhu enters BAC semifinals

By

Published : Apr 29, 2022, 5:04 PM IST

ಮನಿಲಾ(ಫಿಲಿಫೈನ್ಸ್​​​) :ಭಾರತದ ತಾರಾ ಶಟ್ಲರ್‌ ಪಿ ವಿ ಸಿಂಧು ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್​​ನಲ್ಲಿ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಇಂದು ನಡೆದ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಚೀನಾದ ಹಿ ಬಿಂಗ್‌ ಜಿಯಾವ್‌ ವಿರುದ್ಧ 21-9 13-21 21-19 ಗೇಮ್​ಗಳ ಅಂತರದಿಂದ ಜಯಗಳಿಸಿದರು.

ಕೋವಿಡ್​​ನಿಂದಾಗಿ ಎರಡು ವರ್ಷಗಳ ಬಳಿಕ ನಡೆದ ಬ್ಯಾಡ್ಮಿಂಟನ್​ ಏಷ್ಯಾ ಚಾಂಪಿಯನ್​​ಶಿಪ್​ನಲ್ಲಿ ಸಿಂಧು ಅತ್ಯುತ್ತಮ ಪ್ರದರ್ಶನ ನೀಡ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಸೆಮಿಫೈನಲ್​ಗೆ ಲಗ್ಗೆ ಹಾಕಿರುವ ಸಿಂಧು, ಮುಂದಿನ ಪಂದ್ಯದಲ್ಲಿ ಸೋಲು ಕಂಡ್ರೂ ಕೂಡ ಕಂಚಿನ ಪದಕಕ್ಕೆ ಮುತ್ತಿಕ್ಕಲಿದ್ದಾರೆ. ಈ ಹಿಂದೆ 2014ರಲ್ಲಿ ಈ ಟೂರ್ನಿಯಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ:ಕಳಪೆ ಬ್ಯಾಟಿಂಗ್ ಫಾರ್ಮ್​ನಲ್ಲಿರುವ ರೋಹಿತ್​, ವಿರಾಟ್​ ಬಗ್ಗೆ ಗಂಗೂಲಿ ಹೇಳಿದ್ದೇನು?

ಈ ಹಿಂದೆ 2014ರ ಬ್ಯಾಡ್ಮಿಂಟನ್​ ಏಷ್ಯಾ ಚಾಂಪಿಯನ್​ಶಿಪ್​ನ ಗಿಮ್ಚಿಯಾನ್ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ನಾಲ್ಕನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ಪಿವಿ ಸಿಂಧು, ಕ್ವಾರ್ಟರ್​ ಫೈನಲ್​ನಲ್ಲಿ ಸಿಂಗಾಪುರದ ಕೆಳ ಶ್ರೇಯಾಂಕದ ಯು ಯಾನ್ ಜಸ್ಲಿನ್ ಹೂಯ್​ ವಿರುದ್ಧ ಗೆಲುವು ಸಾಧಿಸಿದ್ದರು.

ABOUT THE AUTHOR

...view details