ಮುಲ್ಹೆಮ್ ಆ್ಯನ್ ಡರ್ ರುಹ್ರ್ (ಜರ್ಮನಿ):ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು 2ನೇ ಸುತ್ತಿನಲ್ಲಿ ಆಘಾತಕಾರಿ ಸೋಲು ಕಂಡು ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಟೂರ್ನಿಯಲ್ಲಿ 7ನೇ ಶ್ರೇಯಾಂಕ ಪಡೆದಿದ್ದ 2019ರ ವಿಶ್ವಚಾಂಪಿಯನ್ ಚೀನಾದ ಜಾಂಗ್ ಯಿ ಮನ್ ವಿರುದ್ಧ 14-21, 21-15, 14-21ರಲ್ಲಿ ಸೋಲುಂಡರು. ವಿಶ್ವದ 34ನೇ ಶ್ರೇಯಾಂಕದ ಶಟ್ಲರ್ ವಿರುದ್ಧ ಮೊದಲ ಗೇಮ್ ಸೋತರೂ 2ನೇ ಗೇಮ್ನಲ್ಲಿ ಗೆಲುವು ಸಾಧಿಸಿ ಕಮ್ಬ್ಯಾಕ್ ಮಾಡಿದರಾದರೂ ನಿರ್ಣಾಯಕ ಗೇಮ್ನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.