ನವದೆಹಲಿ:ಭಾರತದ 2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಹೆಚ್.ಎಸ್.ಪ್ರಣಯ್ ಯುನೆಕ್ಸ್ ಸನ್ರೈಸ್ ಇಂಡಿಯಾ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ 2ನೇ ಸುತ್ತಿನ ಪಂದ್ಯದಲ್ಲೇ ಸೋಲು ಕಂಡು ನಿರಾಶೆ ಅನುಭವಿಸಿದ್ದಾರೆ.
2012ರ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ 17-19, 9-21ರ ಅಂತರದಲ್ಲಿ ಭಾರತದವರೇ ಆದ 111 ಶ್ರೇಯಾಂಕದ ಮಾಳವಿಕಾ ಬನ್ಸೋದ್ ವಿರುದ್ಧ ಕೇವಲ 34 ನಿಮಿಷಗಳಲ್ಲಿ ಪ್ರತಿರೋಧ ತೋರದೆ ಸೋಲೊಪ್ಪಿಕೊಂಡರು.
ಇನ್ನು ಮಾಜಿ ವಿಶ್ವಚಾಂಪಿಯನ್ ಪಿ.ವಿ.ಸಿಂಧು ಭಾರತದ ಸಹ ಶಟ್ಲರ್ ಇರಾ ಶರ್ಮಾ ವಿರುದ್ಧ 21-0, 21-10 ಗೇಮ್ಗಳ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಿಂಧು, ತಮ್ಮ ಮುಂದಿನ ಸುತ್ತಿನಲ್ಲಿ ಆಶ್ಮಿತಾ ಚಹಿಲಾ ವಿರುದ್ಧ ಸೆಣಸಾಡಲಿದ್ದಾರೆ.