ಮಾಂಟ್ರಿಯಲ್ (ಕೆನಡಾ): ವಿಶ್ವದ ಮಾಜಿ ನಂ.1 ಆಟಗಾರ್ತಿ ಸಿಮೋನಾ ಹ್ಯಾಲೆಪ್ ಅವರು ತಮ್ಮ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ನ್ಯಾಷನಲ್ ಬ್ಯಾಂಕ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವದ ಟಾಪ್ 10 ಆಟಗಾರರ ಪಟ್ಟಿಗೆ ಪ್ರವೇಶಿಸಿದ್ದಾರೆ.
2016 ಮತ್ತು 2018 ರ ಚಾಂಪಿಯನ್ ಆಗಿದ್ದ ಹ್ಯಾಲೆಪ್, ಬ್ರೆಜಿಲ್‌ನ ಬೀಟ್ರಿಜ್ ಹಡ್ಡಾಡ್ ಮಾಯಾ ಅವರನ್ನು, 2 ಗಂಟೆ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 6-3, 2-6, 6-3 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಪಡೆದರು. ಈ ಮೂಲಕ ತಮ್ಮ ವೃತ್ತಿ ಜೀವನದ WTA ಟೂರ್ ಸಿಂಗಲ್ಸ್ ಪ್ರಶಸ್ತಿಯನ್ನು ಪಡೆದರು.