ಬೀಜಿಂಗ್(ಚೀನಾ):ಕೊರೊನಾ ವೈರಸ್ನಿಂದಾಗಿ ಬೀಜಿಂಗ್ ಒಲಿಂಪಿಕ್ಸ್‌ನ ಒಲಿಂಪಿಕ್ ಜ್ಯೋತಿಯ ಓಟವನ್ನು ಈಗಾಗಲೇ ಮೊಟಕುಗೊಳಿಸಲು ನಿರ್ಧರಿಸಲಾಗಿದ್ದು, ಕೇವಲ ಮೂರು ದಿನಗಳ ಈ ಒಲಿಂಪಿಕ್ ಜ್ಯೋತಿಯ ಯಾತ್ರೆ ಬುಧವಾರದಿಂದ ಆರಂಭವಾಗಿದ್ದು, 80 ವರ್ಷದ ಮಾಜಿ ಅಥ್ಲೀಟ್ ಲುವೊ ಝಿಹುವಾನ್ ಅವರು ಒಲಿಂಪಿಕ್ ಜ್ಯೋತಿಯನ್ನು ಹಿಡಿದು ಓಡುವ ಮೂಲಕ ಈ ಯಾತ್ರೆ ಆರಂಭವಾಗಿದೆ.
ಒಲಿಂಪಿಕ್ ಫಾರೆಸ್ಟ್ ಪಾರ್ಕ್‌ನಲ್ಲಿ ಒಲಿಂಪಿಕ್ ಜ್ಯೋತಿಯ ಓಟ ಆರಂಭವಾಗಿದ್ದು, ಚೀನಾದ ಮೂರು ಒಲಿಂಪಿಕ್ ವಲಯಗಳಲ್ಲಿ ಒಲಿಂಪಿಕ್ ಜ್ಯೋತಿಯನ್ನು ತೆಗೆದುಕೊಂಡು ಹೋಗಲಾಗಿದೆ. ಬೀಜಿಂಗ್ನಿಂದ ಯಾಂಕ್ವಿಂಗ್ ಜಿಲ್ಲೆಗೆ ಮತ್ತು ಮತ್ತು ಅಂತಿಮವಾಗಿ ಹೆಬೈ ಪ್ರಾಂತ್ಯದ ಝಾಂಗ್‌ಜಿಯಾಕೌಗೆ ತೆರಳುತ್ತದೆ.
ಕಳೆದ ವರ್ಷದ ಒಲಿಂಪಿಕ್ಸ್‌ನಲ್ಲಿ ಟೋಕಿಯೋ ಒಲಿಂಪಿಕ್ ವೇಳೆ ಉಂಟಾಗಿದ್ದ ಕೊರೊನಾ ಸಂಕಷ್ಟದಂತೆಯೇ, ಬೀಜಿಂಗ್ ಒಲಿಂಪಿಕ್ಸ್ ಮೇಲೆಯೂ ಕೊರೊನಾ ಪರಿಣಾಮ ಬೀರಿದೆ. ಆಯ್ದ ವೀಕ್ಷಕರನ್ನು ಮಾತ್ರ ಈವೆಂಟ್‌ಗಳಿಗೆ ಹಾಜರಾಗಲು ಅನುಮತಿಸಲಾಗುತ್ತದೆ. ಅಥ್ಲೀಟ್‌ಗಳು, ಅಧಿಕಾರಿಗಳು, ಸಿಬ್ಬಂದಿ ಮತ್ತು ಪತ್ರಕರ್ತರು ಸಾರ್ವಜನಿಕರಿಂದ ಪ್ರತ್ಯೇಕವಾಗಿ ಇರಬೇಕೆಂದು ಚೀನಾ ಈಗಾಗಲೇ ಘೋಷಿಸಿದೆ.