ಕರ್ನಾಟಕ

karnataka

ETV Bharat / sports

ಶೂಟಿಂಗ್​ ವರ್ಲ್ಡ್​ ಕಪ್​: ಟ್ರ್ಯಾಪ್​ ಮಿಶ್ರ ಸ್ಪರ್ಧೆಯಿಂದ ಹೊರ ಬಿದ್ದ ಭಾರತ ತಂಡ - ಲಕ್ಷ್ಯ ಶಿಯೋರನ್​

ಶೂಟಿಂಗ್​ ವರ್ಲ್ಡ್​ ಕಪ್​ನ ಟ್ರ್ಯಾಪ್​ ಮಿಶ್ರ ಸ್ಪರ್ಧೆಯಿಂದ ಭಾರತ ತಂಡ ಹೊರ ಬಿದ್ದಿದೆ.

Cairo  Shooting World Cup  India  Rajeshwari Kumari  Lakshay Sheoran  ಕೈರೋ  ಶೂಟಿಂಗ್​ ವರ್ಲ್ಡ್​ ಕಪ್​ ರಾಜೇಶ್ವರಿ ಕುಮಾರಿ  ಭಾರತದ ರಾಜೇಶ್ವರಿ ಕುಮಾರಿ  ಲಕ್ಷ್ಯ ಶಿಯೋರನ್​ ಭಾರತದ ಲಕ್ಷ್ಯ ಶಿಯೋರನ್​
ಶೂಟಿಂಗ್​ ವರ್ಲ್ಡ್​ ಕಪ್​

By

Published : Mar 4, 2021, 10:01 AM IST

ಕೈರೋ: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ಶಾಟ್​ಗನ್​ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ರಾಜೇಶ್ವರಿ ಕುಮಾರಿ ಮತ್ತು ಲಕ್ಷ್ಯ ಶಿಯೋರನ್ ಟ್ರ್ಯಾಪ್ ಮಿಶ್ರ ಸ್ಪರ್ಧೆಯ ಮೂರನೇ ಮತ್ತು ಅಂತಿಮ ಅರ್ಹತಾ ಸುತ್ತಿಗೆ ಪ್ರವೇಶಿಸಿ ಹೊರ ಬಿದ್ದಿದ್ದಾರೆ.

ಇಬ್ಬರೂ ಆಟಗಾರರು ಪಂದ್ಯದಲ್ಲಿ ತಲಾ 21 ಅಂಕಗಳನ್ನು ಪಡೆಯುವ ಮೂಲಕ ಆರನೇ ಸುತ್ತು ಮತ್ತು ಪದಕ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ.

ರಷ್ಯಾ ಮತ್ತು ಆತಿಥೇಯ ಈಜಿಪ್ಟ್ 150 ಅಂಕಗಳಲ್ಲಿ 139 ಮತ್ತು 138 ಅಂಕಗಳನ್ನು ಗಳಿಸಿ ಅರ್ಹತಾ ಸುತ್ತಿನ ಚಿನ್ನದ ಪದಕಕ್ಕೆ ಮುತ್ತಿಟ್ಟರೇ, ಸ್ಲೊವಾಕಿಯಾ ಮತ್ತು ಸ್ಪೇನ್‌ನ ತಂಡಗಳು ತಲಾ 137 ಮತ್ತು 136 ಅಂಕಗಳನ್ನು ಪಡೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟವು. ಭಾರತೀಯ ಜೋಡಿ 135 ಅಂಕದೊಂದಿಗೆ ತನ್ನ ಪ್ರಯಾಣ ಮುಗಿಸಿತು.

ಸ್ಪರ್ಧೆಯಲ್ಲಿ ಎರಡನೇ ಭಾರತೀಯ ತಂಡವನ್ನು ಪ್ರತಿನಿಧಿಸುವ ಮನೀಷಾ ಕೀರ್ ಮತ್ತು ಕೈನಾನ್ ಚೆನೈ ತಂಡ ಒಟ್ಟು 133 ಅಂಕಗಳೊಂದಿಗೆ 14 ತಂಡಗಳಲ್ಲಿ ಒಂಬತ್ತನೇ ಸ್ಥಾನ ಪಡೆದು ನಿರಾಸೆಯನುಭವಿಸಿತು.

ಕೈರೋ ವಿಶ್ವಕಪ್​ನ ಅಂತಿಮ ಸ್ಪರ್ಧೆಗಳು ಗುರುವಾರ ನಡೆಯಲಿವೆ. ಪುರುಷರ ಸ್ಕೀಟ್ ತಂಡದ ಸ್ಪರ್ಧೆಯಲ್ಲಿ ಭಾರತ ಇದುವರೆಗೆ ಒಂದು ಪದಕ ಪಡೆದಿದೆ. ವಿಶ್ವಕಪ್ ಹಂತದಲ್ಲಿ ರಷ್ಯಾ ಇದುವರೆಗೆ ಮೂರು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳೊಂದಿಗೆ ಪ್ರಾಬಲ್ಯ ಸಾಧಿಸಿದೆ.

ABOUT THE AUTHOR

...view details