ನವದೆಹಲಿ: ಭಾರತದ ಅಂಗದ್ ವೀರ್ಸಿಂಗ್ ಬಜ್ವಾ ಮತ್ತು ಗನೆಮತ್ ಶೆಖೋನ್ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ ಮಿಶ್ರ ಸ್ಕೀಟ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಸ್ವರ್ಣ ಪದಕಗಳ ಸಂಖ್ಯೆಯನ್ನು 7ಕ್ಕೇರಿಸಿದ್ದಾರೆ.
ಮಂಗಳವಾರ ಈ ಜೋಡಿ ಕಜಾಕಿಸ್ತಾನದ ಓಲ್ಗಾ ಪನರಿನಾ ಮತ್ತು ಅಲೆಕ್ಸಾಂಡರ್ ಯೆಶೆಂಕೊ ವಿರುದ್ಧ 33-29ರಲ್ಲಿ ಗೆಲ್ಲುವ ಮೂಲಕ ಭಾರತದ ಖಾತೆಗೆ ಮತ್ತೊಂದು ಚಿನ್ನದ ಪದಕ ಸೇರಿಸಿದರು.
ಈ ವಿಶ್ವಕಪ್ನಲ್ಲಿ ಗನೆಮತ್ ಶೆಕೋನ್ ಗೆದ್ದ ಮೂರನೇ ಪದಕ ಇದಾಗಿದೆ. ಅವರು ವುಮೆನ್ಸ್ ಸ್ಕೀಟ್ ವಿಭಾಗದಲ್ಲಿ ಕಂಚು ಮತ್ತು ವುಮೆನ್ಸ್ ತಂಡದ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.