ನವದೆಹಲಿ: ತುಘಲಕಾಬಾದ್ನಲ್ಲಿರುವ ಕರಣಿ ಸಿಂಗ್ ಶೂಟಿಂಗ್ ರೆಂಜ್ನ ಮೈದಾನದಲ್ಲಿ ಇಬ್ಬರು ಶೂಟರ್ಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಬಾಬರ್ ಖಾನ್ ಮತ್ತು ಯೋಗಿಂದ್ರ ಪಾಲ್ ಎಂಬ ಶೂಟರ್ಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಮೈದಾನದಲ್ಲಿ ತರಬೆತಿ ನಡೆಯುತ್ತಿರುವ ವೇಳೆ ಒಬ್ಬರ ನಂತರ ಒಬ್ಬರು ಶೂಟ್ ಮಾಡುವ ಮೂಲಕ ಮತ್ತೊಬ್ಬರಿಗೆ ಅವಕಾಶ ನೀಡಬೇಕಾಗುತ್ತದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.
ಮಾತಿನ ಚಕಮಕಿ ನಡೆಸಿದ ಇಬ್ಬರು ಶೂಟರ್ಗಳು ತಳ್ಳಾಟ ನೂಕಾಟ ನಡೆಸಿದ್ದಲ್ಲದೇ ಹೊಡೆದಾಡಿಕೊಂಡಿರುವ ದೃಶ್ಯ ಅಲ್ಲೆ ಇದ್ದವರ ಮೊಬೈಲ್ನಲ್ಲಿ ಸೆರೆಯಾಗಿದೆ. ಸ್ಥಳದಲ್ಲಿದ್ದ ಇತರ ಶೂಟರ್ಗಳು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ, ರಣೀಂದರ್ ಸಿಂಗ್, ಇದೊಂದು ದುರದೃಷ್ಟಕರ ಘಟನೆ. ಮೈದಾನದಲ್ಲಿ ಇತರ ಆಟಗಾರರು ಶೂಟಿಂಗ್ ತರಬೇತಿ ಪಡೆಯುತ್ತಿರುವ ವೇಳೆಯಲ್ಲೇ ಇಂತಹದ್ದೊಂದು ಘಟನೆ ನಡೆದಿದೆ. ಇಬ್ಬರು ಶೂಟರ್ಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.