ಅಲ್ ಐನ್ (ಯುಎಇ):ಅಲ್ ಐನ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ನ ಅಂತಿಮ ದಿನದಂದು ಚಿನ್ನವನ್ನು ಗೆಲ್ಲುವ ಮೂಲಕ ಭಾರತದ ಭರವಸೆಯ ಶೂಟರ್ ಮನೀಶ್ ನರ್ವಾಲ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಸ್‌ಎಚ್ 1 ಫೈನಲ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ನರ್ವಾಲ್ ಹೊಸ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
ಪಿ 1 ಪುರುಷರ 10 ಮೀ ಏರ್ ಪಿಸ್ತೂಲ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಸಿಂಗರಾಜ್ ಚಿನ್ನವನ್ನು ಗೆದ್ದಿದ್ದರು. ಈಗ ನರ್ವಾಲ್ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಭಾರತದ ಎರಡನೇ ಚಿನ್ನದ ಪದಕ ತಂದು ಕೊಡುವಲ್ಲಿ.
ಸಿಡ್ನಿ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ನರ್ವಾಲ್, ಪ್ಯಾರಾಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಗಳಾದ ಇರಾನಿನ ಸಾರೆಹ್ ಜವಾನ್‌ಮಾರ್ಡಿ ಮತ್ತು ಉಕ್ರೇನ್‌ನ ಒಲೆಕ್ಸಿ ಡೆನುಸಿಯುಕ್ ವಿರುದ್ಧ 229.1 ಅಂಕಗಳನ್ನು ಪಡೆದರು. ಒಸಿಜೆಕ್‌ನಲ್ಲಿ ಸೆರ್ಬಿಯಾದ ರಾಸ್ಟ್ಕೊ ಜೋಕಿಕ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ನರ್ವಾಲ್ ಅಳಿಸಿ ಹಾಕಿದರು.
223.4 ಪಾಯಿಂಟ್ಗಳನ್ನು ಪಡೆದ ಜವಾನ್ ಮಾರ್ಡಿಗಿಂತ 5.7 ಅಂಕಗಳು ಹೆಚ್ಚಾಗಿ ಪಡೆದ 19 ವರ್ಷದ ನರ್ವಾಲ್ ಉತ್ತಮ ಪ್ರದರ್ಶನ ನೀಡಿದರು. ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಸಿಂಗ್‌ರಾಜ್ 201.7 ಅಂಕಗಳೊಂದಿಗೆ ಕಂಚು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮನೀಶ್ರಿಂದ ಉತ್ತಮ ಸ್ಕೋರ್ ನಿರೀಕ್ಷಿಸುತ್ತಿದ್ದೆ. ಇಂದಿನ ಅವರ ಆಟ ಟೋಕಿಯೋ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಆತ್ಮವಿಶ್ವಾಸ ಮತ್ತು ಸಿದ್ಧತೆಯನ್ನು ಹೆಚ್ಚಿಸುತ್ತದೆ ಎಂದು ರಾಷ್ಟ್ರೀಯ ಮುಖ್ಯ ತರಬೇತುದಾರ ಜೆ.ಪಿ.ನೌತಿಯಾಲ್ ಹೇಳಿದ್ದಾರೆ.