ಕರ್ನಾಟಕ

karnataka

ETV Bharat / sports

ಡೋಪಿಂಗ್ ಟೆಸ್ಟ್​ನಲ್ಲಿ ಸಿಕ್ಕಿಬಿದ್ದ ಜಾವೆಲಿನ್​ ಪಟು: ಶಿವಪಾಲ್​ ಸಿಂಗ್​ಗೆ 4 ವರ್ಷ ಶಿಕ್ಷೆ - ಶಿವಪಾಲ್​ ಸಿಂಗ್​ಗೆ 4 ವರ್ಷ ಶಿಕ್ಷೆ

ಭಾರತದ ಜಾವೆಲಿನ್​ ಥ್ರೋ ಆಟಗಾರ ಶಿವಪಾಲ್​ ಸಿಂಗ್​ ಡೋಪಿಂಗ್​ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಾರಣ ಅವರಿಗೆ 4 ವರ್ಷ ಅಮಾನತು ಶಿಕ್ಷೆ ವಿಧಿಸಲಾಗಿದೆ.

Shivpal Singh banned for four years
ಜಾವೆಲಿನ್​​​ ಪಟು ಶಿವಪಾಲ್​ ಸಿಂಗ್​ಗೆ 4 ವರ್ಷ ಶಿಕ್ಷೆ

By

Published : Oct 3, 2022, 9:57 AM IST

ನವದೆಹಲಿ:ಡೋಪಿಂಗ್​ ಪ್ರಕರಣದಲ್ಲಿ ಸಿಕ್ಕಿಬಿದ್ದ ಭಾರತದ ಜಾವೆಲಿನ್ ಆಟಗಾರ ಶಿವಪಾಲ್ ಸಿಂಗ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನಾಲ್ಕು ವರ್ಷ ಅಮಾನತು ಮಾಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ವೇಳೆ ಶಿವಪಾಲ್​ರ ಡೋಪಿಂಗ್​ ಸ್ಯಾಂಪಲ್​ ಪಡೆಯಲಾಗಿತ್ತು. ಈ ವೇಳೆ ಉದ್ದೀಪನ ಮದ್ದು ದೃಢಪಟ್ಟ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.

ನಿಷೇಧಿತ ವಸ್ತುವಾದ ಮೆಥಾಂಡಿನೋನ್ ಅನ್ನು ಶಿವಪಾಲ್ ಸಿಂಗ್​ ಅವರು ಪಡೆದಿರುವುದು ಪರೀಕ್ಷೆಯಲ್ಲಿ ದೃಢಟ್ಟಿದೆ. ಇದರಿಂದ ಅವರನ್ನು ಎಲ್ಲ ಕ್ರೀಡಾಕೂಟದಿಂದ ಮುಂದಿನ 4 ವರ್ಷಗಳವರೆಗೆ ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶದ 27 ವರ್ಷದ ಅಥ್ಲೀಟ್‌ ಕಳೆದ ವರ್ಷ ಅಕ್ಟೋಬರ್ 21 ರಿಂದಲೇ ಅಮಾನತಿನಲ್ಲಿದ್ದರು. ಇದೀಗ ಆ ಅವಧಿಯನ್ನು ಅಕ್ಟೋಬರ್ 2025 ರವರೆಗೆ ವಿಸ್ತರಿಸಲಾಗಿದೆ.

2019 ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಶಿವಪಾಲ್ 86.23 ಮೀ ಜಾವೆಲಿನ್​ ಎಸೆದು ಬೆಳ್ಳಿ ಪದಕವನ್ನು ಗೆದ್ದಿದ್ದರು. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ 12 ನೇ ಸ್ಥಾನ ಪಡೆದಿದ್ದರು. ಒಲಿಂಪಿಕ್ಸ್ ನಂತರ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ.

ಓದಿ:ಟಿ20 ಸರಣಿ: ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿಗೆ ಸರಣಿ ಗೆದ್ದ ಭಾರತ

ABOUT THE AUTHOR

...view details