ಕರ್ನಾಟಕ

karnataka

ETV Bharat / sports

ಹಂಗೇರಿಯನ್ ಓಪನ್ ಟೇಬಲ್ ಟೆನಿಸ್: ಬೆಳ್ಳಿಗೆದ್ದ ಶರತ್​- ಸತಿಯನ್​ ಜೋಡಿ - ಅಚಂತಾ ಶರತ್​ ಕಮಲ್- ಜ್ಞಾನಶೇಕರನ್ ​ಸತಿಯನ್

ಹಂಗೇರಿಯಾ ಬುದಪೆಸ್ಟ್​ನಲ್ಲಿ ಶನಿವಾರ ನಡೆದ ಫೈನಲ್​ನಲ್ಲಿ ಅಚಂತಾ ಶರತ್​ ಕಮಲ್​ -ಜಿ. ಸತಿಯನ್ ಜೋಡಿ 5-11,9-11,11-8, 9-11(1-3) ಅಂತರದಲ್ಲಿ ಜರ್ಮನಿಯ ಬೆನೆಡಿಕ್ತ್‌ ದುಡಾ ಮತ್ತು ಪ್ಯಾಟ್ರಿಕ್ ಫ್ರಾಂಜಿಸ್ಕಾ ವಿರುದ್ಧ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

Sharath-Sathiyan
Sharath-Sathiyan

By

Published : Feb 23, 2020, 9:34 PM IST

ಬುದಪೆಸ್ಟ್(ಹಂಗೇರಿ): ಐಟಿಟಿಎಫ್ ವಿಶ್ವ ಟೂರ್ ಹಂಗೇರಿಯನ್ ಓಪನ್ ಟೇಬಲ್ ಟೆನಿಸ್​ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಭಾರತದ ಜೋಡಿ ಅಚಂತಾ ಶರತ್​ ಕಮಲ್ ಹಾಗೂ ಜಿ. ಸತಿಯನ್ ಬೆಳ್ಳಿಪದಕ ಮುಡಿಗೇರಿಸಿಕೊಂಡಿದ್ದಾರೆ.

ಹಂಗೇರಿಯಾ ಬುದಪೆಸ್ಟ್​ನಲ್ಲಿ ನಡೆದ ಫೈನಲ್​ನಲ್ಲಿ ಅಚಂತಾ ಶರತ್​ ಕಮಲ್​ -ಜಿ. ಸತಿಯನ್ ಜೋಡಿ 5-11,9-11,11-8, 9-11(1-3) ಅಂತರದಲ್ಲಿ ಜರ್ಮನಿಯ ಬೆನೆಡಿಕ್ತ್‌ ದುಡಾ ಮತ್ತು ಪ್ಯಾಟ್ರಿಕ್ ಫ್ರಾಂಜಿಸ್ಕಾ ವಿರುದ್ಧ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮುನ್ನ ಸೆಮಿಫೈನಲ್ಸ್ ಹಣಾಹಣಿಯಲ್ಲಿ ಸತಿಯನ್ ಹಾಗೂ ಶರತ್​ ಕಮಲ್​ ಜೋಡಿ ಅಗ್ರ ಶ್ರೇಯಾಂಕದ ಕ್ವಾನ್ ಕಿಟ್ ಮತ್ತು ಹಾಂಕಾಂಗ್​ನ ವಾಂಗ್ ಚುನ್​ ಜೋಡಿಯನ್ನು 3-2ರಲ್ಲಿ ಮಣಿಸಿ ಫೈನಲ್ ಪ್ರವೇಶ ಮಾಡಿತ್ತು.

ಅನುಭವಿ ಶರತ್​ ಕಮಲ್​ಗೆ ಬುದಪೆಸ್ಟ್​ನಲ್ಲಿ ಸಿಕ್ಕ ಎರಡನೇ ಪದಕ ಇದಾಗಿದೆ. ಇದಕ್ಕು ಮೊದಲೇ ಮಿಕ್ಸ್​ ಡಬಲ್ಸ್​ನಲ್ಲಿ ಮನಿತ ಬತ್ರ ಜೊತೆಗೂಡಿ ಕಂಚು ಗೆದ್ದಿದ್ದರು.

ಮಿನಿ-ಕ್ಯಾಡೆಟ್ ಗರ್ಲ್ಸ್ ಸಿಂಗಲ್​ ವಿಭಾಗದಲ್ಲಿ 10 ವರ್ಷದ 5ನೇ ತರಗತಿ ಓದುತ್ತಿರುವ ಮಥನ್​ ರಾಜನ್ ಕಂಚಿನ ಪದಕ ಪಡೆದಿದ್ದಾರೆ. ಇವರು ರಷ್ಯಾದ ಲುಲಿಯಾ ಪೊಗುವ್​ಕಿನ ವಿರುದ್ಧ ಸೆಮಿಫೈನಲ್​ನಲ್ಲಿ 3-1ರಲ್ಲಿ ಸೋಲು ಕಂಡು ನಿರಾಶೆಯನುಭಿಸಿದ್ದಾರೆ.

ABOUT THE AUTHOR

...view details