ನವದೆಹಲಿ:ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾದ ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಟೇಬಲ್ ಟೆನಿಸ್ ಹಿರಿಯ ಆಟಗಾರ ಶರತ್ ಕಮಲ್ ಅವರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.
ಚದುರಂಗದಾಟದಲ್ಲಿ ಸಂಚಲನ ಮೂಡಿಸಿರುವ ತಮಿಳುನಾಡಿನ ಗ್ರ್ಯಾಂಡ್ಮಾಸ್ಟರ್ ಆರ್ ಪ್ರಗ್ನಾನಂದ್, ಬಾಕ್ಸಿಂಗ್ ಚಾಂಪಿಯನ್ ನಿಖರ್ ಜರೀನ್ರಿಗೆ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 25 ಆಟಗಾರರಿಗೆ ಅರ್ಜುನ್, 7 ತರಬೇತುದಾರರಿಗೆ ದ್ರೋಣಾಚಾರ್ಯ, ನಾಲ್ವರಿಗೆ ಧ್ಯಾನ್ಚಂದ್ರ ಜೀವಮಾನ ಸಾಧನೆ, ಮೂವರಿಗೆ ದ್ರೋಣಾಚಾರ್ಯ ಜೀವಮಾನ ಪ್ರಶಸ್ತಿ ನೀಡಲಾಯಿತು.
ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ:ಶರತ್ ಕಮಲ್ (ಟೇಬಲ್ ಟೆನಿಸ್)
ಅರ್ಜುನ ಪ್ರಶಸ್ತಿ:ಸೀಮಾ ಪೂನಿಯಾ (ಅಥ್ಲೆಟಿಕ್ಸ್), ಅಲ್ಡಸ್ ಪಾಲ್ (ಅಥ್ಲೆಟಿಕ್ಸ್), ಅವಿನಾಶ್ ಸೇಬಲ್ (ಅಥ್ಲೆಟಿಕ್ಸ್), ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್), ಎಚ್ಎಸ್ ಪ್ರಣಯ್ (ಬ್ಯಾಡ್ಮಿಂಟನ್), ಅಮಿತ್ (ಬಾಕ್ಸಿಂಗ್), ನಿಖತ್ ಜರೀನ್ (ಬಾಕ್ಸಿಂಗ್), ಭಕ್ತಿ ಕುಲಕರ್ಣಿ (ಚೆಸ್), ಆರ್ ಪ್ರಗ್ನಾನಂದ (ಚೆಸ್), ಡೀಪ್ ಗ್ರೇಸ್ ಏಸ್ (ಹಾಕಿ), ಸುಶೀಲಾ ದೇವಿ (ಜುಡೋ), ಸಾಕ್ಷಿ ಕುಮಾರಿ (ಕಬಡ್ಡಿ), ಯಾನ್ ಮೋನಿ ಸೈಕಿಯಾ (ಲಾನ್‌ಬಾಲ್), ಸಾಗರ್ ಕೈಲಾಶ್ ವೋವಲ್ಕರ್(ಮಲ್ಲಕಂಬ), ಎಲವೆನಿಲ್ ವಲರಿವನ್ (ಶೂಟಿಂಗ್), ಓಂಪ್ರಕಾಶ್ ಮಿಥರ್ವಾಲ್ (ಶೂಟಿಂಗ್), ಶ್ರೀಜಾ ಅಕುಲಾ(ಟೇಬಲ್ ಟೆನಿಸ್), ವಿಕಾಸ್ ಠಾಕೂರ್ (ವೇಟ್‌ಲಿಫ್ಟಿಂಗ್), ಅಂಶು (ಕುಸ್ತಿ), ಸರಿತಾ (ಕುಸ್ತಿ), ಪರ್ವೀನ್ (ವುಶು), ಮಾನಸಿ ಜೋಶಿ (ಪ್ಯಾರಾ ಬ್ಯಾಡ್ಮಿಂಟನ್), ತರುಣ್ ಧಿಲ್ಲೋನ್ (ಪ್ಯಾರಾ ಬ್ಯಾಡ್ಮಿಂಟನ್), ಸ್ವಪ್ನಿಲ್ ಪಾಟೀಲ್ (ಪ್ಯಾರಾ ಈಜು), ಜೆರ್ಲಿನ್ ಅನಿಕಾ ಜೆ (ಕಿವುಡ ಬ್ಯಾಡ್ಮಿಂಟನ್).
ದ್ರೋಣಾಚಾರ್ಯ ಪ್ರಶಸ್ತಿ:ಜೀವನಜೋತ್ ಸಿಂಗ್ ತೇಜಾ (ಬಿಲ್ಲುಗಾರಿಕೆ), ಮೊಹಮ್ಮದ್ ಅಲಿ ಕಮರ್ (ಬಾಕ್ಸಿಂಗ್), ಸುಮಾ ಶಿರೂರು (ಪ್ಯಾರಾ ಶೂಟಿಂಗ್), ಸುಜಿತ್ ಮಾನ್ (ಕುಸ್ತಿ).
ದ್ರೋಣಾಚಾರ್ಯ ಜೀವಮಾನ ಪ್ರಶಸ್ತಿ:ದಿನೇಶ್ ಲಾಡ್ (ಕ್ರಿಕೆಟ್), ಬಿಮಲ್ ಘೋಷ್ (ಫುಟ್‌ಬಾಲ್), ರಾಜ್ ಸಿಂಗ್ (ಕುಸ್ತಿ).
ಧ್ಯಾನಚಂದ್ ಜೀವಮಾನ ಸಾಧನೆ ಪ್ರಶಸ್ತಿ:ಅಶ್ವಿನಿ ಅಕ್ಕುಂಜೆ (ಅಥ್ಲೆಟಿಕ್ಸ್), ಧರಂವೀರ್ ಸಿಂಗ್ (ಹಾಕಿ), ಬಿ ಸಿ ಸುರೇಶ್ (ಕಬಡ್ಡಿ), ನೀರ್ ಬಹದ್ದೂರ್ ಗುರುಂಗ್ (ಪ್ಯಾರಾ ಅಥ್ಲೆಟಿಕ್ಸ್).
ಓದಿ:ಐಸಿಸಿ ಏಕದಿನ ಶ್ರೇಯಾಂಕ: ಅಯ್ಯರ್, ಗಿಲ್ಗೆ ಪ್ಲಸ್.. ವಿರಾಟ್, ರೋಹಿತ್ಗೆ ಮೈನಸ್