ಕರ್ನಾಟಕ

karnataka

ETV Bharat / sports

30 ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ಮಾಜಿ ಟೆನ್ನಿಸ್​ ಆಟಗಾರ್ತಿ ಬಿಚ್ಚಿಟ್ಟರು ಕರಾಳ ಸತ್ಯ​

ಕ್ರೀಡಾ ಕ್ಷೇತ್ರದಲ್ಲಿ ಆಟಗಾರರು, ಆಟಗಾರ್ತಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಜಿ ಟೆನ್ನಿಸ್​​ ಆಟಗಾರ್ತಿ ಆಂಡ್ರಿಯಾ ಜೇಗರ್ ಮಾತನಾಡಿದ್ದಾರೆ. ತಾನೂ ಕೂಡ ಮಹಿಳಾ ಸಿಬ್ಬಂದಿಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ.

ಮಾಜಿ ಟೆನಿಸ್​ ಆಟಗಾರ್ತಿ ಆಂಡ್ರಿಯಾ ಜೇಗರ್​
ಮಾಜಿ ಟೆನಿಸ್​ ಆಟಗಾರ್ತಿ ಆಂಡ್ರಿಯಾ ಜೇಗರ್​

By

Published : Jun 26, 2022, 6:09 PM IST

1980ರ ದಶಕದಲ್ಲಿ ಟೆನ್ನಿಸ್​ ಆಟಗಾರ್ತಿಯಾಗಿದ್ದ ಆಂಡ್ರಿಯಾ ಜೇಗರ್ ಅವರು ಮಹಿಳಾ ಟೆನ್ನಿಸ್​ ಸಂಸ್ಥೆಯ ಸಿಬ್ಬಂದಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಪಟ್ಟ ಬಗ್ಗೆ ಹೇಳಿಕೊಂಡಿದ್ದಾರೆ. 57 ವರ್ಷದ ಜೇಗರ್​ ತಾವು 16 ವರ್ಷದವರಿದ್ದಾಗ ಮಹಿಳಾ ಟೆನ್ನಿಸ್​ ಸಂಸ್ಥೆಯ ಅಧಿಕಾರಿಗಳಿಂದ ಕನಿಷ್ಠ 30ಕ್ಕೂ ಅಧಿಕ ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಆಪಾದಿಸಿದ್ದಾರೆ.

ಲೈಂಗಿಕ ಕಿರುಕುಳದ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಅವರು, 1981ರಲ್ಲಿ 14 ರಿಂದ 19ರ ವಯೋಮಾನದ ಟೆನ್ನಿಸ್​ ಆಟಗಾರ್ತಿಯರಲ್ಲಿ ತಾವು ವಿಶ್ವ ನಂ.2 ಸ್ಥಾನದಲ್ಲಿದ್ದೆ. ಈ ವೇಳೆ ನಾನು ಹಲವಾರು ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದೆ. ನನ್ನೊಂದಿಗೆ ಟೆನ್ನಿಸ್​ ಸಂಸ್ಥೆಯ ಮಹಿಳಾ ಸಿಬ್ಬಂದಿಯೂ ಆಗಮಿಸುತ್ತಿದ್ದರು. ಈ ವೇಳೆ ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಲಾಕರ್​ ಕೋಣೆಗಳಲ್ಲಿ ಹೆಚ್ಚಿನ ಕಿರುಕುಳ ನೀಡುತ್ತಿದ್ದರು. ನಾನು 16 ವರ್ಷದವಳಿದ್ದಾಗಲೇ ನನಗೆ ತಿಳಿಯದೇ ಮದ್ಯ ಸೇವಿಸಿದ್ದೆ. ಅಲ್ಲದೇ, ಅಧಿಕಾರಿಗಳು ತನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಚುಂಬಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ನಾನು ಇದನ್ನು ವಿರೋಧಿಸಿದಾಗಲೆಲ್ಲಾ ಬೆದರಿಕೆ ಹಾಕುತ್ತಿದ್ದರು. ನನ್ನ ಕ್ರೀಡಾ ಜೀವನವನ್ನೇ ಮುಗಿಸಿಬಿಡುವುದಾಗಿ ಹೆದರಿಸಿದ್ದರು. ಈ ರೀತಿಯ ಘಟನೆಗಳು ನಡೆಯಬಾರದು. ಅದರಲ್ಲೂ 16 ವರ್ಷದ ಆಟಗಾರ್ತಿಯರ ಜೊತೆ ಇದೆಲ್ಲಾ ನಡೆಯಬಾರದು. ಅಧಿಕಾರಿಗಳಿಂದಲೇ ಈ ರೀತಿಯ ದೌರ್ಜನ್ಯದಿಂದ ಕ್ರೀಡೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಗಾಯದಿಂದಾಗಿ 19ನೇ ವಯಸ್ಸಿನಲ್ಲಿಯೇ ನಿವೃತ್ತಿಯಾಗುವ ಮೊದಲು ಜೇಗರ್ 10 ಪ್ರಶಸ್ತಿಗಳನ್ನು ಗೆದ್ದಿದ್ದರು. 1982ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಮತ್ತು 1983 ರ ವಿಂಬಲ್ಡನ್ ಫೈನಲ್‌ನಲ್ಲಿ ಮಾರ್ಟಿನಾ ನವರಾಟಿಲೋವಾ ವಿರುದ್ಧ ಸೋತಿದ್ದರು. ಇದಲ್ಲದೇ, ಜೇಗರ್ 3 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಸೆಮಿಫೈನಲಿಸ್ಟ್ ಆಗಿದ್ದರು.

ಓದಿ:ರಣಜಿ ಫೈನಲ್​: ಮಧ್ಯಪ್ರದೇಶಕ್ಕೆ ಐತಿಹಾಸಿಕ ರಣಜಿ ಟ್ರೋಫಿ.. ಬಲಿಷ್ಠ ಮುಂಬೈಗೆ ಗರ್ವಭಂಗ

For All Latest Updates

ABOUT THE AUTHOR

...view details