ಕರ್ನಾಟಕ

karnataka

ETV Bharat / sports

ಚೀನಾದ ವಿಶ್ವದಾಖಲೆ ಉಡೀಸ್​​.. ಸ್ಕೇಟಿಂಗ್​​ನಲ್ಲಿ ಹೊಸ ರೆಕಾರ್ಡ್​​ ಬರೆದ ಪುಣೆಯ 7 ವರ್ಷದ ಪುಟಾಣಿ! - ಈಟಿವಿ ಭಾರತ ಕನ್ನಡ

ಮಹಾರಾಷ್ಟ್ರದ ಪುಣೆಯ 7 ವರ್ಷದ ಬಾಲಕಿ ಸ್ಕೇಟಿಂಗ್​ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಈ ಮೂಲಕ ಚೀನಾದ ಬಾಲಕಿಯಿಂದ ರಚನೆಯಾಗಿದ್ದ ರೆಕಾರ್ಡ್ ಇದೀಗ ಬ್ರೇಕ್​ ಆಗಿದೆ.

seven year old deshan
seven year old deshan

By

Published : Jul 29, 2022, 8:16 PM IST

ಪುಣೆ(ಮಹಾರಾಷ್ಟ್ರ):ಲಿಂಬೋ ಸ್ಕೇಟಿಂಗ್‌ನಲ್ಲಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆಯುವ ಮೂಲಕ ಪುಣೆಯ 7 ವರ್ಷದ ಪುಟಾಣಿ ಚೀನಾದ ವಿಶ್ವ ದಾಖಲೆ ಬ್ರೇಕ್​ ಮಾಡಿದ್ದಾರೆ. ಏಕಕಾಲದಲ್ಲಿ 20 ಕಾರುಗಳ ಅಡಿ ವೇಗವಾಗಿ ಸ್ಕೇಟ್ ಮಾಡುವ ಮೂಲಕ ಗಿನ್ನೆಸ್ ಬುಕ್​ ಆಫ್​ ರೆಕಾರ್ಡ್​​ಗೆ ಸೇರಿದ್ದಾಳೆ. ಈ ಹಿಂದೆ ಚೀನಾದ 14 ವರ್ಷದ ಬಾಲಕಿಯಿಂದ ನಿರ್ಮಾಣಗೊಂಡಿದ್ದ ದಾಖಲೆ ಬ್ರೇಕ್​ ಆಗಿದೆ. ಪುಣೆಯಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ದೇಶ್ನಾ ಒಟ್ಟಿಗೆ 20 ಕಾರುಗಳ ಕೆಳಗೆ ಸ್ಕೇಟ್ ಮಾಡಿದ್ದಾರೆ. ಕೇವಲ 13:74 ಸೆಕೆಂಡ್​​​​ಗಳಲ್ಲಿ 193 ಅಡಿ ವಿಸ್ತಾರ ಪೂರ್ಣಗೊಳಿಸಿದ್ದಾರೆ.

ವಿಶ್ವದಾಖಲೆ ಬರೆದ 7 ಪುಣಾಣಿ

ಸ್ಕೇಟಿಂಗ್​​ನಲ್ಲಿ ಹೊಸ ದಾಖಲೆ ಬರೆದ 7 ವರ್ಷದ ಪುಟಾಣಿ:ಈ ಹಿಂದೆ 2015ರಲ್ಲಿ ಚೀನಾದ 14 ವರ್ಷದ ಬಾಲಕಿ 14:15 ಸೆಕೆಂಡ್​​​​ಗಳಲ್ಲಿ ಇದೇ ದೂರವನ್ನ ಕ್ರಮಿಸಿ, ವಿಶ್ವದಾಖಲೆ ನಿರ್ಮಿಸಿದ್ದಳು. ಮಗಳ ಸಾಧನೆ ಬಗ್ಗೆ ಮಾತನಾಡಿರುವ ತಂದೆ ಆದಿತ್ಯ, ಸ್ಕೇಟಿಂಗ್​​ನಲ್ಲಿ ಮಗಳು ಕಳೆದ ಎರಡು ವರ್ಷಗಳಿಂದ ಅಭ್ಯಾಸ ಮಾಡ್ತಿದ್ದಾಳೆ. ಆರು ತಿಂಗಳಿಂದ ಲಿಂಬೋ ಸ್ಕೇಟಿಂಗ್​​ನಲ್ಲಿ ದಾಖಲೆ ಬರೆಯಲು ತಯಾರಿ ನಡೆಸಿದ್ದಾಳೆ. ಇದಕ್ಕಾಗಿ ಆಕೆಯ ತರಬೇತುದಾರ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದರು.

ಹತ್ತಾರು ಪ್ರಶಸ್ತಿ ಗೆದ್ದಿರುವ 7 ವರ್ಷದ ಬಾಲೆ

ಕಳೆದ ಒಂದು ತಿಂಗಳಿಂದ ಕಾಟ್ರಾಜ್ ಕೊಂಡ್ವಾ ರಸ್ತೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದು,ಅಭ್ಯಾಸ ನಡೆಸಲು ಸರಿಯಾದ ಸ್ಥಳವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ದೇಶ್ನಾ ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದು, 40 ಅಧಿಕ ಪದಕ ಹಾಗೂ 16ಕ್ಕೂ ಹೆಚ್ಚು ಪ್ರಮಾಣಪತ್ರ ಗೆದ್ದಿದ್ದಾರೆ.

ABOUT THE AUTHOR

...view details