ಕರ್ನಾಟಕ

karnataka

ETV Bharat / sports

ಟೋಕಿಯೋಗೆ ಬಂದಿಳಿದ ಸರ್ಬಿಯಾದ ಅಥ್ಲೀಟ್​ಗೆ ಕೋವಿಡ್​ ಸೋಂಕು - ಸರ್ಬಿಯಾ ರೋವರ್​ಗೆ ಕೊರೊನಾ

ಶನಿವಾರ ಏರ್​ಪೋರ್ಟ್​ ಕ್ವಾರಂಟೈನ್​ ಕೇಂದ್ರದಲ್ಲಿ ನಡೆಸಿದ ಆ್ಯಂಟಿಜನ್​ ಟೆಸ್ಟ್​ನಲ್ಲಿ ಸರ್ಬಿಯಾದ ಐವರು ಸದಸ್ಯರ ತಂಡದಲ್ಲಿದ್ದ 30 ವರ್ಷದ ಸ್ಪರ್ಧಿಗೆ ಸೋಂಕು ಇರುವುದು ಖಚಿತವಾಗಿದೆ.

ಟೋಕಿಯೋ ಒಲಿಂಪಿಕ್ಸ್ 2021
ಟೋಕಿಯೋ ಒಲಿಂಪಿಕ್ಸ್ 2021

By

Published : Jul 4, 2021, 6:00 PM IST

ಟೋಕಿಯೊ: ಜುಲೈ 23ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕಾಗಿ ಶನಿವಾರ ಜಪಾನ್‌ನ ಹನೇಡಾ ವಿಮಾನ ನಿಲ್ದಾಣದಕ್ಕೆ ಬಂದಿಳಿದ ಸರ್ಬಿಯಾದ ರೋವಿಂಗ್(ಹಾಯಿದೋಣಿ) ತಂಡದ ಸದಸ್ಯರೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಇದು ವಿದೇಶದಿಂದ ಟೋಕಿಯೋಗೆ ಬರುತ್ತಿದ್ದಂತೆ ಕೊರೊನಾ ಸೋಂಕಿಗೊಳಪಟ್ಟ ಎರಡನೇ ಪ್ರಕರಣವಾಗಿದೆ. ಕಳೆದ ತಿಂಗಳು ಉಗಾಂಡಾದ ಇಬ್ಬರು ಕ್ರೀಡಾಪಟುಗಳಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು. ಮೊದಲ ಪ್ರಕರಣ ನರಟಾ ವಿಮಾನ ನಿಲ್ದಾಣದಲ್ಲಿ ಕಂಡು ಬಂದರೆ, ಮತ್ತೊಂದು ಪ್ರಕರಣ ಕೆಲವು ದಿನಗಳ ಬಳಿಕ ಕಂಡುಬಂದಿತ್ತು.

ಟೋಕಿಯೋ ಒಲಿಂಪಿಕ್ಸ್ 2021

ಕ್ಯೋಡೋ ನ್ಯೂಸ್ ವೆಬ್​ಸೈಟ್ ವರದಿಯ ಪ್ರಕಾರ, ಶನಿವಾರ ಏರ್​ಪೋರ್ಟ್​ ಕ್ವಾರಂಟೈನ್​ ಸ್ಟೇಷನ್​ನಲ್ಲಿ ನಡೆಸಿದ ಆ್ಯಂಟಿಜನ್​ ಟೆಸ್ಟ್​ನಲ್ಲಿ ಸರ್ಬಿಯಾದ ಐವರು ಸದಸ್ಯರ ತಂಡದಲ್ಲಿದ್ದ 30 ವರ್ಷದ ಸ್ಪರ್ಧಿಗೆ ಸೋಂಕು ಇರುವುದು ಖಚಿತವಾಗಿದೆ. ಪ್ರಸ್ತುತ ಆ ರೋವರ್​ರನ್ನು ಐಸೊಲೇಷನ್​ನಲ್ಲಿ ಇರಿಸಲಾಗಿದೆ. ಉಳಿದವರಿಗೆ ವೈದ್ಯಕೀಯ ಸೌಲಭ್ಯವಿರುವ ಸ್ಥಳಕ್ಕೆ ಎರಡು ವಾರಗಳ ಕ್ವಾರಂಟೈನ್​ಗಾಗಿ​ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಐದು ಸದಸ್ಯರ ಸರ್ಬಿಯಾ ರೋವರ್ಸ್​ ತಂಡವು ಒಲಿಂಪಿಕ್ಸ್‌ ಪೂರ್ವ ತಯಾರಿಗಾಗಿ ನ್ಯಾಂಟೊ ನಗರಕ್ಕೆ ಪ್ರಯಾಣಿಸಬೇಕಿತ್ತು. ಜುಲೈ 18ರವರೆಗೆ ಅವರು ಅಲ್ಲಿ ತರಬೇತಿ ಕ್ಯಾಂಪ್​ನಲ್ಲಿರಬೇಕಿತ್ತು.

ಇದನ್ನೂ ಓದಿ: ಜೈಲಿನಲ್ಲಿ ಟಿವಿ ಬೇಕೆಂದು ಬೇಡಿಕೆಯಿಟ್ಟ ಕೊಲೆ ಆರೋಪಿ ಕುಸ್ತಿಪಟು ಸುಶೀಲ್ ಕುಮಾರ್!

ABOUT THE AUTHOR

...view details