ಕರ್ನಾಟಕ

karnataka

ETV Bharat / sports

ಮಲೇಷಿಯನ್ ಓಪನ್ ಸ್ಕ್ವಾಷ್ ಚಾಂಪಿಯನ್‌ಶಿಪ್ : ಎದುರಾಳಿ ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಸೌರವ್! - ಮಲೇಷಿಯನ್​ ಓಪನ್​ ಸ್ಕ್ವಾಷ್​​ ಚಾಂಪಿಯನ್​​ಶಿಪ್​ ಗೆದ್ದ ಸೌರವ್​​​

ಮಲೇಷಿಯನ್​ ಓಪನ್​​ ಸ್ಕ್ವಾಷ್​ ಚಾಂಪಿಯನ್​​ಶಿಪ್​​ನಲ್ಲಿ ಅಗ್ರ ಕ್ರಮಾಂಕದ ಆಟಗಾರನಿಗೆ ಸೋಲಿನ ರುಚಿ ತೋರಿಸಿರುವ ಭಾರತದ ಸೌರವ್​​ ಘೋಷಾಲ್​ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ..

Saurav Ghosal clinches Malaysian Open title
Saurav Ghosal clinches Malaysian Open title

By

Published : Nov 27, 2021, 9:04 PM IST

ಹೈದರಾಬಾದ್​​ : ಮಲೇಷಿಯನ್​ ಓಪನ್​ ಸ್ಕ್ವಾಷ್​​ ಚಾಂಪಿಯನ್​​ಶಿಪ್​ ಫೈನಲ್​​ನಲ್ಲಿ ಭಾರತದ ಸೌರವ್​​ ಘೋಷಾಲ್​​​ ಎದುರಾಳಿಗೆ ಸೋಲಿನ ರುಚಿ ತೋರಿಸಿದ್ದು, ಈ ಮೂಲಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಗ್ರ ಶ್ರೇಯಾಂಕದ ಮಿಗುಯೆಲ್​​ ರೊಡ್ರಿಗಸ್​​​ ವಿರುದ್ಧ ಜಯ ಸಾಧಿಸಿ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಸಾಧನೆಗೂ ಪಾತ್ರರಾಗಿದ್ದಾರೆ.

ಇಂದು ನಡೆದ ಪುರುಷರ ಸಿಂಗಲ್ಸ್​​​ ಫೈನಲ್​​​ ಪಂದ್ಯದಲ್ಲಿ ಸ್ಕ್ವಾಷ್​ ತಾರೆ ಅದ್ಭುತ ಪ್ರದರ್ಶನ ನೀಡಿದ್ದು, ಕೊಲಂಬಿಯಾದ ಅಗ್ರ ಶ್ರೇಯಾಂಕದ ರೋಡ್ರಿಗಸ್​ ವಿರುದ್ಧ 55 ನಿಮಿಷಗಳಲ್ಲಿ 11-7, 11-8 ಮತ್ತು 13-11 ಅಂತರದಿಂದ ಗೆಲುವು ಸಾಧಿಸಿದರು. ಜೊತೆಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಚಾಂಪಿಯನ್​ ಕಿರೀಟ ತೊಟ್ಟಿದ್ದಾರೆ.

ಇದನ್ನೂ ಓದಿರಿ:IND-SA ಸರಣಿ ನಡೆಸಲು ಆದ್ಯತೆ.. ಆದರೆ, ಪ್ಲೇಯರ್ಸ್​​​ ಸುರಕ್ಷತೆ ಮುಖ್ಯ ಎಂದ ಬಿಸಿಸಿಐ ಖಜಾಂಚಿ..

40ನೇ ಮಲೇಷಿಯನ್​ ಓಪನ್​ ಸ್ಕ್ವಾಷ್​​ನಲ್ಲಿ ಭಾಗಿಯಾಗಿದ್ದ ಭಾರತದ ಸೌರವ್​ ಘೋಷಾಲ್​​ ಈ ಸಾಧನೆ ಮಾಡಿರುವ ಮೊದಲ ಭಾರತೀಯನಾಗಿದ್ದು, ಅಂತ್ಯಕ ಕಠಿಣ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ 2018ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕ್ವಾಷ್​​​ ಓಪನ್​​ನಲ್ಲಿ ಸೌರಬ್​​ ಪ್ರಶಸ್ತಿ ಗೆದ್ದಿದ್ದರು.

ABOUT THE AUTHOR

...view details